ಸುಳ್ಯ: ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ (ರಿ)ವತಿಯಿಂದ ನ.10ರಂದು ಈದ್ ಮಿಲಾದ್ ಫೆಸ್ಟಿವಲ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಅರಂತೋಡು ಮಸೀದಿ ವಠಾರದಲ್ಲಿ ನಡೆಯಿತು.
ಜಮಾ ಅತ್ ಅಧ್ಯಕ್ಷ ಅಬ್ದುಲ್ ಖಾದರ್ ಧ್ವಜಾರೋಹಣ ನೇರವೆರಿಸಿದ್ದರು. ಬಳಿಕ ಮಿಲಾದ್ ಜಾಥಾವು ಮಸೀದಿಯಿಂದ ಹೊರಟು ತೆಕ್ಕಿಲ್ ಟಿ.ಎಮ್ ಶಹೀದ್ ನಿವಾಸಕ್ಕೆ ತೆರಳಿ ಅಲ್ಲಿಂದ ಉದಯನಗರದವರೆಗೆ ಸಂಚರಿಸಿ ಮಸೀದಿ ಬಳಿ ಸಮಾಪ್ತಿಗೊಂಡಿತ್ತು. ದಾರಿ ಉದ್ದಕ್ಕೂಸಿಹಿ ತಿಂಡಿ ನೀಡಿ ಸಹಕರಿಸಿದರು. ಜಮಾ ಅತ್ ಅಧ್ಯಕ್ಷ ಅಬ್ದುಲ್ ಖಾದರ್ ಪಠೇಲ್ ರವರು ಅಧ್ಯಕ್ಷತೆ ವಹಿಸಿದ್ದರು.
ನಂತರ ಮದರಸ ವಿದ್ಯಾರ್ಥಿಗಳಿಂದ ಇಸ್ಲಾಮಿಕ್ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮದರಸ ವಿದ್ಯಾರ್ಥಿಗಳಿಂದ ದಫ್ ಸ್ಪರ್ಧೆ, ಹಾಡು, ಭಾಷಣಗಳ ಸ್ಪರ್ಧೆಗೆ ಬಹುಮಾನ ವಿತರಣೆ ನಡೆಯಿತು. ಕಾರ್ಯಕ್ರಮವನ್ನು ನವಾಜ್ ದಾರಿಮಿ ಉದ್ಘಾಟಿಸಿದರು. ವೇದಿಕೆಯಲ್ಲಿ ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕರಾದ ಬಹು ನವಾಜ್ ದಾರಿಮಿ, ಸಹ ಅಧ್ಯಾಪಕರಾದ ಬಶೀರ್ ದಾರಿಮಿ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್, ಟಿ.ಎಮ್ ಬಾಬ ಹಾಜಿ ತೆಕ್ಕಿಲ್, ಎನ್ ಐ. ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಮೂಸಾನ್ ಕೆ.ಎಮ್, ಹಾಜಿ ಎಸ್.ಇ.ಮಹಮ್ಮದ್, ಅರಂತೋಡು ಜಮಾಅತ್ ಕಾರ್ಯದರ್ಶಿ ಅಶ್ರಫ್ ಗುಂಡಿ, ಮಾಜಿ ಅಧ್ಯಕ್ಷರಾದ ಹಾಜಿ ಅಹ್ಮದ್ ಪಠೇಲ್ ಅನಿವಾಸಿ ಭಾರತೀಯರಾದ ಬದುರುದ್ದೀನ್ ಪಠೇಲ್, ಜಾವೇದ್ ಪೆಲ್ತಡ್ಕ, ಅಶ್ರಫ್ ಅದೂರು, ಸಮದ್ ಗುಂಡಿ, ವಹಾಬ್ ಕುಕ್ಕುಂಬಳ, ಅರಂತೋಡು ಶಾಖೆ ಅಧ್ಯಕ್ಷ ಆಶೀಕ್ ಕುಕ್ಕುಂಬಳ, ಎಸೋಸಿಯೆಶನ್ ಉಪಾಧ್ಯಕ್ಷ ಶರೀಫ್ ಕುಕ್ಕುಂಬಳ, ಕಾರ್ಯದರ್ಶಿ ಫಸೀಲು , ಹನೀಫ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಜೀದ್ ಸ್ವಾಗತಿಸಿ, ಅಶ್ರಫ್ ಗುಂಡಿ ವಂದಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…
ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…
15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್‌ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…