ಆಲೆಟ್ಟಿ: ಆಲೆಟ್ಟಿ ಸರಕಾರಿ ಆಶ್ರಮ ಶಾಲೆಯಲ್ಲಿ ಪೆಬ್ರವರಿ 1 ರಂದು ಅಡುಗೆ ಸಿಬ್ಬಂದಿಯಾಗಿ ಸುಮಾರು 28 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಾಸು ಡಿ ರವರಿಗೆ ಶಾಲೆಯ ಮತ್ತು ಪೋಷಕರ ವತಿಯಿಂದ ಬೀಳ್ಕೊಡುವ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪೋಷಕ ಸಂಘದ ಅಧ್ಯಕ್ಷ ವಿಶ್ವನಾಥ ವಹಿಸಿದ್ದರು. ಸಭೆಯಲ್ಲಿ ಮುಖ್ಯ ಅಥಿತಿಯಾಗಿ ಶಾಲಾ ನಿವೃತ್ತ ಶಿಕ್ಷಕಿ ಶೇಷಮ್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್, ಮುಖ್ಯ ಗುರುಗಳಾದ ಮಾಧವ, ಪೋಷಕರ ಸಂಘದ ಉಪಾಧ್ಯಕ್ಷೆ ಪವಿತ್ರ, ಶಾಲಾ ನಾಯಕಿ ವೈಷ್ಣವಿ, ನಿವೃತ್ತರಾದ ವಾಸು ಅವರ ಧರ್ಮಪತ್ನಿ ವಿನೋದ ಉಪಸ್ಥಿತರಿದ್ದರು. ನಿವೃತ್ತ ವಾಸು ದಂಪತಿಗಳನ್ನು ಶಾಲೆ ಮತ್ತು ಪೊಷಕರ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರ ಕಿರು ಪರಿಚಯವನ್ನು ಶಾಲಾ ಶಿಕ್ಷಕಿ ಗೀತಾರವರು ವಾಚಿಸಿದರು.
ಅಲೆಟ್ಟಿ ಸೊಸೈಟಿ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಮ ಆಲೆಟ್ಟಿ ಹಾಗೂ ಪೋಷಕರ ಪರವಾಗಿ ಶ್ರೀಧರ ಮಾಣಿಮರ್ಧು, ವಿದ್ಯಾರ್ಥಿಗಳಾದ ವೈಷ್ಣವಿ, ಪೂರ್ವಿತಾ, ವೀಕ್ಷಿತಾ, ಸಂತೋಷ್, ಗುರುಪ್ರಸಾದ್ ,ನೂತನ್, ತುಷಾರ್ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು, ಹಳೆವಿಧ್ಯಾರ್ಥಿಗಳು, ಊರ ಅಭಿಮಾನಿಗಳು ಕಿರುಕಾಣಿಕೆ ನೀಡಿ ಹಾರ ಹಾಕಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಮೋನಿಕಾ ಮತ್ತು ಕಾವ್ಯಾಂಜಲಿ ಪ್ರಾರ್ಥಿಸಿದರು. ಮುಖ್ಯ ಗುರುಗಳಾದ ಮಾಧವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಧರ ಮಾಣಿಮರ್ಧು ವಂದಿಸಿ, ಶಾಲಾ ಸಹಶಿಕ್ಷಕಿ ಹೇಮಲತಾ ಮತ್ತು ಪಂಚಾಯತ್ ಸಿಬ್ಬಂದಿ ಸೀತಾರಾಮ ಮೊರಂಗಲ್ಲು ಕಾರ್ಯಕ್ರಮ ನಿರೂಪಿಸಿದರು.
ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ಮೇಲೆ ರೈತಾಪಿ ವರ್ಗ ಬಹಳ ನಿರೀಕ್ಷೆ…
ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ…
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…