ಸುಳ್ಯ:ಅಂದಾಜು 23 ಕೋಟಿಯ ಮೌಲ್ಯದ ಅಬುದಾಬಿ ಲಾಟರಿಯ ಅದೃಷ್ಟ ಸುಳ್ಯದ ಯುವಕನಿಗೆ ಒಲಿದಿದೆ. ಗುರುವಾರ ಡ್ರಾ ಮಾಡಲಾದ 12 ಮಿಲಿಯನ್ ದಿರ್ ಹಾಂ(ಅಂದಾಜು 23 ಕೋಟಿ) ಲಾಟರಿಯ ಪ್ರಥಮ ಬಹುಮಾನ ಸುಳ್ಯ ಜಟ್ಟಿಪಳ್ಳದ ಮಹಮ್ಮದ್ ಫಯಾಜ್ ಅವರಿಗೆ ಲಭಿಸಿದೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ಉದ್ಯೋಗದಲ್ಲಿರುವ ಫಯಾಜ್ ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಅಬುದಾಬಿ ಲಾಟರಿ ಟಿಕೆಟ್ ಗಳನ್ನು ಖರೀದಿಸುತ್ತಿದ್ದರು. ಇದೀಗ ಪ್ರಥಮ ಬಹುಮಾನದ ರೂಪದಲ್ಲಿ ಅದೃಷ್ಠ ಒಲಿದು ಬಂದಿದೆ.
ಕಳೆದ ತಿಂಗಳು, ಇದೇ ಬಹುಮಾನದಲ್ಲಿ ದುಬೈ ಮೂಲದ ಫಿಲಿಪಿನಾ ವಲಸಿಗರು 10 ಮಿಲಿಯನ್ ಡಾಲರ್ ಗೆದ್ದಿದ್ದರು. ಇದೀಗ ಸುಳ್ಯದ ಮೂಲಕ ಯುವಕ ಸುಮಾರು 23 ಕೋಟಿ ರೂಪಾಯಿ ಮೌಲ್ಯವನ್ನು ಗೆದ್ದಿದ್ದಾರೆ. ವಿಶೇಷ ಎಂದರೆ ಯುಎಇಗೆ ಎಂದಿಗೂ ಭೇಟಿ ನೀಡದ ಭಾರತೀಯ ವ್ಯಕ್ತಿಯೊಬ್ಬರು ಗುರುವಾರ ಸಂಜೆ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 12 ಮಿಲಿಯನ್ ಗೆದ್ದಿದ್ದಾರೆ. ಗೆಳೆಯನ ಮೂಲಕ ಈ ರೀತಿಯ ಬಿಗ್ ಟಿಕೆಟ್ ಖರೀದಿಗೆ ಮುಂದಾಗಿದ್ದರು ಪಯಾಜ್.
ಈ ಬಗ್ಗೆ ಅಬುದಾಬಿ ಮಾಧ್ಯಮದೊಂದಿಗೆ ಮಾತನಾಡಿದ ಫಯಾಜ್, ಮೂತ್ರಪಿಂಡದ ಕಾಯಿಲೆಗಳಿಂದಾಗಿ ನನ್ನ ತಂದೆ ತಾಯಿ ಇಬ್ಬರೂ ತೀರಿಕೊಂಡರು. ನನ್ನ ತಂದೆ ಸೌದಿ ಅರೇಬಿಯಾದಲ್ಲಿ ದೀರ್ಘಕಾಲ ಕೆಲಸ ಮಾಡಿದ್ದರು. ಅವರು 12 ವರ್ಷಗಳಿಗಿಂತ ಹೆಚ್ಚು ಕಾಲ ಮೂತ್ರಪಿಂಡ ವೈಫಲ್ಯದ ವಿರುದ್ಧ ಹೋರಾಡಿದರು. ನನ್ನ ಹೆತ್ತವರು ಇಬ್ಬರೂ ನೋವಿನಿಂದ ನೋಡಿದ್ದೇವೆ. ನಾವು ಮಕ್ಕಳು ಇನ್ನೂ ಚೇತರಿಸಿಕೊಳ್ಳುತ್ತಿದ್ದೇವೆ ನಮ್ಮ ಹೆತ್ತವರು ನಮ್ಮೊಂದಿಗೆ ಇಲ್ಲದಿರುವುದು ಆಘಾತ. ನನಗೆ ತಂಗಿ ಇದ್ದಾರೆ. ನನ್ನ ಅಕ್ಕ ಮದುವೆಯಾಗಿದ್ದಾರೆ. ಮನೆ ನಿರ್ಮಿಸಲು ನಾವು ನಮ್ಮ ಜಮೀನಿನ ಒಂದು ಭಾಗವನ್ನು ಮಾರಿದೆವು. ಆದರೆ ಅದು ಈಗ ಬಾಕಿ ಉಳಿದಿದೆ. ಒಂದು ವರ್ಷದ ಹಿಂದೆ ನನ್ನ ಕುಟುಂಬದ ಉದ್ದೇಶದಿಂದ ಮುಂಬೈಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ಮೊದಲು ಡ್ರಾ ಗೆದ್ದಿರುವ ಬಗ್ಗೆ ಕರೆ ಬಂದಾಗ ನಂಬಲು ಆಗಲಿಲ್ಲ. ಬಳಿಕ ಆನ್ ಲೈನ್ ನಲ್ಲಿ ಪರಿಶೀಲನೆ ಮಾಡಿದಾಗ ಖಚಿತವಾಯಿತು. ಮುಂದೆ ಒಂದಷ್ಟು ಕನಸುಗಳು ಇವೆ. ಅದನ್ನು ಪೂರೈಸಬೇಕಿದೆ ಎಂದು ಮಾಧ್ಯಮದೊಂದಿಗೆ ಫಯಾಜ್ ಹೇಳಿದ್ದಾರೆ.
ರಾಷ್ಟ್ರೀಯ ರಾಜಧಾನಿ ದೆಹಲಿಗೆ ಮುಂಗಾರು ಮಳೆ ವಿಳಂಬವಾಗಿದ್ದು ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಸಾಮಾನ್ಯವಾಗಿ…
ಒಂದೇ ತಾಯಿಯ ಗರ್ಭದಿಂದ ಸಂಜನಿಸಿದ ಸಹೋದರರ ಗುಣಗಳಲ್ಲಿ ವ್ಯತ್ಯಾಸಗಳಿವೆ. ವ್ಯಕ್ತಿತ್ವ ರೂಪೀಕರಣದಲ್ಲೂ ಭಿನ್ನ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ರಸ್ತೆಯ ಗುಂಡಿಗಳಲ್ಲಿ ನೀರಿನ ಅಂಶ ಇರುವಾಗಲೂ ರಸ್ತೆ ತೇಪೆ ಕೆಲಸ ಮಾಡಬಹುದು ಹಾಗೂ…
2025-26ನೇ ಸಾಲಿನ ಪೂರ್ವ ಮುಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ…
ಯಾದಗಿರಿ ಜಿಲ್ಲೆಯ, ನಾರಾಯಣಪುರ ಅಣೆಕಟ್ಟೆ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಮತ್ತು ಆಲಮಟ್ಟಿ…