ಸುಳ್ಯ: ರಾಜಕೀಯ ಮಾಡಿ, ಆದರೆ ಅಭಿವೃದ್ಧಿಯಲ್ಲಿ ಅಲ್ಲ. ಎಲ್ಲಾ ಶಕ್ತಿ ಪ್ರದರ್ಶನ ಮಾಡಿ ತೋರಿಸಿ ಅಭಿವೃದ್ಧಿ ಕಾರ್ಯದಲ್ಲಿ…!. ಇದು ಯಾಕೆ ಹೇಳ್ತಾರೆ ಎಂದರೆ ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆಯನ್ನು ನೋಡಿ.
ಕಳೆದ ಅನೇಕ ವರ್ಷಗಳಿಂದ ಈ ರಸ್ತೆ ಅವ್ಯವಸ್ಥೆ ಇದೆ. ಹಾಗಿದ್ದರೂ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆ ಹಾಗೂ ಮುಳ್ಯ ಕಜೆ ಯಾಗಿ ಪೇರಾಲು ಸೇರುವ ರಸ್ತೆ ತೀರಾ ಅವ್ಯವಸ್ಥೆಯಿಂದ ಕೂಡಿದೆ. ಸಾವಿರಾರು ಮಂದಿ ದಿನವೂ ಓಡಾಡ್ತಾರೆ ಈ ರಸ್ತೆಯಲ್ಲಿ. ಆದರೆ ಅಭಿವೃದ್ಧಿ ಮಾತ್ರಾ ಆಗಿಲ್ಲ. ಹಾಗೆಂದು ಈ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದರೆ ರಾಜಕೀಯ ಸೇರುತ್ತದೆ. ಅಷ್ಟು ಅನುದಾನ ನೀಡಿದೆ, ಇಷ್ಟು ಅನುದಾನ ನೀಡಿದೆ ಎಂದು ರಾಜಕೀಯ ಮಾಡಿ ಮಾತನಾಡುವ ಧ್ವನಿಯನ್ನೇ ಕುಗ್ಗಿಸಲಾಗುತ್ತದೆ ಎಂದು ಸ್ಥಳೀಯರು ವಿಷಾದದಿಂದ ಹೇಳುತ್ತಾರೆ. ಈಗಲೂ ಮತ್ತೆ ಕೇಳುತ್ತಾರೆ, ರಸ್ತೆ ಯಾವಾಗ ದುರಸ್ತಿಯಾಗುತ್ತದೆ…..??
ಯಾವುದಾದರೂ ಒಂದು ರಸ್ತೆಗೆ 50 ಮೀಟರ್ ಕಾಂಕ್ರೀಟ್ ಆದರೆ ತಕ್ಷಣವೇ ಬ್ಯಾನರ್ ಬೀಳುತ್ತದೆ, ಈ ರಸ್ತೆಗೂ ಒಂದು ಬ್ಯಾನರ್ ಹಾಕಿಸಬೇಕು ಎಂದು ಕೆಲವು ಮಂದಿ ಕುಹಕ ಮಾಡುತ್ತಾರೆ. ಬ್ಯಾನರ್ ಪ್ರಿಯರು ಇದನ್ನೂ ಗಮನಿಸಬೇಕು…!
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…