ಬೆಂಗಳೂರು : 380 ರೂಪಾಯಿ ಇದ್ದ ಗ್ಯಾಸ್ ಬೆಲೆ ಈಗ ಒಂಬೈನೂರು ಆಗಿದೆ. ಆದ್ದರಿಂದ ಬಡವರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ಅಚ್ಚೇದಿನ್ ಬರಲಿಲ್ಲ.ಅಚ್ಚೇದಿನ್ ಬಂದಿದ್ದು ಅಂಬಾನಿ, ಅದಾನಿ, ಚೋಕ್ಸಿ, ನೀರವ್ ಮೋದಿಗೆ ಮಾತ್ರ ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಪರವಾಗಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು,’ ಬಿಜೆಪಿ ಎಂಪಿಗಳು ಏನೂ ಮಾಡಿಲ್ಲ. ನಮಗೆ ವೋಟು ಕೊಡಿ ಅಂತಾ ಕೇಳ್ತಿಲ್ಲ, ಮೋದಿಗೆ ವೋಟು ಕೊಡಿ ಅಂತಿದ್ದಾರೆ. ಜನರು ಈಗಾಗಲೆ ಭ್ರಮನಿರಸನ ಆಗಿದ್ದಾರೆ. ಜನರ ಖಾತೆಗೆ ಹದಿನೈದು ಲಕ್ಷ ಅಂದ್ರು, ಹದಿನೈದು ಪೈಸೆನೂ ಬರಲಿಲ್ಲ. ಅಂತಹದರಲ್ಲಿ ನಿಮ್ಮ ಮುಖ ನೋಡಿ ವೋಟು ಹಾಕಬೇಕಾ ಮೋದಿಯವರೇ? ಎಂದು ಪ್ರಶ್ನಸಿದ್ದಾರೆ.ರಾಜ್ಯದಲ್ಲಿ ಬರಗಾಲ ಇದ್ದಾಗ ಮೋದಿಯವರನ್ನು ಭೇಟಿ ಮಾಡಿದ್ದೆ. ವಿಶೇಷ ಅನುದಾನ ಕೊಡಿ ಅಂತಾ ಕೇಳಿದ್ದೆ. ನರೇಂದ್ರ ಮೋದಿ ಒಂದೇ ಒಂದು ರೂಪಾಯಿ ಅನುದಾನ ಕೊಡಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…
ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…
ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…
ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …
ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…