ಅನ್ಸಾರಿಯಾ ಮಿಲಾದ್ ಫೆಸ್ಟ್ ಗೆ ಚಾಲನೆ

November 24, 2019
8:50 AM

ಸುಳ್ಯ: ವಿದ್ಯಾರ್ಥಿಗಳು ತಮ್ಮ ಬಾಲ್ಯದಲ್ಲಿಯೇ ತಮ್ಮ ನೈಜ ಪ್ರತಿಭೆಗಳನ್ನು ಅನಾವರಣಗೊಳಿಸಿದರೆ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ ಎಂದು ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ. ಮುಸ್ತಫ ಹೇಳಿದರು.

ಸುಳ್ಯ ಅನ್ಸಾರಿಯಾ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರ, ದಅವಾ ಕಾಲೇಜು, ಗ್ರೀನ್‍ವ್ಯೂ ಅರೇಬಿಕ್ ಸ್ಕೂಲ್ ಹಾಗೂ ಅನ್ಸಾರಿಯಾ ಮದರಸ ಇದರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ `ಇಂಟರ್ ಮಿಲಾದ್ ಫೆಸ್ಟ್’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಅನ್ಸಾರಿಯಾದ ಅಧ್ಯಕ್ಷ ಹಾಜಿ. ಕೆ. ಎಂ. ಅಬ್ದುಲ್ ಮಜೀದ್ ಜನತ ವಹಿಸಿದ್ದರು. ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳರವರು ದ್ವಿದಿನ ಫೆಸ್ಟ್ ಆದ `ಎನ್‍ಲೈಟಿಂಗ್ ದ ಎನರ್ಜಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಗಾಂಧಿನಗರ ಜುಮ್ಮಾ ಮಸೀದಿ ಉಪಾಧ್ಯಕ್ಷ ಹಮೀದ್ ಜನತಾ, ದ.ಕ. ಜಿಲ್ಲಾ ಮದರಸ ಅಧ್ಯಾಪಕರುಗಳ ಸಂಘದ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರು, ಎಂ.ಜೆ.ಎಂ. ಸಹಾಯಕ ಖತೀಬರಾದ ಶೌಕತ್ ಅಲಿ ಅಮಾನಿ ವಯನಾಡ್, ಝೈನುಲ್ ಆಬಿದೀನ್ ತಂಙಳ್ ಜಯನಗರ, ಸಮಿತಿ ಸದಸ್ಯರಾದ ಹಾಜಿ ಅಬ್ದುಲ್ ಗಫಾರ್, ಗಲ್ಫ್ ಪ್ರತಿನಿಧಿಗಳಾದ ಸಾಹು ಜಿದ್ದಾ, ಎಸ್.ಎಂ. ಅಬ್ದುರ್ರಹ್ಮಾನ್ ಭಾಗವಹಿಸಿದರು.

ಅನ್ಸಾರಿಯಾ ಮುದರ್ರಿಸರಾದ ಅಬೂಬಕ್ಕರ್ ಹಿಮಮಿ ಸಖಾಫಿ, ಮುಖ್ಯ ಗುರುಗಳಾದ ಝುಬೈರ್ ಹಿಮಾಮಿ, ಅಧ್ಯಾಪಕರುಗಳಾದ ನೌಶಾದ್ ಮದನಿ, ಯಾಕೂಬ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು. ವ್ಯವಸ್ಥಾಪಕ ಓವೈಸಿ ಬೀಟಿಗೆ ಸ್ವಾಗತಿಸಿ, ಸಿದ್ಧೀಕ್ ಮಾಸ್ಟರ್ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror