ಸುಳ್ಯ: ಗೂನಡ್ಕ,ಕರ್ನಾಟಕದ ಹಜ್ಜ್ ಸಚಿವರಾದ ಮಾನ್ಯ ಝಮೀರ್ ಅಹ್ಮದ್ ಖಾನ್ ಅವರು ಕೊಡುಗೆಯಾಗಿ ನೀಡಿದ ಕೋಟಾದಡಿ ಈ ವರ್ಷ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಪೇರಡ್ಕ ಖತೀಬ್,ಅಶ್ರಫ್ ಫೈಝಿ ಸುಂಕದಕಟ್ಟೆ, ಸದರ್ ಮುಅಲ್ಲಿಂ ಝಕರಿಯಾ ದಾರಿಮಿ ಅರ್ಕಾನ, ಹಾಗೂ ಆರಂತೋಡು ಖತೀಬರಾದ ಇಸಾಕ್ ಭಾಖವಿ ಉಸ್ತಾದ್ ರವರನ್ನು ಗೂನಡ್ಕ ಶಾಖಾ SKSSF ವತಿಯಿಂದ ಶಾಲು ಹೊದೆಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಪೇರಡ್ಕ ಮಸೀದಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯದ್ NPM ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ,ಉಸ್ತಾದರಿಗೆ ಸಾಲು ಹೊದೆಸಿ ಸನ್ಮಾನಿಸಿ ಬೀಳ್ಕೊಟ್ಟರು,
ಈ ಕೊಡುಗೆಯನ್ನು ನೀಡಿದ ಮಾನ್ಯ ಸಚಿವರಿಗೆ ಹಾಗೂ ಉಚಿತ ಹಜ್ಜ್ ಯಾತ್ರೆ ಪೇರಡ್ಕದ ಉಸ್ತಾದ್ ರವರಿಗೆ ಸಿಗುವಂತಾಗಳು ಶ್ರಮಿಸಿದ ಟಿ, ಎಂ,ಶಾಹಿದ್ ರವರಿಗೆ ತಂಙಳ್ ಅಭಿನಂದಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೇರಡ್ಕ ಜಮಾಅತ್ ಅಧ್ಯಕ್ಷರಾದ ಟಿ. ಈ.ಆರೀಫ್ ತೆಕ್ಕಿಲ್,ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕರಾವಳಿ,
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ.ಶಾಹಿದ್ ,ಕಾರ್ಯದರ್ಶಿ ಅಶ್ರಫ್ ಗುಂಡಿ,ಪೇರಡ್ಕ ಜಮಾಅತ್ ಕಾರ್ಯದರ್ಶಿ ಪಿ.ಕೆ.ಉಮ್ಮರ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ.ಹಮೀದ್, ರಿಸರ್ವ್ ಪೊಲೀಸ್ ASI ಜಾಫರ್ ಸಾದಿಕ್, ದ ಕ ಜಿಲ್ಲಾ ವಿಖಾಯ ಉಪಾಧ್ಯಕ್ಷರಾದ ತಾಜುದ್ದೀನ್ ಟರ್ಲಿ,ಅಬ್ದುಲ್ ಕಾದರ್ ಮೊಟ್ಟೆ0ಗಾರ್,ಬಾಬಾ ಹಾಜಿ ರಜಾಕ್ ಹಾಜಿ ,ಹಕೀ0 ದರ್ಕಸ್,ಜಾವೇದ್ ತೆಕ್ಕಿಲ್,ಝುಬೈರ್ ಪಾಂಡಿ ಉಪಸ್ಥಿತರಿದ್ದರು.
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…
ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…