ಹಿರಿಯ ನಾಗರಿಕರ ಕ್ರೀಡಾಕೂಟ: ಹಿರಿಯರನ್ನು ಕಡೆಗಣಿಸದೆ ಗೌರವಿಸಿ : ಹಿರಿಯ ನ್ಯಾಯಾಧೀಶೆ ನೂರುನ್ನಿಸ ಸಲಹೆ

September 27, 2019
2:45 PM

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಹಿರಿಯರ ಕಡೆಗಣನೆ ಹೆಚ್ಚಾಗುತ್ತಿರುವುದು ಬೇಸರದ ಬೆಳವಣಿಗೆ. ಹಿರಿಯರನ್ನು ಕಡೆಗಣಿಸದೆ ಗೌರವಿಸುವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಹಿರಿಯ ನಾಗರಿಕರ ಕ್ರೀಡಾಕೂಟ : ಹಿರಿಯರನ್ನು ಕಡೆಗಣಿಸದೆ ಗೌರವಿಸಿ : ಹಿರಿಯ ನ್ಯಾಯಾಧೀಶೆ ನೂರುನ್ನಿಸ ಸಲಹೆಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಸಲಹೆ ಮಾಡಿದ್ದಾರೆ.

 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇವರ ಸಂಯುಕ್ತಾಶ್ರಯದಲ್ಲಿ ಹಿರಿಯ ನಾಗರಿಕ ದಿನಾಚರಣೆ ಪ್ರಯುಕ್ತ ಗುರುವಾರ ನಗರದ ಗಾಂಧಿ ಮೈದಾನದಲ್ಲಿ ನಡೆದ ಹಿರಿಯ ನಾಗರಿಕರ ಕ್ರೀಡಾಕೂಟ ಮತ್ತು ಸಾಂಸ್ಕತಿಕ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೀವನವು ನಿಂತ ನೀರಾಗಬಾರದು, ಚಟುವಟಿಕೆಯಿಂದ ಕೂಡಿರಬೇಕು. ಹಿರಿಯರಲ್ಲಿ ಲವಲವಿಕೆ ಇದ್ದರೆ ಹೆಚ್ಚು ಸಂತಸ ಸಿಗುತ್ತದೆ. ಹಿರಿಯರು ತಮ್ಮ ಅನುಭವನ್ನು ಮನೆಯಲ್ಲಿರುವ ಕಿರಿಯರಿಗೆ ತಿಳಿಸಿಕೊಡಬೇಕು. ಇದರಿಂದ ಕಿರಿಯರಲ್ಲಿ ಜೀವನದ ಒಳಗುಟ್ಟು ಅರ್ಥವಾಗುತ್ತದೆ. ಜೊತೆಗೆ ಹಿರಿಯರೊಬ್ಬರು ಮನೆಯಲ್ಲಿದ್ದರೆ ಶ್ರೇಯಸ್ಸು ಹೆಚ್ಚುತ್ತದೆ ಎಂದು ಜಿಲ್ಲಾ ಕಾನೂನು ಜಿಲ್ಲಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ನುಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ರಾಧಾ ಅವರು ಮಾತನಾಡಿ ಹಿರಿಯ ನಾಗರಿಕರು ತುಂಬಾ ಚಟುವಟಿಕೆಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಹಿರಿಯ ನಾಗರಿಕರು ಸಮಾಜಕ್ಕೆ ಉತ್ತಮ ಮೌಲ್ಯ ನೀಡುತ್ತಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಿರಿಯರಿಗಾಗಿ ಹಗಲು ಯೋಗ ಕ್ಷೇಮ ಕೇಂದ್ರ ತೆರೆಯಲಾಗಿದೆ ಎಂದರು.

ಹಿರಿಯ ನಾಗರಿಕರಾದ ಮಾದಪ್ಪ ಅವರು ತಮ್ಮ ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ, 1942 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ತಮ್ಮ ಅನುಭವ ಹಂಚಿಕೊಂಡರು.

 

ಹಿರಿಯ ನಾಗರಿಕರು ಒಂದೆಡೆ ಸೇರಿ ಹಲವು ಸಮಸ್ಯೆಗಳು, ಬೇಡಿಕೆಗಳು ಹಾಗೂ ಪರಿಹಾರ ಮಾರ್ಗೋಪಾಯ ಮತ್ತಿತರ ಚರ್ಚೆ ನಡೆಸಲು ಹಿರಿಯರಿಗಾಗಿ ನಿವೇಶನ ಅಗತ್ಯವಿದ್ದು, ನಿವೇಶನ ಒದಗಿಸಿ ‘ಹಿರಿಯ ನಾಗರಿಕರ ಭವನ’ ನಿರ್ಮಾಣಕ್ಕೆ ಅವಕಾಶ ಮಾಡಬೇಕಿದೆ ಎಂದು ಹಿರಿಯರಾದ ಮಾದಪ್ಪ ಅವರು ಮನವಿ ಮಾಡಿದರು.

ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ಸಂಪತ್‍ಕುಮಾರ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ವೇದಿಕೆಯ ಸದಸ್ಯರು ಇತರರು ಹಾಜರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗುತ್ತಿಗಾರಿನಲ್ಲಿ ಮಹಿಳೆಯರ ನೇತೃತ್ವದಲ್ಲಿ ಗೇರು ಹಣ್ಣಿನ ಜ್ಯೂಸ್‌ ಘಟಕ ಆರಂಭ – ಮಹಿಳೆಯರ ನೇತೃತ್ವದಲ್ಲಿ ಗ್ರಾಮೀಣ ಉದ್ಯಮಕ್ಕೆ ಹೊಸ ದಿಕ್ಕು
April 29, 2026
10:45 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕೆ ರೋಗದ ವಿರುದ್ಧ ಹೋರಾಟ – ಸಮುದಾಯ ಮಟ್ಟದಲ್ಲಿ ಕ್ರಿಯಾ ಯೋಜನೆಗೆ ಸಂಸದ ಬ್ರಿಜೇಶ್ ಚೌಟ ಕರೆ
April 29, 2026
10:05 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28-04-2026 | ಎಪ್ರಿಲ್ 29ರಿಂದ ಕರ್ನಾಟಕದಲ್ಲಿ ಮಳೆ ಚುರುಕು! ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ
April 28, 2026
2:11 PM
by: ಸಾಯಿಶೇಖರ್ ಕರಿಕಳ
ಹೆಸರಘಟ್ಟ ಹಕ್ಕಿಜ್ವರ ನಿಯಂತ್ರಣದಲ್ಲಿ | ಜನರಿಗೆ ಯಾವುದೇ ಆತಂಕ ಬೇಡ ಎಂದ ಆರೋಗ್ಯ ಇಲಾಖೆ
April 27, 2026
9:34 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror