ಪೈಂಬೆಚ್ಚಾಲು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಪೈಂಬೆಚ್ಚಾಲು ಶಾಖೆಯ ವಾರ್ಷಿಕ ಮಹಾಸಭೆಯು ಪೆಬ್ರವರಿ 2 ರಂದು ಶಾಖಾಧ್ಯಕ್ಷರಾದ ಆಸಿಫ್ ಕೆ.ಎಂ.ರವರ ಅಧ್ಯಕ್ಷತೆಯಲ್ಲಿ ಎಚ್.ಐ.ಮದರಸಾ ವಠಾರದಲ್ಲಿ ನಡೆಯಿತು.
ಸುಳ್ಯ ಸೆಕ್ಟರ್ ಕೋಶಾಧಿಕಾರಿ ಸಿದ್ದೀಖ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಖತೀಬ್ ಉಸ್ತಾದ್ ಅಬ್ದುನ್ನಾಸಿರ್ ಸುಖೈಫಿ ಮುಖ್ಯ ಪ್ರಭಾಷಣ ಗೈದರು. ಎಸ್ ವೈಎಸ್ ಅಧ್ಯಕ್ಷರಾದ ಅಡ್ವಕೇಟ್ ಮೂಸ ಪಿ.ಎಂ.ಶುಭಹಾರೈಸಿ ಮಾತನಾಡಿದರು. ಎಸ್ ವೈಎಸ್ ನಾಯಕರಾದ ಉಸ್ಮಾನ್ ಸಿ.ಎಚ್., ರಫೀಖ್ ಪಿ.ಎಂ. ಮುಖ್ಯಾತಿಥಿಗಳಾಗಿ ಭಾಗವಹಿಸಿದರು. ಸೆಕ್ಟರ್ ನಾಯಕರಾದ ಪಿ.ಎಂ.ರಹೀಂ, ಸಿದ್ದೀಖ್ ಹಿಮಮಿ ವೀಕ್ಷಕರಾಗಿ ಆಗಮಿಸಿ ಸಭೆಯ ಮೇಲ್ನೋಟವನ್ನು ವಹಿಸಿದರು. ಮುಂದಿನ ಸಾಲಿಗೆ ಪ್ರಸ್ತುತ ಸಮಿತಿಯನ್ನೇ ಮುಂದುವರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಆಸಿಫ್ ಕೆ.ಎಂ, ಉಪಾಧ್ಯಕ್ಷರು ಅಬ್ದುರ್ರಝ್ಝಾಖ್ ಪಿ.ಎ, ಅಬ್ದುಲ್ ಅಲಿ ಪಿ. ಪ್ರ. ಕಾರ್ಯದರ್ಶಿ ಟಿ.ಎ.ಎಚ್. ಸಅದಿ, ಜೊ.ಕಾರ್ಯದರ್ಶಿ ಹಸೈನಾರ್ ಕೆ.ಎಂ., ಕೋಶಾಧಿಕಾರಿ ಶೆರೀಫ್ ಟಿ.ಎ., ನೌಶಾದ್ ಕೆ.ಎಚ್., ಸಿದ್ದೀಖ್ ಸಖಾಫಿ, ಅಬ್ದುರ್ರಹ್ಮಾನ್ ಪಿ.ಎಂ, ಆಬಿದ್ ಸಖಾಫಿ ಪಿ.ಎ, ಕಮಾಲ್ ಸಿ, ಸಾಬಿತ್ ಟಿ.ಎ, ತಮೀಮ್ ಟಿ.ಐ. ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಟಿ.ಎ.ಎಚ್.ಸಅದಿ ಸ್ವಾಗತಿಸಿ, ಧನ್ಯವಾದವಿತ್ತರು.
ದೇಶದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ…
ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಹಸಿರು…
ಅಡಿಕೆ ಸಿಪ್ಪೆ, ಸೋಗೆ ಮತ್ತು ಇತರ ಕೃಷಿ ಅವಶೇಷಗಳಿಂದ ಕಾರ್ಬನ್ ನ್ಯಾನೋಸ್ಫಿಯರ್ಗಳನ್ನು ಅಭಿವೃದ್ಧಿಪಡಿಸಿ,…
ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…
ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್ಎಂಎಸ್ಜಿ ಕಾಂಪ್ಲೆಕ್ಸ್ನಲ್ಲಿ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…