ನನ್ನಮ್ಮ ಹೊತ್ತುಕೊಂಡಿದ್ದಾಳೆ ಕನಸುಗಳನ್ನು
ಹಿಡಿಯಲ್ಲಿ ಹಿಡಿಯದಷ್ಟು
ಹತ್ತಬಹುದು ಗಿರಿ ಶಿಖರಗಳನ್ನು
ಈಕೆಯ ಕನಸುಗಳಿವೆ ಹತ್ತಿ ಮುಗಿಯದಷ್ಟು..
ಬಡತನದ ಬೆವರಿನ ಹನಿಯೂ
ಪ್ರತಿ ನರನಾಡಿಗಳಲ್ಲೂ ಅರಗಿಸಲು
ಸಾಧ್ಯವಿಲ್ಲದ ನೋವು – ದುಃಖಗಲ್ಲೂ
ಕೊಟ್ಟಿದ್ದಾಳೆ ಭವಿಷ್ಯದ ಹೊಸ ಕನಸುಗಳನ್ನು..
ನನಸಾಗುವ ಹಾದಿಯಲ್ಲಿತ್ತು
ಆ ಕನಸುಗಳ ಗುಚ್ಛ
ತನ್ನಾಸೆಗಳ ಬದಿಗೊತ್ತಿ
ದುಡಿದಳು ನಿತ್ಯ ನಿರ್ಮಲೆಯಾಗಿ..
ಬತ್ತದಷ್ಟು ಬಯಕೆಗಳಿತ್ತು ಆ
ಕನಸುಗಳಲ್ಲಿ..ತಾನು ಮನಗಳಲ್ಲೂ
ಎಲ್ಲವನ್ನೂ ಅದುಮಿಟ್ಟಳು
ತನ್ನಂತರಂಗದ ಆಂತರ್ಯದಲ್ಲಿ..
ತನಗಾಗಿ ಹಿಗ್ಗಲ್ಲಿಲ್ಲ ಜಗ್ಗಲಿಲ್ಲ
ಹಿಗ್ಗಿದಳು ಕುಗ್ಗಿದಳು..ತನ್ನವರಿಗಾಗಿ
ಉಸಿರುಗಟ್ಟಿ ದುಡಿದಳು , ಶ್ರಮಿಸಿದಳು
ಎಂದೆಂದಿಗೂ ತನ್ನ ಕರುಳ ಬಳ್ಳಿಗಾಗಿ..
ಎಡೆಬಿಡದ ಕರ್ಮ , ಕ್ಲಿಷ್ಟ ಯಾತನೆಗಳ ಉದ್ದಕ್ಕೂ
ಬೀಳಲಿಲ್ಲ ಬದುಕ ಬಂಡಿ
ಕಣ್ಣುಗಳಲ್ಲಿತ್ತು ಕಾತುರಗಳ ಛಾಯೆ
ಕಾಯುತ್ತಿದ್ದಳು ಚೈತ್ರದ ಕ್ಷಣಕ್ಕಾಗಿ
ತುಂಬಿ ಹೋಗಿತ್ತು ಜೀವ , ಬದುಕು , ಉಸಿರು
ಎಲ್ಲವೂ ಒಂದೇ ಆಗಿತ್ತು
ಹೃದಯ – ಕಣ್ಣುಗಳೆರಡೂ ಬಯಸಿತ್ತು
ಕರುಳ ಕುಡಿಯ ಕನಸುಗಳ ಅಸ್ತಿತ್ವವನ್ನು..
# ನಯನ.ಜಿ.ಎಸ್. , ಕೋಟೆ ಮುಂಡುಗಾರು.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…