ಮಂಗಳೂರು: ನಾನು ಅಧಿಕಾರದ ಹಿಂದೆ ಎಂದೂ ಹೋಗಿಲ್ಲ. ಈಗಲೂ ಅಧಿಕಾರದ ಹಿಂದೆ ಬಿದ್ದಿಲ್ಲ. ಪಕ್ಷ ಮತ್ತು ಸಂಘಟನೆಯ ವಿಚಾರಧಾರೆಯಡಿ ಬೆಳೆದು ಬಂದ ಕಾರಣ ಅಧಿಕಾರದ ಆಸೆ ಇಲ್ಲ. ನನ್ನ ಬಗ್ಗೆ ಸಂಶಯ ಬೇಡ ಪಕ್ಷ ಸಂಘಟನೆಯಲ್ಲಿ ನಳಿನ್ ಕುಮಾರ್ ಜತೆಗಿದ್ದು ಪೂರ್ಣ ಪ್ರಮಾಣದಲ್ಲಿ ಸಕ್ರೀಯರಾಗುತ್ತೇನೆ. ಕ್ಷೇತ್ರದ ಜನರ ಸೇವೆ ನಿರಂತರವಾಗಿ ಮಾಡುತ್ತೇನೆ ಹೀಗೆಂದವರು ಸುಳ್ಯ ಶಾಸಕ ಎಸ್.ಅಂಗಾರ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಜಿಲ್ಲಾ ಬಿಜೆಪಿಯಿಂದ ನೀಡಲಾದ ಅಭಿನಂದನಾ ಸಮಾರಂಭದಲ್ಲಿ ಅಂಗಾರರು ತಮ್ಮ ಮನದಾಳವನ್ನು ಬಿಚ್ಚಿಟ್ಟರು.
ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ನಳಿನ್ ಕುಮಾರ್ ಕೂಡ ಅಂಗಾರರ ಹಿರಿತನವನ್ನೂ, ಸರಳತೆಯನ್ನು ಕೊಂಡಾಡಿದರು. ಶಾಸಕ ಅಂಗಾರ ಅವರನ್ನು ಉಲ್ಲೇಖಿಸಿ ಮಾತನಾಡಿದ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಅವರು ಅಹಂಕಾರ ತೋರಿಲ್ಲ, ಗುಂಪುಗಾರಿಕೆ ಮಾಡಿಲ್ಲ, ಯಾರ ಮನೆ ಬಾಗಿಲಿಗೂ ಸೀಟಿಗಾಗಿ ಅಲೆದಾಡಿಲ್ಲ ಎಂದರು. ನಾನು ಕೂಡಾ ರಾಜ್ಯಾಧ್ಯಕ್ಷ ಸ್ಥಾನವನ್ನು ಬಯಸಿಲ್ಲ. ಸಂಘದ ಕಾರ್ಯದಲ್ಲಿ ನನ್ನನ್ನು ತೊಡಗಿಸಿಕೊಂಡು ಸಮಾಜಕ್ಕಾಗಿ ದುಡಿದ ಕಾರಣ ಅವಕಾಶ ಬಂದಿದೆ ಎಂದರು.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490