ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮೊಬೈಲ್, ವಾಚ್ ಇತ್ಯಾದಿಗಳನ್ನು ಕಳುಹಿಸುವ ಬಗ್ಗೆ ಫೋನ್ ನಲ್ಲಿ ಕರೆ ಅಥವಾ ಎಸ್.ಎಂ.ಎಸ್. ಮೂಲಕ ಸಂದೇಶ ಬಂದಿದೆ ಎಂಬ ಕಾರಣಕ್ಕೆ ಅನೇಕ ಸಾರ್ವಜನಿಕರು ಕೆಲವು ಖಾಸಗಿ ಕಂಪನಿಗಳಿಂದ ಪಾರ್ಸಲ್‍ಗಳನ್ನು ವ್ಯಾಲ್ಯೂ ಪೇಯೇಬಲ್ ಪೋಸ್ಟ್ ಅಥವಾ ಬಟಾವಡೆಯ ಸಂದರ್ಭದಲ್ಲಿ ಪಾವತಿಸುವ ವಿಧಾನದ ಮೂಲಕ ತರಿಸಿಕೊಳ್ಳುತ್ತಿದ್ದಾರೆ.
ಆ ಪಾರ್ಸಲ್‍ನಲ್ಲಿ ಮೊಬೈಲ್, ವಾಚ್ ಇತ್ಯಾದಿಗಳ ಬದಲಿಗೆ ಲಕ್ಷ್ಮೀ ಯಂತ್ರ, ಲೋಹದ ಚೂರುಗಳು, ಬಟ್ಟೆ ಇತ್ಯಾದಿಗಳು ಮಾತ್ರ ಇವೆ ಎಂದು ಅಂಚೆ ಕಚೇರಿಗೆ ದೂರು ನೀಡುತ್ತಿದ್ದು, ಸಾರ್ವಜನಿಕರು ಅಂಥಹ ಕಂಪನಿಗಳಿಂದ ವಸ್ತುಗಳನ್ನು ತರಿಸಿಕೊಳ್ಳುವಾಗ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ತಾವೇ ಧೃಢಪಡಿಸಿಕೊಳ್ಳಬೇಕಾಗಿದೆ.
ಅಂಚೆ ಇಲಾಖೆಯು ಈ ನಿಟ್ಟಿನಲ್ಲಿ ಉಂಟಾದ ನಷ್ಟಗಳನ್ನು ತಂಬಿಸಿಕೊಡಲು ಯಾವುದೇ ರೀತಿಯಲ್ಲಿಯೂ ನಿಯಮಾವಳಿಗಳಲ್ಲಿ ಅವಕಾಶ ಇಲ್ಲವೆಂದು ಸಾರ್ವಜನಿಕರು ಗಮನಿಸಬೇಕು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…