ಗುತ್ತಿಗಾರು: ದೇವಚಳ್ಳ ಗ್ರಾಮದ ತಳೂರು ಮಿತ್ತಡ್ಕ ನಿವಾಸಿ ಸತೀಶ್ ನಾಯ್ಕ ಮತ್ತು ಗಾಯತ್ರಿ ಯವರ ಪುತ್ರಿ ಅಮೃತಾಳಿಗೆ ಯುವಸ್ಪಂದನ ಟ್ರಸ್ಟ್ ನೆರವು ನೀಡಿದೆ. ಈಕೆ ಮಾವಿನಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿ. ಈಕೆಗೆ ಸುಮಾರು 6 ತಿಂಗಳಿಂದ ಥೊರಾಸಿಕ್ ಸ್ಕೂಲ್ ಎಂಬ ರೋಗದಿಂದ ಸಂಕಟ ಪಡುತ್ತಿದ್ದಾಳೆ. ಈ ರೋಗಕ್ಕೆ ಏನೋಪೊಯಾ ಆಸ್ಪತ್ರೆಯ ವೈದ್ಯರು ಸರಿಪಡಿಸುವ ಭರವಸೆ ನೀಡಿರುತ್ತಾರೆ .
ಶಸ್ತ್ರ ಚಿಕಿತ್ಸೆಗೆ ಹಣದ ಕೊರತೆಯಿಂದ ಸಂಘ ಸಂಸ್ಥೆಗಳ ಮೊರೆ ಹೋಗಿರುವ ಯುವತಿಯ ಮನೆಯವರು ನಮ್ಮ ಸಂಸ್ಥೆಗೆ ಧನಸಹಕಾರದ ಬೇಡಿಕೆಗೆ ಸ್ಪಂದಿಸಿ ಸಂಘದ ಸದಸ್ಯರು ಮತ್ತು ಊರ ಪರವೂರ ದಾನಿಗಳಿಂದ ರೂ 6,500 (ಆರು ಸಾವಿರದ ಐನೂರು ) ಚೆಕ್ಕನ್ನು ನೀಡುವ ಮೂಲಕ ಸ್ಪಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೆ ಬಿ ನವೀನ್ ಕುಮಾರ್ ,ಉಪಾಧ್ಯಕ್ಷರು ರವೀಶ್ ಮೊಟ್ಟೆ ,ಕಾರ್ಯದರ್ಶಿ ಶರತ್ ಎನ್ ಕೆ ,ನಿರ್ದೇಶಕರಾದ ರಾಜಿತ್ ಕಂದ್ರಪ್ಪಾಡಿ ,ಚರಣ್ ಸಾಯಿ ಮಧುರ ,ಪ್ರಶಾಂತ್ ಬಾಕಿಲ,ಶಿವರಾಮ್ ಮೊಟ್ಟೆ ,ಚಂದ್ರಶೇಖರ್ ಪಾರೆಪಾಡಿ ,ಶ್ರೇಯಸ್ ಮುತ್ಲಾಜೆ ,ಚೇತನ್ ಬಳ್ಳಡ್ಕ ಉಪಸ್ಥಿತರಿದ್ದರು .
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಈಚೆಗೆ…
ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ನಡೆದ ಕಲಾ ಸ್ಪರ್ಧೆಯಲ್ಲಿ ಸಂಸ್ಕೃತಿಯ ಚಲನೆ ಎನ್ನುವ ಕಲಾ…