ಸಂಪಾಜೆ: ಮಡಿಕೇರಿ ಗಡಿಭಾಗವಾದ ಅರೆಕಲ್ಲು ಪ್ರದೇಶದ ಕೊಪ್ಪರಿಗೆ ಗುಡ್ಡೆ ಎಂಬ ಪ್ರದೇಶದಲ್ಲಿ ದೊಡ್ಡ ಬಂಡೆಕಲ್ಲು ಉರುಳಿ ಬಿದ್ದಿರುವುದು ಸ್ಥಳಿಯರ ಗಮನಕ್ಕೆ ಬಂದಿದೆ. ಆದರೆ ಯಾವುದೇ ಅಪಾಯ ಕಂಡುಬಂದಿಲ್ಲ. ಬಂಡೆ ಉರುಳುವಾಗ ದೊಡ್ಡ ಸದ್ದು ಕೇಳಿ ಬಂದಿದೆ. ಬಂಡೆ ಕಲ್ಲು ಉರುಳುವಾಗ ಕೆಲವು ಮರಗಳು ಬಿದ್ದಿದೆ. ಹೀಗಾಗಿ ಇನ್ನಷ್ಟು ಸದ್ದು ಕೇಳಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಆದರೆ ಬಂಡೆಕಲ್ಲು ಬಿದ್ದಿರುವುದು ಹೇಗೆ ಎಂಬ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇಲ್ಲ.
ಇದುವರೆಗೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರಸ್ತೆ ಸಂಪರ್ಕ ಇದೆ. ಏನು ಸಮಸ್ಯೆ ಆಗಿಲ್ಲ, ಜನರು ಭಯ ಪಡುವ ಅಗತ್ಯ ಈಗ ಇಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel