ಗುತ್ತಿಗಾರು: ಮೋಟಾರ್ ಬೈಕ್ ಮಾದರಿಯ ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ ಗುತ್ತಿಗಾರು ಗ್ರಾಮದ ಕಮಿಲ ಬಳಿಯ ಪುಚ್ಚಪ್ಪಾಡಿ ಕೃಷ್ಣಮೂರ್ತಿ ಅವರ ಅಡಿಕೆ ತೋಟದಲ್ಲಿ ನಡೆಯಿತು. ಅಡಿಕೆ ಬೆಳೆಗಾರರು ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಭಾರತೀಯ ಕಿಸಾನ್ ಸಂಘ ಗುತ್ತಿಗಾರು-ನಾಲ್ಕುರು ಇದರ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ಅಡಿಕೆ ಬೆಳೆಗಾರರು ಆಗಮಿಸಿದ್ದರು.
ಬಂಟ್ವಾಳದ ಸಜಿಪಮೂಡ ಗ್ರಾಮದ ಕೃಷಿಕ ಗಣಪತಿ ಭಟ್ ಅವರು ನಿರ್ಮಾಣ ಮಾಡಿರುವ ಮೋಟಾರು ಚಾಲಿತ ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ ನಡೆಯಿತು. ಈ ಸಂದರ್ಭ ರಾಜಾರಾಮ ಕಾಡೂರು ಮಾಹಿತಿ ನೀಡಿದರು. ಅಡಿಕೆ ಬೆಳೆಗಾರರು ಮರ ಏರಿ ಯಂತ್ರದ ಕ್ಷಮತೆ ಹಾಗೂ ಆವಿಷ್ಕಾರವನ್ನು ಕೊಂಡಾಡಿದರು.
ಕೃಷಿ ಯಂತ್ರದ ಅಭಿವೃದ್ಧಿ ಕಡೆಗೆ ಆಸಕ್ತರಾಗಿರುವ ಗಣಪತಿ ಭಟ್ ಅವರು ಈಗಾಗಲೇ ಸುಮಾರು 50 ಲಕ್ಷ ರೂಪಾಯಿಯಷ್ಟು ಖರ್ಚು ಮಾಡಿದ್ದಾರೆ. ಇದೀಗ ಅಡಿಕೆ ಮರ ಏರುವ ಯಂತ್ರ ಯಶಸ್ಸಾಗಿದೆ. ಅಡಿಕೆ ಬೆಳೆಗಾರರ ಮನ ಗೆದ್ದಿದೆ.
ಬಳಿಕ ಮಾತನಾಡಿದ ಗಣಪತಿ ಭಟ್,
ಕಳೆದ 2 ವರ್ಷಗಳ ನಿರಂತರ ಪ್ರಯತ್ನದಿಂದ ಈ ಮಾದರಿ ತಯಾರಾಗಿದೆ. ಈ ಹಿಂದೆ ಹಲವು ಯಂತ್ರಗಳ ರಚನೆ ಮಾಡಿದ್ದಾಗಿ ಹೇಳಿದ್ದಾರೆ. ಮುಂದೆ ತೆಂಗಿನ ಮರ ಏರುವ ಯಂತ್ರ ಹಾಗೂ ಅಡಿಕೆ ಮರ ಏರುವ ಈ ಮಾದರಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಕೂಡಾ ಇದೆ ಎಂದು ಹೇಳುತ್ತಾರೆ.
ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆಯ ವಿಡಿಯೋ ಇಲ್ಲಿದೆ….
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.