Advertisement
ಸುದ್ದಿಗಳು

ಅಂಬೇಡ್ಕರ್ ಭವನ ಕಾಮಗಾರಿ ವಿಳಂಬ : ಪ.ಜಾ, ಪ.ಪಂ ಕುಂದು ಕೊರತೆ ಸಭೆಯಲ್ಲಿ ತಹಶೀಲ್ದಾರ್ ಗರಂ

Share

ಸುಳ್ಯ: ಸುಳ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಗರಂ ಆಗಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಅವರನ್ನು  ಪ್ರಶ್ನಿಸಿದ ಘಟನೆ ಸುಳ್ಯ ತಾಲೂಕು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕುಂದು ಕೊರತೆ ಸಮಿತಿ ಸಭೆಯಲ್ಲಿ ನಡಯಿತು.

Advertisement
Advertisement

ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ವಿಳಂಬ ತೀವ್ರ ಚರ್ಚೆಗೆ ಕಾರಣವಾಯಿತು. ಅಂಬೇಡ್ಕರ್ ಭವನ ಕೂಡಲೇ ಪೂರ್ತಿ ಮಾಡಬೇಕು. ಮುಂದಿನ ಅಂಬೇಡ್ಕರ್ ಜಯಂತಿ ಹೊಸ ಅಂಬೇಡ್ಕರ್ ಭವನದಲ್ಲಿ ನಡೆಯುವಂತಾಗಬೆಕು ಎಂದರು. ಈ ಸಂದರ್ಭದಲ್ಲಿ ಕಾಮಗಾರಿಗೆ ಬಿಡುಗಡೆಯಾದ 75 ಲಕ್ಷ ಅನುದಾನದಲ್ಲಿ ಸಮರ್ಪಕ ಕೆಲಸ ಆಗಿಲ್ಲ ಈ ಕುರಿತು ತನಿಖೆ ನಡೆಸಬೇಕು ಎಂದು ಆನಂದ ಬೆಳ್ಳಾರೆ, ನಂದರಾಜ ಸಂಕೇಶ, ಸುಂದರ ಪಾಟಾಜೆ ಮತ್ತಿತರರು ಸಭೆಯಲ್ಲಿ ಆಗ್ರಹಿಸಿದರು. ಶಾಸಕರ ಸೂಚನೆಯ ಮೇರೆಗೆ ಐದು ಅಂತಸ್ತಿನ ಅಂಬೇಡ್ಕರ್ ಭವನಕ್ಕೆ 3.60 ಕೋಟಿ ವೆಚ್ಚದ ಕ್ರಿಯಾ ಯೋಜನೆ ಆಗಿದೆ. ಆದರೆ ಅಸ್ಟು ಅನುದಾನ ಇಲ್ಲ. ಆರಂಭದಲ್ಲಿ 75 ಲಕ್ಷ ಮತ್ತು ಇದೀಗ 25 ಲಕ್ಷ ಅನುದಾನ ಬಿಡುಗಡೆ ಆಗಿದೆ. 75 ಲಕ್ಷದಲ್ಲಿ 64 ಲಕ್ಷದ ಕಾಮಗಾರಿ ಪೂರ್ತಿಯಾಗಿದೆ ಎಂದು ನಿರ್ಮಿತಿ ಕೇಂದ್ರದ ಇಂಜಿನಿಯರ್ ಹೇಳಿದರು. ಆದರೆ ಈ ಕಾಮಗಾರಿ ಸಮರ್ಪಕವಾಗಿಲ್ಲ ಈ ಕುರಿತು ತಹಶೀಲ್ದಾರ್ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಒಕ್ಕೊರಲ ಆಗ್ರಹ ವ್ಯಕ್ತವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಈ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು. ಅಂಬೇಡ್ಕರ್ ಭವನದ ಅನುದಾನ ಬಿಡುಗಡೆ ಮತ್ತು ಕಾಮಗಾರಿ ನಡೆಸಿದ ವಿವರದ ಕುರಿತು ವಿಸ್ತೃತವಾದ ವರದಿಯನ್ನು ನೀಡುವಂತೆ ನಿರ್ಮಿತಿ ಕೇಂದ್ರದ ಇಂಜಿನಿಯರ್‍ರಿಗೆ ಆದೇಶ ನೀಡಿದರು.

Advertisement

ಹಾಸ್ಟೇಲ್‍ಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು

ಸುಳ್ಯದ ಹಾಸ್ಟೇಲ್‍ಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಸೀಟ್ ನೀಡಬೇಕು. ಹೊರಗಿನ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸೀಟ್ ನೀಡುವ ಕಾರಣ ಸ್ಥಳೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತಿದೆ ಎಂದು ನಂದರಾಜ್ ಸಂಕೇಶ ಹೇಳಿದರು. ಯಾವ ಮಾನದಂಡದಲ್ಲಿ ತಾಲೂಕಿನವರನ್ನು ಕಡೆಗಣಿಸಿ ಹೊರ ತಾಲೂಕಿನವರಿಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು. ಹಾಸ್ಟೆಲ್‍ಗಳ ಸೇರ್ಪಡೆಗೆ ಆನ್‍ಲೈನ್ ಓಪನ್ ಆಗ್ತಾ ಇಲ್ಲ ಎಂದು ದೂರಿದರು. ಈ ಕುರಿತು ಸಭೆಯಲ್ಲಿ ಚರ್ಚೆ ನಡೆದು ಯಾವ ಯಾವ ತಾಲೂಕಿನವರನ್ನು ಸೇರ್ಪಡೆ ಮಾಡಿದ್ದೀರಿ ಇದರ ಪಟ್ಟಿ ಕೊಡಿ ಎಂದು ನಂದರಾಜ ಸಂಕೇಶ, ಆನಂದ ಬೆಳ್ಳಾರೆ, ದಾಸಪ್ಪ ಅಜ್ಜಾವರ ಮತ್ತಿತರರು ಆಗ್ರಹಿಸಿದರು. ಹಾಸ್ಟೇಲ್‍ಗಳಲ್ಲಿ ಸಾಕಷ್ಟು ಸೀಟ್‍ಗಳು ಲಭ್ಯವಿದ್ದು ಸ್ಥಳೀಯ ಎಸ್.ಸಿ. ಎಸ್.ಟಿ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದರು.

Advertisement

ಗುತ್ತಿಗಾರಿನ ಮೊಗ್ರ ಶಾಲೆಗೆ ಬರುವ ಶಾಲಾ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಹೊಳೆ ದಾಟಿ ಬರಬೇಕಾಗಿದ್ದು ಹಲವಾರು ವರುಷಗಳಿಂದ ಬೇಡಿಕೆ ಇದ್ದರೂ ಸೇತುವೆ ನಿರ್ಮಾಣ ಮಾಡಿಲ್ಲ, ಈ ಬಾರಿ ತಾತ್ಕಾಲಿಕ ಮರದ ಸೇತುವೆ ವ್ಯವಸ್ಥೆಯೂ ಮಾಡಿಲ್ಲ ಎಂದು ಅಚ್ಚುತ ಮಲ್ಕಜೆ ಹೇಳಿದರು. ಮೊಗ್ರದಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ವಿಭಾಗದ ಇಂಜಿನಿಯರ್ ತಿಳಿಸಿದರು. ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಕೂಡಲೇ ಕ್ರಮ ಜರುಗಿಸುವಂತೆ ತಹಶೀಲ್ದಾರ್ ಸೂಚಿಸಿದರು.

ಸುಳ್ಯ ಉಪನೋಂದಣಾಧಿಕಾರಿಯ ಕಚೇರಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು, ಬೆಳ್ಳಾರೆ ಸರ್ಕಾರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ವೈದ್ಯರ ಸೇವೆ ದೊರೆಯುವಂತಾಗಬೇಕು ಎಂದು ಆನಂದ ಬೆಳ್ಳಾರೆ ಒತ್ತಾಯಿಸಿದರು. ಬೆಳ್ಳಾರೆ ಕಾವಿನಮೂಲೆಯಲ್ಲಿ ಕುಡಿಯುವ ನೀರಿನ ಕೆರೆಯನ್ನು ರಸ್ತೆ ಮಾಡುವ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯವರು ಮುಚ್ಚಿದ್ದಾರೆ ಎಂದು ಸುಂದರ ಪಾಟಾಜೆ ದೂರಿದರು. ಈ ಕುರಿತು ಪರಿಶೀಲನೆ ನಡೆಸುವಂತೆ ತಹಶೀಲ್ದಾರ್ ಸೂಚನೆ ನೀಡಿದರು.

Advertisement

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಭವಾನಿಶಂಕರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಲಕ್ಷ್ಮೀದೇವಿ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬೇಸಗೆಯಲ್ಲಿ ವೇದ ಶಿಬಿರ

https://youtu.be/0oQrAPjmTJY?si=7lSz7iQuaLABTKMj

33 mins ago

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

23 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

23 hours ago