Advertisement
MIRROR FOCUS

ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ

Share
ಸರ್ಕಾರವು ತಂಬಾಕು ಹಾಗೂ ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್‌ಮಸಾಲಾ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಗೆ ಒಂದು ವರ್ಷದ ನಿಷೇಧ ಹೇರಿರುವುದನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಗೌರವಿಸುತ್ತದೆ. ಆದರೆ, ಈ ನಿರ್ಧಾರದ ಯಾವುದೇ  ರೀತಿಯಿಂದಲೂ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀಳದಂತೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ.
ತಂಬಾಕು ಮತ್ತು ನಿಕೋಟಿನ್ ಹೊಂದಿರುವ ನಿಷೇಧಿತ ಉತ್ಪನ್ನಗಳು ಹಾಗೂ ಸಾಂಪ್ರದಾಯಿಕವಾಗಿ ಕೃಷಿ ಮಾಡಲಾಗುತ್ತಿರುವ ಅಡಿಕೆಯನ್ನು ಒಂದೇ ದೃಷ್ಟಿಯಲ್ಲಿ ನೋಡಬಾರದು. ಗುಟ್ಕಾ ನಿಷೇಧವೆಂದರೆ ಅಡಿಕೆ ನಿಷೇಧವಲ್ಲ. ತಂಬಾಕು–ನಿಕೋಟಿನ್ ಉತ್ಪನ್ನಗಳ ವಿರುದ್ಧ ಸರ್ಕಾರ ಕೈಗೊಳ್ಳುವ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅಡಿಕೆಯ ಕೃಷಿ, ಮಾರುಕಟ್ಟೆ ಮತ್ತು ಬೆಳೆಗಾರರ ಜೀವನೋಪಾಯದ ಮೇಲಿನ ಕ್ರಮವಾಗಿ ಪರಿಗಣಿಸಬಾರದು. ಈ ಹಿಂದಿನ ಅನುಭವಗಳನ್ನೂ ಗಮನಿಸಿದರೆ, ಗುಟ್ಕಾ ನಿಷೇಧದಿಂದ ಅಡಿಕೆ ಮಾರುಕಟ್ಟೆಯಲ್ಲಿ ಕುಸಿತ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. 2014 ರಲ್ಲಿಯೂ ದೇಶದ ಹಲವು ರಾಜ್ಯಗಳಲ್ಲಿ ಗುಟ್ಕಾ ನಿಷೇಧ ಜಾರಿಯಲ್ಲಿದ್ದ ಸಂದರ್ಭದಲ್ಲಿಯೇ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡಿರುವುದನ್ನು ಗಮನಿಸಬಹುದು. ಹೀಗಾಗಿ ಗುಟ್ಕಾ ನಿಷೇಧದ ಪರಿಣಾಮವನ್ನು ಅಡಿಕೆಯ ಮಾರುಕಟ್ಟೆಯೊಂದಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಹೀಗಾಗಿ ಅಡಿಕೆ ಬೆಳೆಗಾರರು ಕೂಡಾ ಯಾವುದೇ ಗಾಬರಿಗೆ ಒಳಗಾಗಬಾರದು ಎಂದು ಸಂಘವು ಹೇಳಿದೆ.ಈಗ ಅಡಿಕೆಯ  ಬೇಡಿಕೆ, ದೇಶೀಯ ಬಳಕೆ, ಕೈಗಾರಿಕಾ ಬಳಕೆ, ರಫ್ತು ಹಾಗೂ ವಿವಿಧ ಮಾರುಕಟ್ಟೆಗಳಿಗೆ ಆಗುತ್ತಿರುವ ಪೂರೈಕೆಯ ಕುರಿತು ಸಮಗ್ರ ಅಧ್ಯಯನ ನಡೆಸಬೇಕು. ಅಕ್ರಮ ಹಾಗೂ ಅನಗತ್ಯ ಆಮದುಗಳಿಂದ ದೇಶೀಯ ಅಡಿಕೆ ಮಾರುಕಟ್ಟೆಯ ಮೇಲೆ  ತೊಂದರೆಯಾಗದಂತೆ ಆಮದು ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅಡಿಕೆಗೆ ನಿಗದಿಪಡಿಸಿರುವ ಕನಿಷ್ಠ ಆಮದು ಬೆಲೆಯೂ ಕಟ್ಟುನಿಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಘವು ಆಗ್ರಹಿಸಿದೆ. ದೇಶದ ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನೋಪಾಯ ಅಡಿಕೆ ಕೃಷಿಯೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ಯಾವುದೇ ತಂಬಾಕು ವಿರೋಧಿ ಸಾರ್ವಜನಿಕ ಆರೋಗ್ಯ ನೀತಿಯ ಹೊರೆ ಅಡಿಕೆ ಬೆಳೆಗಾರರ ಮೇಲೆ ಬೀಳದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ನೀತಿ ರೂಪಿಸಬೇಕು.

ಇದೆಲ್ಲದರ ಹೊರತಾಗಿಯೂ ಲಕ್ಷಾಂತರ ಅಡಿಕೆ ಬೆಳೆಗಾರರ ಜೀವನಾಡಿ, ಆರ್ಥಿಕ ಮೂಲವೂ ಆಗಿರುವ ಅಡಿಕೆ ಮಾರುಕಟ್ಟೆಯಲ್ಲಿ ಒಂದು ವೇಳೆ ಬೆಲೆ ಕುಸಿತ ಉಂಟಾದಲ್ಲಿ ಬೆಳೆಗಾರರನ್ನು ರಕ್ಷಿಸಲು ಮಾರುಕಟ್ಟೆ ಸ್ಥಿರೀಕರಣ ವ್ಯವಸ್ಥೆಯನ್ನು ಕೂಡಾ ಸರ್ಕಾರ ಪರಿಗಣನೆ ಮಾಡಬೇಕು.  ನಿಷೇಧಿತ ತಂಬಾಕು–ನಿಕೋಟಿನ್ ಉತ್ಪನ್ನಗಳ ವಿರುದ್ಧದ ಕ್ರಮಕ್ಕೆ ಅಡಿಕೆ ಬೆಳೆಗಾರರ ಸಂಘದ ಯಾವುದೇ ವಿರೋಧವಿಲ್ಲ. ಅಡಿಕೆಯ ಪರ್ಯಾಯ ಬಳಕೆಯೂ ಈಗಾಗಲೇ ಇದೆ. ಅಡಿಕೆಯ ಸಿಹಿ ಸುಪಾರಿ, ಚಹಾ ಸೇರಿದಂತೆ ಇತರ ಉತ್ಪನ್ನಗಳೂ ಇವೆ. ಹೀಗಾಗಿ ಈಗ ಕ್ರಮದ ಹೆಸರಿನಲ್ಲಿ ಅಡಿಕೆ ಬೆಳೆಗಾರರು, ಅಡಿಕೆ ವ್ಯಾಪಾರಿಗಳು ಅಥವಾ ಕಾನೂನುಬದ್ಧ ಅಡಿಕೆ ಮಾರುಕಟ್ಟೆಗೆ ಅನಗತ್ಯ ತೊಂದರೆ ಉಂಟಾಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸುತ್ತದೆ ಎಂದು ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ ಹಾಗೂ ಕಾರ್ಯದರ್ಶಿ ಸಿ ಜಿ ವೆಂಕಟಗಿರೀಶ್‌ ತಿಳಿಸಿದ್ದಾರೆ.

ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

The All India Arecanut Growers Association has welcomed Karnataka’s one-year ban on the sale and distribution of tobacco and nicotine-containing gutka and pan masala products from a public health perspective, while urging the government to ensure that the decision does not adversely affect arecanut growers or the legitimate arecanut trade. The association stressed that a gutka ban is not an arecanut ban and said there is no basis to assume that the ban will automatically lead to a fall in arecanut prices. It cited the experience of 2014, when arecanut prices increased despite gutka bans in several states. The association has called for a comprehensive study of domestic demand, industrial use, exports and supply, stricter enforcement of import controls and minimum import price rules, and a market stabilisation mechanism to protect growers if prices fall.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

30 minutes ago

ತಂಬಾಕು ನಿಷೇಧ ಜಾರಿ: ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸ್ಪಷ್ಟ ಚೌಕಟ್ಟು ರೂಪಿಸಿ – ಕ್ಯಾಂಪ್ಕೊ

ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಹಾಗೂ…

1 hour ago

ಹವಾಮಾನ ವರದಿ | 12-08-2026 | ಕರ್ನಾಟಕದಲ್ಲಿ ಮುಂದುವರಿಯಲಿದೆ ಬಿಡುವಿನ ಮಳೆ

ಕರಾವಳಿ ಹಾಗೂ ಮಲೆನಾಡಿನಲ್ಲಿ ಬಿಸಿಲು, ಮೋಡ ಮತ್ತು ಬಿಡುವಿನ ಸಾಮಾನ್ಯ ಮಳೆ ಮುಂದುವರಿಯುವ…

2 hours ago

ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ

ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…

14 hours ago

ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ

ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್‌ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…

22 hours ago

ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ

ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…

23 hours ago