ಪುತ್ತೂರು: ಅಡಿಕೆ ಖರೀದಿ ನಡೆಸುವ ಬಗ್ಗೆ ಕ್ಯಾಂಪ್ಕೋ ಘೋಷಣೆ ಮಾಡಿದೆ. ಎ.13 ರಿಂದ ಆಯ್ದ ಶಾಖೆಗಳಲ್ಲಿ ಅಡಿಕೆ ಖರೀದಿ ನಡೆಸಲಿದೆ. ಆದರೆ ಕೆಲವೊಂದು ನಿಯಮಗಳನ್ನು ಅಳವಡಿಸಲಾಗಿದೆ. ದೇಶವೇ ಲಾಕ್ಡೌನ್ ಆಗಿರುವ ಸಂದರ್ಭದಲ್ಲಿ ಅಡಿಕೆ ಮಾರುಕಟ್ಟೆಯೇ ದೇಶದಲ್ಲಿ ಬಂದ್ ಆಗಿರುವ ಈ ಹಂತದಲ್ಲಿ, ಅಡಿಕೆ ಬಗ್ಗೆ ಗಾಸಿಪ್ ಗಳೇ ಹೆಚ್ಚಾಗಿರುವ ಈ ಹೊತ್ತಿನಲ್ಲಿ ಕ್ಯಾಂಪ್ಕೋ ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದೆ ಎನ್ನುವುದು ಬೆಳೆಗಾರರು ಗಮನದಲ್ಲಿರಿಸಿ ಹೆಜ್ಜೆ ಇಡಬೇಕಾಗಿದೆ.
ಅಡಿಕೆ ಖರೀದಿ ಬಗ್ಗೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾಹಿತಿ ನೀಡಿ, ಆಯ್ದ ಶಾಖೆಗಳಲ್ಲಿ ಅಡಿಕೆ ಖರೀದಿ ಮಾಡಲಾಗುತ್ತದೆ.ಎ.13 ರಿಂದಲೇ ಅಡಿಕೆ ಖರೀದಿ ಮಾಡಲಾಗುತ್ತದೆ. ಪ್ರತಿದಿನ 20 ಸದಸ್ಯರಿಗೆ ಮಾತ್ರ ಅವಕಾಶವಿದ್ದು ಒಬ್ಬ ಸದಸ್ಯರಿಗೆ ಒಂದು ತಿಂಗಳಲ್ಲಿ ಗರಿಷ್ಠ 1 ಕ್ವಿಂಟಾಲ್ ಅಥವಾ ರೂ.25,000 ಮೌಲ್ಯದ ಅಡಿಕೆ ಮಾರಾಟಕ್ಕೆ ಅವಕಾಶ. ಮುಂದೆ ಇತರ ಕಡೆಗಳಲ್ಲಿ ಅಡಿಕೆ ಖರೀದಿ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಬೆಳೆಗಾರರು ಆಯಾ ಶಾಖಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳತಕ್ಕದ್ದು. ಬೆಳಿಗ್ಗೆ ಗಂಟೆ 9.00 ರಿಂದ ಮಧ್ಯಾಹ್ನ 2.00 ರ ವರೆಗೆ ಅಡಿಕೆ ಖರೀದಿ ನಡೆಯುತ್ತದೆ. ಸದಸ್ಯರು ಆಯಾ ಶಾಖೆಗಳಿಗೆ ಬರುವಾಗ ಕ್ಯಾಂಪ್ಕೊ ಸದಸ್ಯತ್ವದ ಗುರುತು ಚೀಟಿ, ಕ್ಯಾಂಪ್ಕೊ ಕಾರ್ಡು, ಪಹಣಿ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು. ಕ್ಯಾಂಪ್ಕೋ ಸದಸ್ಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಎಸ್.ಆರ್.ಸತೀಶ್ಚಂದ್ರ ಮಾಹಿತಿ ನೀಡಿದ್ದಾರೆ.
ಅಡಿಕೆ ಖರೀದಿಸುವ ಶಾಖೆಗಳ ವಿವರ :
ಅಡ್ಯನಡ್ಕ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ದಿನೇಶ್ ಕುಮಾರ್ PH : 8277355840
ಪುತ್ತೂರು
ಕೊಕ್ಕೊ : ಶುಕ್ರವಾರ
ಅಡಿಕೆ : ಸೋಮವಾರ, ಬುಧವಾರ, ಗುರುವಾರ.
ಸಂಪರ್ಕ : ರಾಜೇಶ್ PH.8317494942
ವಿಟ್ಲ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ರಾಜೇಶ್ ಎಂ PH.9947680655
ಸುಳ್ಯ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಶ್ಯಾಮ್ PH. 6360053860
ನಿಂತಿಕಲ್ಲು
ಅಡಿಕೆ ಮಾತ್ರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಶ್ರೀನಿಧಿ : PH.
9663715920
(ಸೂಚನೆ : ದಿನಕ್ಕೆ ಗರಿಷ್ಠ 10 ಟೋಕನ್ ಪಡೆಯಲು ಮಾತ್ರ ಅವಕಾಶ)
ಕಡಬ
ಕೊಕ್ಕೊ : ಗುರುವಾರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಮಹೇಶ್ ಚಂದ್ರ PH. 9483790435.
ಉಪ್ಪಿನಂಗಡಿ
ಅಡಿಕೆ ಮಾತ್ರ
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಕೃಪೇಶ್ ರೈ PH.9481759830.
ಬೆಳ್ತಂಗಡಿ
ಕೊಕ್ಕೊ : ಸೋಮವಾರ
ಅಡಿಕೆ : ಮಂಗಳವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಉದಯ ಕುಮಾರ್ PH. 9880903258.
ಆಲಂಕಾರು
ಅಡಿಕೆ ಮಾತ್ರ :
ಅಡಿಕೆ : ಸೋಮವಾರ, ಬುಧವಾರ, ಶುಕ್ರವಾರ.
ಸಂಪರ್ಕ : ಧನುಷ್ PH.9972321421.
ಪುತ್ತೂರಿನ ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಮಾರ್ಚ್ 11ರಂದು ಗೋಡಂಬಿ ಹಣ್ಣಿನ ಮೌಲ್ಯವರ್ಧನೆ ಕುರಿತು…
ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…
ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …
ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…
ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…
ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಕಾಡು ಬೆಂಕಿ ತಡೆಯಲು 970 ಕಿ.ಮೀ. ಬೆಂಕಿ ಪಥ…