ಅಡಿಕೆ ಧಾರಣೆ ಮತ್ತೆ ಜಿಗಿತ | ಬೆಳೆಗಾರರಿಗೆ ಮತ್ತಷ್ಟು ಭರವಸೆ | ರೈಲಲ್ಲಿ ಬಂದ ಅಡಿಕೆಯೂ ವಶವಾಯ್ತು..! ಬರ್ಮಾ ಅಡಿಕೆಗೆ ಮತ್ತೆ ಕತ್ತರಿ ಹಾಕಿದ ರೈಲ್ವೇ ಪೊಲೀಸರು |

June 23, 2020
9:34 PM

ಮಂಗಳೂರು: ಚಾಲಿ ಅಡಿಕೆ ಧಾರಣೆ ಏರುತ್ತಿದೆ. ದಿನದಿಂದ ದಿನಕ್ಕೆ ಧಾರಣೆ ಏರಿಕೆಯ ಹಾದಿಯಲ್ಲಿದೆ. ಮಂಗಳವಾರ ಮತ್ತೆ 5 ರೂಪಾಯಿ ಹೊಸ ಅಡಿಕೆಗೆ ಏರಿಕೆಯಾಗಿ 325 ರೂಪಾಯಿಗೆ ಖರೀದಿಯಾಗುವ ಮೂಲಕ  ಇದುವರೆಗಿನ ಧಾರಣೆಯಲ್ಲಿ ಸಾರ್ವಕಾಲಿಕ ದಾಖಲೆಯತ್ತ ಸಾಗಿತು. ಹೀಗಾದರೂ ಅಡಿಕೆ ಮಾರುಕಟ್ಟೆಗೆ ಬರುತ್ತಿಲ್ಲ. ಬೇಡಿಕೆ ತಡೆಯಲಾಗುತ್ತಿಲ್ಲ.. ಇದು ಅಡಿಕೆ ಮಾರುಕಟ್ಟೆಯ ಈಗಿನ ಸ್ಥಿತಿ.

ಅಡಿಕೆ ಧಾರಣೆ 300 ರೂಪಾಯಿ ದಾಟಿದ ಬಳಿಕ ಇದೀಗ ವಿದೇಶದ ಅಡಿಕೆ ಕಳ್ಳದಾರಿಯ ಮೂಲಕ ಹೇಗಾದರೂ ತರುವ ಪ್ರಯತ್ನ ನಡೆಯುತ್ತಲೇ ಇದೆ. ಎರಡು ದಿನಗಳ ಹಿಂದೆ 1500 ಕ್ಕೂ ಹೆಚ್ಚು ಚೀಲ ಅಡಿಕೆ ಪತ್ತೆಯಾಗಿತ್ತು. ಇದೀಗ ರೈಲಿನ ಮೂಲಕ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ರೈಲ್ವೇ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ 2 ದಿನಗಳಿಂದ ಇದರ ಮಾಲಕರು ಪತ್ತೆಯಾಗಿಲ್ಲ. ಸುಮಾರು 800 ಚೀಲ ಅಡಿಕೆ ಈಗ ಗುವಹಾಟಿ ರೈಲ್ವೇ ನಿಲ್ದಾಣದಲ್ಲಿದೆ.

ಅಸ್ಸಾಂ  ಗುವಹಾಟಿ ರೈಲು ನಿಲ್ದಾಣದಲ್ಲಿ 3 ಬೋಗಿಗಳಲ್ಲಿದ್ದ ಸರಕು ತಪಾಸಣೆ ವೇಳೆ ಅಡಿಕೆ ಇರುವುದು  ರೈಲ್ವೇ ಪೊಲೀಸರಿಗೆ ಪತ್ತೆಯಾಗಿದೆ.ಯಾವುದೇ ದಾಖಲೆ ಇರಲಿಲ್ಲ ಹಾಗೂ ಜಿ ಎಸ್ ಟಿ ಬಗ್ಗೆಯೂ ಯಾವುದೇ ದಾಖಲೆ ಇಲ್ಲ ಹೀಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಬರ್ಮಾದಿಂದ ಬಂದಿರುವ ಕಳಪೆ ಗುಣಮಟ್ಟದ ಅಡಿಕೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  ನವದೆಹಲಿಗೆ ತೆರಳುವ ಸರಕು ರೈಲಿನ ಮೂರು ವಿಭಾಗಗಳನ್ನು ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ  ವಶಕ್ಕೆ ಪಡೆದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ  ದಿಮಾಪುರದಲ್ಲಿ ತುಂಬಿಸಿರುವುದು  ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ನಾಗಾಲ್ಯಾಂಡ್ ಮೂಲಕ ದಿಮಾಪುರಕ್ಕೆ ಬಂದಿರುವ ಅಡಿಕೆಯನ್ನು ವಶಕ್ಕೆ ಪಡೆಯಲಾಗಿತ್ತು.  ರವಾನೆಗೆ ಸಂಬಂಧಿಸಿದ ದಾಖಲೆಗಳ ತನಿಖೆ ನಡೆಯುತ್ತಿದೆ. ಈಶಾನ್ಯ ರಾಜ್ಯಗಳಿಂದ ದೇಶದ ಬೇರೆಡೆಗೆ  ಅಡಿಕೆ ಕಳ್ಳಸಾಗಣೆ ಮಾಡುವುದು ಹೊಸತಲ್ಲ, ಆದರೆ ಈ ಬಾರಿ ಯಾವುದೇ ಅಕ್ರಮವಾಗದಂತೆ ಪೊಲೀಸರು , ಅರೆ ಸೇನಾ ಪಡೆ ಬಿಗಿ ತಪಾಸಣೆ ನಡೆಸುತ್ತಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ- ಸದ್ಯ ಮಾರುಕಟ್ಟೆ ಸ್ಥಿರ | ರಬ್ಬರ್‌ ಧಾರಣೆ ಇಳಿಕೆಯ ಹಾದಿ
March 7, 2026
3:02 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-03-2026 | ಕರಾವಳಿಯಲ್ಲಿ ಮೋಡ–ಮಳೆಯ ಸುಳಿವು | ಜೋರು ಮಳೆಯ ಲಕ್ಷಣವಿಲ್ಲ
March 7, 2026
2:12 PM
by: ಸಾಯಿಶೇಖರ್ ಕರಿಕಳ
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ವಿರುದ್ಧ ಬಿಗುವಿನ ಕ್ರಮ | ಪಾಕಿಸ್ತಾನದಲ್ಲಿ ವಿಷಕಾರಿ ಅಡಿಕೆ ವಿರುದ್ಧ ದಾಳಿ
March 7, 2026
11:36 AM
by: ಮಿರರ್‌ ಡೆಸ್ಕ್
ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧ..
March 7, 2026
7:29 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror