Advertisement
ಸುದ್ದಿಗಳು

ಅಂಕತ್ತಡ್ಕ-ಮಂಜುನಾಥನಗರ ರಸ್ತೆ ಅಭಿವೃದ್ದಿಗೆ ಚಾಲನೆ

Share

ಸವಣೂರು: ಬೆಳಂದೂರು ಜಿ.ಪಂ.ವ್ಯಾಪ್ತಿಯ ಸವಣೂರು ಗ್ರಾ.ಪಂ.ಕ್ಕೊಳಪಟ್ಟ ಅಂಕತ್ತಡ್ಕ-ಬಂಬಿಲ-ಮಂಜುನಾಥನಗರ ಸಂಪರ್ಕ ರಸ್ತೆ ಅಭಿವೃದ್ದಿ ಕೆಲಸ ನ.9ರಂದು ಆರಂಭಗೊಂಡಿತು.ಈ ಮೂಲಕ ಈ ಭಾಗದ ಬಹುವರ್ಷಗಳ ಬೇಡಿಕೆಯೊಂದು ಈಡೇರುವ ಹಂತಕ್ಕೆ ಬಂದಿದೆ.

Advertisement
Advertisement
Advertisement
Advertisement

ಲೋಕೋಪಯೋಗಿ ಇಲಾಖೆಯ 5-50 ಅಪೆಂಡಿಕ್ಸ್-ಇ ಯೋಜನೆಯ ಮೂಲಕ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಆರಂಭವಾಗಿದೆ. ಮಳೆಗಾಲದಲ್ಲಿ ಈ ರಸ್ತೆಯೂ ಸಂಪೂರ್ಣವಾಗಿ ಹದೆಗೆಟ್ಟು ಸಂಚರಿಸುವುದೇ ಕಷ್ಟಕರವಾದ ಪರಿಸ್ಥಿತಿ ಇಲ್ಲಿತ್ತು.ಪ್ರತೀ ಬಾರಿಯೂ ಮಳೆಗಾಲದಲ್ಲಿ ಊರಿನ ಪ್ರಮುಖರು ಸೇರಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಕೆಂಪು ಕಲ್ಲು, ದಪ್ಪ ಮರಳು ತಂದು ಹೊಂಡಮುಚ್ಚಿಸಿ, ರಸ್ತೆ ದುರಸ್ಥಿಪಡಿಸುವ ಮೂಲಕ ಸಾರ್ವಜನಿಕರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು.ಮುಂದಕ್ಕೆ ಈ ಸಮಸ್ಯೆ ತಪ್ಪಲಿದೆ.
ಹಿರಿಯರಾದ ಭಾರತಿ ಗ್ರಾಮ ವಿಕಾಸ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ಬಂಬಿಲ ಚಾಲನೆ ನೀಡಿದರು.

Advertisement

ಈ ಸಂದರ್ಭ ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಉಪಾಧ್ಯಕ್ಷ ರವಿಕುಮಾರ್ ಬಿ.ಕೆ,ಮಾಜಿ ಸದಸ್ಯ ಸುಧೀರ್ ಕುಮಾರ್ ರೈ ಕುಂಜಾಡಿ,ಚೈತನ್ಯ ರೈತ ಶಕ್ತಿಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ ಗೌರವ ಸಲಹೆಗಾರ ಸುಧಾಕರ ರೈ ಕುಂಜಾಡಿ,ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ,ನವೀನ್ ಕುಮಾರ್ ರೈ ಕುಂಜಾಡಿ,ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ರೈ  ಬೈಲಾಡಿ,ಸದಸ್ಯರಾದ ಜಯಪ್ರಕಾಶ್,ಪ್ರಶಾಂತ್ ಕುಂಜಾಡಿ,ರುಕ್ಮಯ್ಯ,ಮಂಜುನಾಥನಗರ ಹಿ.ಪ್ರಾ.ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ವಿಮಲಾ,ಸವಿತಾ ಹರೀಶ್ ರೈ ಮೊದಲಾದವರಿದ್ದರು.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಉತ್ಪಾದನೆ ಮತ್ತು ರಫ್ತಿಗೆ ಉತ್ತೇಜನ ನೀಡಲು ನೇಪಾಳ ಚಿಂತನೆ |

ನೇಪಾಳವು ಅಡಿಕೆ ಬೆಳೆ ಹಾಗೂ ಅಡಿಕೆ ರಫ್ತಿನ ಕಡೆಗೆ ರೈತರಿಗೆ ಪ್ರೋತ್ಸಾಹ ನೀಡಲು…

2 hours ago

ಶಿರಾಡಿ ಘಾಟ್‌ ಸುರಂಗ ಮಾರ್ಗ | ಮತ್ತೆ ಸಮಗ್ರ ಯೋಜನಾ ವರದಿಗೆ ಜೀವ |

ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಸಮಗ್ರ ಯೋಜನಾ ವರದಿ…

2 hours ago

ಕಸ್ಟಮ್ಸ್‌ ಗೋದಾಮಿನಿಂದ ಅಡಿಕೆ ಹಾಗೂ ಕಾಳುಮೆಣಸು ಕಳವು |

ಕಸ್ಟಮ್ಸ್‌ ಗೋದಾಮಿನಿಂದ ಸುಮಾರು 40 ಟನ್‌ ಕಾಳುಮೆಣಸು ಹಾಗೂ ಸುಮಾರು 5 ಕೋಟಿ…

2 hours ago

ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |

ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿ ಕಾರ್ಯಕ್ರಮ ಹಾಗೂ ʼಕಲಾ…

22 hours ago

ಹವಾಮಾನ ವರದಿ | 26-12-2024 | ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡದ ವಾತಾವರಣದ | ಜನವರಿಯಲ್ಲಿ ಮಳೆಯ ಸಾಧ್ಯತೆ ಇಲ್ಲ|

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಳ್ಳುತ್ತಿದ್ದು, ಬಂಗಾಳಕೊಲ್ಲಿಯ ಕಡೆಯಿಂದ ಗಾಳಿಯು ಹಿಂಗಾರು ರೀತಿ ಬೀಸುತ್ತಿರುವುದರಿಂದ…

22 hours ago

ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು

ಬಾಂಗ್ಲಾವನ್ನು ಕಟ್ಟಿಹಾಕುವ ಎಲ್ಲಾ ಭೌಗೋಳಿಕ ಅನುಕೂಲಗಳಿದ್ದರೂ ಸರಕಾರವು ಅಂತಹ ಕ್ರಮಗಳಿಗೆ ಉದ್ಯುಕ್ತವಾಗಿಲ್ಲ. ಬಾಂಗ್ಲಾವನ್ನು…

22 hours ago