ಸುಳ್ಯ: ಪ್ರಯಾಣಿಕರೊಬ್ಬರು ಪುತ್ತೂರು- ಸುಬ್ರಹ್ಮಣ್ಯ ರಾಜಹಂಸ ಬಸ್ಸಲ್ಲಿ ಕೂತಿದ್ದರು. ಅದು ಬೆಂಗಳೂರಿಗೆ ತೆರಳುವ ಬಸ್ಸು. ಕೂತಿದ್ದಾಗ ಜಿರಲೆಯೊಂದು ಮೇಲಿಂದಲೇ ಓಡಿತು. ಪರವಾಗಿಲ್ಲ, ಮಳೆಗಾಲವಲ್ಲಾ ಇದೆಲ್ಲಾ ಇರುತ್ತೆ ಎಂದು ಸುಮ್ಮನೆ ಕುಳಿತರು. ಸ್ವಲ್ಪ ಹೊತ್ತಲ್ಲ ಇನ್ನಷ್ಟು ಜಿರಲೆ ಮೇಲೆಲ್ಲಾ ಓಡಲು ಶುರು ಮಾಡಿತು, ಸಹವಾಸವೇ ಬೇಡವೆಂದು ಬೇರೆ ಸೀಟಲ್ಲಿ ಕುಳಿತರು…!
ಮಳೆಗಾಲ ಜಿರಲೆ ಸೇರಿದಂತೆ ಸಣ್ಣಪುಟ್ಟ ಕೀಟಗಳು ಇದ್ದೇ ಇರುತ್ತದೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಜಿರಲೆ ಇದೆ ಎಂದರೆ ಅದು ನಿರ್ಲಕ್ಷ್ಯವೇ ಸರಿ. ಅದೂ ಬೆಂಗಳೂರಿಗೆ ತೆರಳುವ ಬಸ್ಸಲ್ಲಿ ಈ ಪರಿಯಾಗಿ ಜಿರಲೆ ಇದೆ ಎಂದರೆ ಬೆಂಗಳೂರಿಗೆ ತೆರಳುವ ಪ್ರಯಾಣಿಕನ ಗೋಳು ಯಾರಿಗೆ ಹೇಳಿ..? ಹೀಗಾಗಿ ಕೆ ಎಸ್ ಆರ್ ಟಿ ಸಿ ಈ ಕಡೆಗೆ ಕೊಂಚ ಗಮನಹರಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…