ಅಧಿಕಾರದ ಹಿಂದೆ ಹೋಗುವುದಿಲ್ಲ….ಅರಸಿ ಬಂದರೆ ಸ್ವೀಕರಿಸುತ್ತೇನೆ…..ಶಾಸಕ ಅಂಗಾರ ಮನದಾಳದ ಮಾತು‌‌‌

August 15, 2019
1:02 PM

ಸುಳ್ಯ:ರಾಜ್ಯ ಸರಕಾರದಲ್ಲಿ ಸಚಿವರಾಗಿ, ಮಂತ್ರಿಯಾಗಿ ಬನ್ನಿ ಎಂದು ಹಲವಾರು ಮಂದಿ ಹಾರೈಸಿದ್ದಾರೆ. ಆದರೆ ಅಧಿಕಾರಕ್ಕಾಗಿ ಎಂದೂ ಬೇಡಿಕೆ ಇಡುವುದಿಲ್ಲ.. ಅಧಿಕಾರ ಅರಸಿ ಬಂದರೆ ವಿನಮ್ರತೆಯಿಂದ ಸ್ವೀಕರಿಸುತ್ತೇನೆ.. ಹೀಗೆ ತನ್ನ ಮನದಾಳವನ್ನು ಬಿಚ್ಚಿಟ್ಟವರು ಶಾಸಕ ಎಸ್.ಅಂಗಾರ.

Advertisement
Advertisement
Advertisement

ಸುಳ್ಯದಲ್ಲಿ ನಡೆದ ಸ್ಚಾತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯ ಸರಕಾರದಲ್ಲಿ ಅಂಗಾರರು ಸಚಿವರಾಗುತ್ತಾರೆ ಎಂಬ ಚರ್ಚೆಗಳು ಗರಿಗೆದರುತ್ತಿರುವ ಸಂದರ್ಭದಲ್ಲಿ ಅವರು ತಮ್ಮ ಮನದಾಳವನ್ನು ಬಿಚ್ಚಿಟ್ಟರು.

Advertisement

ಅಧಿಕಾರದ ಹಿಂದೆ ಇದುವರೆಗೆ ಹೋಗಿಲ್ಲ ಇನ್ನೂ ಹೋಗುವುದಿಲ್ಲ. ಸಂಘಟನೆಯ ತತ್ವ ಸಿದ್ಧಾಂತಗಳ ಆಧಾರದಲ್ಲಿ ಬೆಳೆದು ಬಂದು ಸಂಘಟನೆಯ ಆಶಯದಂತೆ ಜನರ ಆಶೀರ್ವಾದದೊಂದಿಗೆ ಜನಪ್ರತಿನಿಧಿಯಾಗಿದ್ದೇನೆ. ಸಂಘಟನೆಗೆ ಅದರದ್ದೇ ಆದ, ತತ್ವ, ವಿಚಾರ, ಉದ್ದೇಶಗಳಿವೆ. ನನಗೆ ಅಧಿಕಾರಕ್ಕಿಂತ ಅದೇ ಮುಖ್ಯ. ಆಧಿಕಾರ ದೊರೆತರೆ ಅನೇಕ ಅಪೇಕ್ಷೆಗಳು ಸವಾಲುಗಳು ಇದೆ, ಅದರ ಬಗ್ಗೆ ಅರಿವಿದೆ ಆ ಸವಾಲುಗಳನ್ನು ಎದುರಿಸಲು ಅಪೇಕ್ಷೆಗಳನ್ನು ಈಡೇರಿಸಲು ಜನರ ಸಹಕಾರ ಅತೀ ಮುಖ್ಯ ಎಂದು ಅವರು ಹೇಳಿದರು.

ಮಂತ್ರಿಯಾಗಿ ಹಿರಿಯರ ಆಶೀರ್ವಾದ:
ಸ್ವಾತಂತ್ರ್ಯ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ವಾಣೀಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ‌.ಸುಧಾಕರ ರೈ ಮತ್ತಿತರರು ಅಂಗಾರರು ಸಚಿವರಾಗಲಿ ಎಂದು ಹಾರೈಸಿದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

30ಕ್ಕೆ ಮುನ್ನ ಅಮ್ಮನಾಗಿ…!? | ಏಕೆ? ಎಂದು ಕೇಳುವ ಹುಡುಗಿಯರೇ ಇಂದು ಹೆಚ್ಚಾಗಿದ್ದಾರೆ….!
April 15, 2024
11:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ ಹೆಚ್ಚಿದ ವಿದ್ಯುತ್ ಬೇಡಿಕೆ : ಅನಿಲ ಆಧಾರಿತ ಸ್ಥಾವರಗಳ ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಸೂಚನೆ
April 15, 2024
11:02 PM
by: The Rural Mirror ಸುದ್ದಿಜಾಲ
ದೇಶದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ | ಹವಾಮಾನ ಇಲಾಖೆ
April 15, 2024
10:16 PM
by: The Rural Mirror ಸುದ್ದಿಜಾಲ
2047 ಭಾರತಕ್ಕೆ ಸ್ವಾತಂತ್ರ್ಯ ದೊರಕಿ 100 ವರ್ಷ | ಮುಂದಿನ 25 ವರ್ಷಕ್ಕೆ ಈಗಲೇ ತಯಾರಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ
April 15, 2024
10:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror