ಸುಳ್ಯ: ವಿದ್ಯಾರ್ಥಿಗಳು ತಮ್ಮ ಬಾಲ್ಯದಲ್ಲಿಯೇ ತಮ್ಮ ನೈಜ ಪ್ರತಿಭೆಗಳನ್ನು ಅನಾವರಣಗೊಳಿಸಿದರೆ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ ಎಂದು ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ. ಮುಸ್ತಫ ಹೇಳಿದರು.
ಸುಳ್ಯ ಅನ್ಸಾರಿಯಾ ಅನಾಥ ಮತ್ತು ನಿರ್ಗತಿಕ ಮಕ್ಕಳ ಕೇಂದ್ರ, ದಅವಾ ಕಾಲೇಜು, ಗ್ರೀನ್‍ವ್ಯೂ ಅರೇಬಿಕ್ ಸ್ಕೂಲ್ ಹಾಗೂ ಅನ್ಸಾರಿಯಾ ಮದರಸ ಇದರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ `ಇಂಟರ್ ಮಿಲಾದ್ ಫೆಸ್ಟ್’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಅನ್ಸಾರಿಯಾದ ಅಧ್ಯಕ್ಷ ಹಾಜಿ. ಕೆ. ಎಂ. ಅಬ್ದುಲ್ ಮಜೀದ್ ಜನತ ವಹಿಸಿದ್ದರು. ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳರವರು ದ್ವಿದಿನ ಫೆಸ್ಟ್ ಆದ `ಎನ್‍ಲೈಟಿಂಗ್ ದ ಎನರ್ಜಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಗಾಂಧಿನಗರ ಜುಮ್ಮಾ ಮಸೀದಿ ಉಪಾಧ್ಯಕ್ಷ ಹಮೀದ್ ಜನತಾ, ದ.ಕ. ಜಿಲ್ಲಾ ಮದರಸ ಅಧ್ಯಾಪಕರುಗಳ ಸಂಘದ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರು, ಎಂ.ಜೆ.ಎಂ. ಸಹಾಯಕ ಖತೀಬರಾದ ಶೌಕತ್ ಅಲಿ ಅಮಾನಿ ವಯನಾಡ್, ಝೈನುಲ್ ಆಬಿದೀನ್ ತಂಙಳ್ ಜಯನಗರ, ಸಮಿತಿ ಸದಸ್ಯರಾದ ಹಾಜಿ ಅಬ್ದುಲ್ ಗಫಾರ್, ಗಲ್ಫ್ ಪ್ರತಿನಿಧಿಗಳಾದ ಸಾಹು ಜಿದ್ದಾ, ಎಸ್.ಎಂ. ಅಬ್ದುರ್ರಹ್ಮಾನ್ ಭಾಗವಹಿಸಿದರು.
ಅನ್ಸಾರಿಯಾ ಮುದರ್ರಿಸರಾದ ಅಬೂಬಕ್ಕರ್ ಹಿಮಮಿ ಸಖಾಫಿ, ಮುಖ್ಯ ಗುರುಗಳಾದ ಝುಬೈರ್ ಹಿಮಾಮಿ, ಅಧ್ಯಾಪಕರುಗಳಾದ ನೌಶಾದ್ ಮದನಿ, ಯಾಕೂಬ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು. ವ್ಯವಸ್ಥಾಪಕ ಓವೈಸಿ ಬೀಟಿಗೆ ಸ್ವಾಗತಿಸಿ, ಸಿದ್ಧೀಕ್ ಮಾಸ್ಟರ್ ವಂದಿಸಿದರು.
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.
ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ…
ಹವಾಮಾನ ಬದಲಾವಣೆಯಿಂದ ಹಾಗೂ ತಾಪಮಾನದ ದಿಢೀರ್ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ…
ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಶೇಕಡ 0.48ರಷ್ಟು ಮಾರುಕಟ್ಟೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಸಂಸ್ಥೆಯ…
ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಧೈರ್ಯ, ಮತ್ತು ಆಕ್ರಮಣಕಾರಿ ನಿರ್ಧಾರಗಳ ಸಂಕೇತವಾಗಿದೆ.…