Advertisement
ಸುದ್ದಿಗಳು

ಅಡಿಕೆ ಧಾರಣೆ ಏರಿಕೆ | ಮತ್ತೆ ಅಸ್ಸಾಂನಲ್ಲಿ ಸಿಕ್ಕಿಬಿತ್ತು 1040 ಬ್ಯಾಗ್‌ ಅಡಿಕೆ |

Share

ಮಂಗಳೂರು: ಅಡಿಕೆ ಧಾರಣೆ ಏರಿಕೆಯಲ್ಲಿ ಸಾಗಿದೆ.  ಅಧಿಕೃತವಾಗಿ ಹಳೆ ಅಡಿಕೆ ಧಾರಣೆ 350 ಹಾಗೂ ಹೊಸ ಅಡಿಕೆ ಧಾರಣೆ  340 ರೂಪಾಯಿ ಆಗಿದ್ದು ಖಾಸಗೀ ವಲಯದಲ್ಲಿ  ಹಳೆ ಅಡಿಕೆ 360 ಹಾಗೂ ಹೊಸ ಅಡಿಕೆ  350  ರೂಪಾಯಿಗೆ ಖರೀದಿ ನಡೆಸಲಾಗಿತ್ತು. ಇದೀಗ ಮತ್ತೆ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆ ಇದೆ. ಈ ನಡುವೆ ಅಸ್ಸಾಂನಲ್ಲಿ ಶುಕ್ರವಾರ 2 ಕೋಟಿ ರೂಪಾಯಿ ಮೌಲ್ಯದ ಸುಮಾರು  1040 ಬ್ಯಾಗ್‌ ಅಡಿಕೆ ವಶಪಡಿಸಿಕೊಳ್ಳಲಾಗಿದೆ.

ಅಸ್ಸಾಂ ಅರೆಸೇನಾ ಪಡೆಯು ಅಸ್ಸಾಂ ಸೇರಿದಂತೆ ದೇಶದ ಗಡಿಭಾಗದಲ್ಲಿ ತೀವ್ರ ತಪಾಸಣೆ ನಡೆಸುತ್ತಿದೆ. ಈ ಸಂದರ್ಭ ನಾಗಾಲ್ಯಾಂಡ್‌ ಮೂಲಕ ಒಳಬಂದ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಅಡಿಕೆಯನ್ನು  ದಿಮಾಪುರದ ಕಸ್ಟಮ್ ಪ್ರಿವೆಂಟಿವ್ ವಿಭಾಗದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ತನಿಖೆ ನಡೆಯುತ್ತಿದೆ. ಆರಂಭದ ತನಿಖೆಯಲ್ಲಿ ಮ್ಯಾನ್ಮಾರ್‌ ಪ್ರದೇಶದ ಅಡಿಕೆ ಇದಾಗಿದೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಕೆಲವು ಸಮಯಗಳಿಂದ ಅಡಿಕೆ ಆಮದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಡಿಕೆ ಖರೀದಿದಾರರಿಗೆ ದೇಶದ ಅಡಿಕೆಯನ್ನೇ ಖರೀದಿ ಮಾಡಬೇಕಾಗಿದೆ. ಆದರೆ ಅಡಿಕೆ ಬೆಳೆಗಾರರು ಬೆಲೆ ಏರಿಕೆ ನಿರೀಕ್ಷೆಯ ಕಾರಣದಿಂದ ಅಡಿಕೆ ಮಾರುಕಟ್ಟೆಗೆ ಬಿಡುತ್ತಿಲ್ಲ. ಹೀಗಾಗಿ ಧಾರಣೆ ಏರಿಕೆಯಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಅಡಿಕೆ ಖರೀದಿದಾರರು ಕಳ್ಳ ಸಾಗಾಣಿಕೆಯ ಮೂಲಕ ನಾಲಾಗ್ಯಾಂಡ್‌  ಮೂಲಕ  ಅಸ್ಸಾಂಗೆ ಅಡಿಕೆ ತರಿಸಿಕೊಂಡು ಈ ಮೂಲಕ ದೇಶದ ವಿವಿಧ ಕಡೆಗಳಿಗೆ ಅಡಿಕೆ ತರಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಹೀಗಾಗಿ ದೇಶದ ಅಡಿಕೆ ಕಡೆಗೆ ಒಲವು ಕಡಿಮೆ ತೋರಿಸಿದ್ದರು. ಈ ಕಾರಣದಿಂದ ಅಡಿಕೆ ಧಾರಣೆ ಎರಡು ವಾರಗಳಿಂದ ಸ್ಥಿರವಾಗಿತ್ತು. ಆದರೆ ಆಮದು ಯೋಚನೆ ವಿಫಲವಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ ಅಸ್ಸಾಂ ಗಡಿಭಾಗದಲ್ಲಿ ಅಸ್ಸಾಂ ಅರೆಸೇನಾ ಪಡೆ ಬಿಗಿ ಬಂದೋಬಸ್ತ್‌ ಕೈಗೊಂಡಿದೆ.  ಕಳೆದೊಂದು ವಾರದಿಂದ ಅಸ್ಸಾಂ ಗಡಿಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ದು ಗುಂಡುಗಳು ಪತ್ತೆಯಾಗಿರುವ ಕಾರಣ ಬಂದೋಬಸ್ತ್‌ ಬಿಗಿಗೊಳಿಸಿದೆ. ಹೀಗಾಗಿ ಅಡಿಕೆ ಆಮದು ಸದ್ಯಕ್ಕೆ ಕಷ್ಟವಾಗಿದೆ. ಈ ಕಾರಣದಿಂದ ಅಡಿಕೆ ಖರೀದಿದಾರರಿಗೆ ದೇಶದ ಅಡಿಕೆಯೇ ಅಗತ್ಯವಾಗಿದೆ.

ಅಡಿಕೆ ಧಾರಣೆ ಏರಿಕೆಯಾಗುವುದು ಖಚಿತ. ಆದರೆ ತಕ್ಷಣವೇ ಅಡಿಕೆ ಧಾರಣೆ 400  ರೂಪಾಯಿ ಆಗಲಾರದು. ಇದೇ ರೀತಿ ಮುಂದುವರಿದಿದೆ ನಿರೀಕ್ಷಿತ ಧಾರಣೆ ತಲಪುವುದು  ಖಚಿತ. ಒಂದು ವೇಳೆ ಅಡಿಕೆ ಆಮದಿಗೆ ಅವಕಾಶ ಸಿಕ್ಕಿದೆ ಅಥವಾ ಉತ್ತರ ಭಾರತದಲ್ಲಿ ಕೊರೋನಾ ಲಾಕ್ಡೌನ್‌ ಪರಿಸ್ಥಿತಿ ಉಂಟಾದರೆ ಸ್ವಲ್ಪ ಹಿನ್ನಡೆಯಾದೀತು. ಅಂತೂ ಈ ವರ್ಷ ಅಡಿಕೆ ಬೆಳೆಗಾರರಿಗೆ 300 +  ಅಡಿಕೆ ಧಾರಣೆ ನಿರೀಕ್ಷೆಯಲ್ಲಿರಬಹುದು ಎಂಬುದು ಮಾರುಕಟ್ಟೆ ವಿಶ್ಲೇಷಣೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

24 hours ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

24 hours ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

1 day ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

1 day ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

2 days ago