ಸುಳ್ಯ : ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಅಜ್ಜಾವರ ಗ್ರಾಮವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಗುರುತಿಸಲಾಗಿದೆ. ಇದೀಗ ಈ ಪ್ರದೇಶದಲ್ಲಿ ಅಗತ್ಯ ವಸ್ತುಗಳು ಹಾಗೂ ತುರ್ತು ಕಾರ್ಯಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. ಮಂಗಳವಾರದಿಂದ ಅಜ್ಜಾವರ ಗ್ರಾಮಕ್ಕೆ ತರಕಾರಿ, ಹಾಲು ಇತ್ಯಾದಿ ವಸ್ತುಗಳ ಪೂರೈಕೆಯನ್ನೂ ಮಾಡಲಾಗಿದೆ.
ಮಂಗಳವಾರ ಆಹಾರ ಸಾಮಾಗ್ರಿ, ಹಣ್ಣು, ತರಕಾರಿ ಸಹಿತ ಎಲ್ಲಾ ಅಗತ್ಯ ವಸ್ತುಗಳನ್ನು ಮನೆ ಮನೆ ತಲುಪಿಸಲು ನಿರ್ದಿಷ್ಟ ಅಂಗಡಿಗಳನ್ನು ಗೊತ್ತು ಪಡಿಸಲಾಗಿದ್ದು ಅಲ್ಲಿಗೆ ಬೆಳಗ್ಗೆ ಸರಬರಾಜು ಮಾಡಲಾಗಿದೆ. ತಹಶೀಲ್ದಾರ್ ಅನಂತಶಂಕರ್, ಆರ್.ಐ. ಕೊರಗಪ್ಪ ಹೆಗ್ಡೆ ಮತ್ತಿತರರು ಮಾರ್ಗದರ್ಶನ ನೀಡಿದರು.
ಕೊರೊನಾ ವೈರಸ್ ಸೋಂಕಿತ ಮನೆ ವ್ಯಾಪ್ತಿಯ 5 ಮನೆಗಳನ್ನು ಕಂಟೈನ್ಮೆಂಟ್ ವಲಯದೊಳಗೆ ಗುರುತಿಸಲಾಗಿದೆ. ಅಲ್ಲಿಂದ ಒಂದು ಕಿ.ಮೀ.ವ್ಯಾಪ್ತಿಯ 318 ಮನೆಗಳನ್ನು ತೀವ್ರ ಬಫರ್ ಝೋನ್ ಎಂದು ಪರಿಗಣಿಸಲಾಗಿದೆ. ಈ ಎರಡು ವಲಯದಲ್ಲಿ ಜನರು ಮನೆಗಳಿಂದ ಹೊರ ಬರುವಂತಿಲ್ಲ. ಮೆಡಿಸಿನ್, ತರಕಾರಿ, ಕೋಳಿ, ಮಾಂಸ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳನ್ನು ತಾಲೂಕು ಆಡಳಿತ ರಚಿಸಿದ ತಂಡ ವ್ಯವಸ್ಥೆ ಮಾಡಲಿದೆ.
ಹಾಲು, ತರಕಾರಿ, ಮಾಂಸ ಪೂರೈಕೆ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡು ಸಂಜೆ ತನಕವು ಇರಲಿದೆ. ಬೇಡಿಕೆ ಕರೆ ಆಧರಿಸಿ ತಂಡದ ಮೂಲಕ ಮನೆ-ಮನೆಗೆ ವಿತರಿಸಲಾಗುತ್ತದೆ. ಆಯಾ ಮನೆಯವರು ತಾಲೂಕು ಆಡಳಿತ ಗೊತ್ತುಪಡಿಸಿರುವ ಅಂಗಡಿ ಮಾಲಕರಿಗೆ ದೂರವಾಣಿ ಮೂಲಕ
ತಿಳಿಸಿದರೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಮನೆಯವರು ಅದಕ್ಕೆ ತಗಲುವ ವೆಚ್ಚವನ್ನು ನೀಡಿ ಸಾಮಗ್ರಿ ಪಡೆದುಕೊಳ್ಳಬೇಕು.
ಅಗತ್ಯ ವಸ್ತುಗಳಿಗೆ ಸಂಪರ್ಕ ಸಂಖ್ಯೆ:
ಸೀಲ್ಡೌನ್ ವ್ಯಾಪ್ತಿಯ ಪ್ರದೇಶದ ಜನರು ಅಗತ್ಯ ವಸ್ತುಗಳಿಗೆ ಸಂಪಕರ್ಿಸಬೇಕಾದ ತಂಡದ ವಿವರ ಹೀಗಿದೆ.
ಹಾಲು-ದಿನಸಿ ಸಾಮಗ್ರಿ-9483075258(ಮೋಹನ್),
ತರಕಾರಿ-7337796838(ಲತೀಫ್),
ಔಷಧ-9480064077 (ಸಿಟಿ ಮೆಡಿಕಲ್),
ಕೋಳಿ ಮಾಂಸ-9844479400 (ದಿನೇಶ್),
ಮೀನು-9008978904 (ಸೀ ಫುಡ್) ಅನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಂಟ್ರೋಲ್ ರೂಂ ನಂಬರ್ 08257-230330 ಅಥವಾ ಸ್ಥಳೀಯ ಗ್ರಾ.ಪಂ. ಅಧಿಕಾರಿ,
ಸಿಬಂದಿಗಳಿಗೆ ಕರೆ ಮಾಡಿ ವಿಚಾರಿಸಬಹುದು ಎಂದು ತಾಲೂಕು ಆಡಳಿತ ಪ್ರಕಟಣೆ ತಿಳಿಸಿದೆ.
ಕಂಟೈನ್ಮೆಂಟ್ ವಲಯ, ತೀವ್ರ ಬಫರ್ ಝೋನ್ ಹಾಗೂ ಬಫರ್ ಝೋನ್ ಪ್ರದೇಶದ ಒಳಗೆ ಪ್ರವೇಶ ಮತ್ತು ನಿರ್ಗಮನ ನಿರ್ಬಂಧಕ್ಕೆ ಪೂರಕವಾಗಿ ಸುಳ್ಯ ಪೊಲೀಸ್ ಠಾಣಾ ವತಿಯಿಂದ ಬಾರಿಕೇಡ್ ಅಳವಡಿಸಲಾಗಿದೆ. ಹೀಗಾಗಿ ಈ ಪ್ರದೇಶದಿಂದ ಹೊರಕ್ಕೆ, ಒಳಕ್ಕೆ ಪ್ರವೇಶ ನಿಷೇಸಲಾಗಿದೆ.