ಪಂಜ: ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿಯ ಕಾರಣದಿಂದ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಮುಂದೂಡಿದ ಘಟನೆ ಬುಧವಾರ ಪಂಜದಲ್ಲಿ ನಡೆದಿದೆ.
ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಬುಧವಾರ ಆಯೋಜನೆಗೊಂಡಿತ್ತು. ಆರಂಭದಲ್ಲಿ ಜನರ ಕೋರಂ ಇಲ್ಲದ ಕಾರಣ ತಡವಾಗಿ ಗ್ರಾಮ ಸಭೆ ಆರಂಭವಾಯಿತು. ನಂತರ ಜನರು ಬಮದರೂ ಅಧಿಕಾರಿಗಳ ಕೊರತೆ ಕಂಡುಬಂತು. ಈ ಸಂದರ್ಭ ಜನರು ಗ್ರಾಪಂ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪಿ ಡಿ ಒ ಅವರು ವಿವಿಧ ಇಲಾಖೆಗೆ ಸಂಪರ್ಕ ಮಾಡಿ ಅಧಿಕಾರಿಗಳನ್ನು ಕರೆಯಿಸಿದರೂ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ , ಮೆಸ್ಕಾಂ, ಪಶುಸಂಗೋಪನಾ ಇಲಾಖಾ ಅಧಿಕಾರಿಗಳು ಗೈರಾಗಿದ್ದರು. ಹೀಗಾಗಿ ಗ್ರಾಮಸ್ಥರೇ ವರದಿ ನೀಡಿ ಬಳಿಕ ಸಭೆಯಿಂದ ಹೊರನಡೆದರು. ಹೀಗಾಗಿ ಗ್ರಾಮ ಸಬೆ ಮುಂದೂಡಲಾಯಿತು.
ಗ್ರಾಮ ಸರಕಾರ ಇತ್ತೀಚೆಗೆ ವೈಫಲ್ಯವಾಗುತ್ತಿದೆ. ಅಧಿಕಾರ ಹಳ್ಳಿಯಲ್ಲೇ ಇದೆ. ಪ್ರತೀ ಹಂತದಲ್ಲೂ ಗ್ರಾಮ ಸಭೆಯ ನಿರ್ಣವೇ ಅಂತಿಮವಾಗುತ್ತದೆ. ಹೀಗಾಗಿ ಅಧಿಕಾರ ಜನರಲ್ಲೇ ಇದೆ. ಈ ಕಾರಣದಿಂದ ಗ್ರಾಮ ಸಭೆ, ಗ್ರಾಮ ಪಂಚಾಯತ್ ಆಡಳಿತ ಬಲವಾಗಬೇಕು. ಇಲಾಖೆಗಳು, ಅಧಿಕಾರಿಗಳು ಗ್ರಾಮ ಸಭೆ, ಗ್ರಾಮ ಸರಕಾರವನ್ನು ನಿರ್ಲಕ್ಷ್ಯ ಮಾಡುವ ಬಗ್ಗೆ ಸುಳ್ಯನ್ಯೂಸ್.ಕಾಂ ಇಂದು ಫೋಕಸ್ ಸ್ಟೋರಿ ಮಾಡಿತ್ತು. ಇದಕ್ಕೆ ಪಂಜದ ವರದಿಯೂ ಸಾಕ್ಷಿಯಾಯಿತು.
ಈ ವರದಿಯ ಲಿಂಕ್ ಇಲ್ಲಿದೆ…
https://theruralmirror.com/?p=6965
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.