ಧರ್ಮಪತ್ನಿ ಲಕ್ಷ್ಮೀ ಅಮ್ಮ, ಜೇಷ್ಟ ಪುತ್ರ ಡಾಕ್ಟರ್ ಈಶ್ವರಯ್ಯ ಅವರನ್ನೊಳಗೊಂಡಂತೆ ಮೂವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಮತ್ತು ಅಪಾರ ಬಂಧು, ಅಭಿಮಾನಿ ಬಳಗಕ್ಕೆ ನೆನಪುಗಳ ಮಧುರ ಭಾವಗಳನ್ನು ಬಿಟ್ಟು ತನ್ನ ಎಂಬತ್ತೊಂಬತ್ತನೇ ಹರೆಯದಲ್ಲಿ ಕಲ್ಮಡ್ಕ ಗ್ರಾಮದ ಗೋಳ್ತಜೆ ಸದಾಶಿವಯ್ಯನವರು ಇಹಲೋಕ ಯಾತ್ರೆ ಮುಗಿಸಿದರು.
ಸುಳ್ಯ ತಾಲೂಕಿನ ಶೇಣಿಯಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸದಾಶಿವಯ್ಯನವರು ಕಲ್ಮಡ್ಕ ಶಾಲೆಯಲ್ಲಿ ಅದ್ಯಾಪನಾ ಪ್ರವೃತ್ತಿಯನ್ನು ಮುಂದುವರಿಸಿ ನಿವೃತ್ತಿ ಹೊಂದಿ ಅದ್ಯಾಪಕರೆಂದರೆ ಹೇಗಿರಬೇಕೆಂದು ಮಾದರಿಯಾದವರು. ನೇರ ನಡೆ ನುಡಿಯವರಾದ ಸದಾಶಿವಯ್ಯನವರು ಹಿರಿಯ ಕಿರಿಯರೆನ್ನದೇ ಎಲ್ಲರೊಡನೆ ಆತ್ಮೀಯವಾಗಿ ಬೆರೆತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಧ್ಯಾಪನ ವೃತ್ತಿಯಂತೆಯೇ,ಕೃಷಿಯಲ್ಲೂ ಅಪಾರ ಅನುಭವ ಮತ್ತು ಪ್ರೀತಿ ಹೊಂದಿದ್ದರು.ಯುವಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮನೋಧರ್ಮ ಇವರದಾಗಿತ್ತು.ತಮ್ಮ ಇಳಿ ವಯಸ್ಸಿನಲ್ಲೂ ತಮ್ಮೂರು ಕಲ್ಮಡ್ಕದ ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಹಾಜರಿದ್ದು ಮಕ್ಕಳಲ್ಲಿ ಮತ್ತು ಸಭಿಕರಲ್ಲಿ ದೇಶಪ್ರೇಮದ ಜಾಗೃತಿ ಮೂಡಿಸುತ್ತಿದ್ದರು. ಧಾರ್ಮಿಕವಾಗಿ ನೋಡಿದರೆ ಇವರು ಹವ್ಯಕ ಸಮುದಾಯದ ಪರಂಪರಾಗತ ಗುರಿಕ್ಕಾರರು. ಗುರಿಕ್ಕಾರರಾಗಿ ನಿಖರವಾದ ವಿಚಾರಗಳನ್ನು ಮಂಡಿಸಿ ಸಂಪ್ರದಾಯಗಳನ್ನು ಅನುಸರಿಸಿ ಪಾಲಿಸಿ ತಮ್ಮೊಡನೆ ಸಮಾಜವನ್ನು ಕೊಂಡೊಯ್ಯುತ್ತಿದ್ದರು. ಇಂತಹ ವಿಶಿಷ್ಟ ಚೇತನ ಇಂದು ಲೌಕಿಕವಾಗಿ ಮರೆಯಾದರೂ ಅವರ ನಡೆ ನುಡಿ,ಪ್ರೀತಿಯ ಸೆಲೆಗಳು ಸದಾ ಚಿರಾಯು.
ಕವಿ ಗೋಪಾಲಕೃಷ್ಣ ಅಡಿಗರ ಕವಿತೆ……
“ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ.
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ ಧನ್ಯವಾಯಿತು
ಹುಟ್ಟು ಸಾವಿನಲ್ಲಿ……….”Advertisement
….. ಎಂಬಂತೆ ಅವರೆರೆದ ಅಕ್ಷರ ಸಾರ ಸದಾ ಜ್ಞಾನದ ಪೈರಾಗಿ ಅಮರವಾಗಿ ಜಗವ ಬೆಳಗೀತು,ಸುಜ್ಞಾನ ಸೇತುವಾಗಿ ಮತ್ತೊಮ್ಮೆ ಉದಿಸಿ ಬನ್ನೀ ……
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಕೇಂದ್ರ ಸರ್ಕಾರದ ಈ ಬಾರಿ ಬಜೆಟ್ ಮೇಲೆ ರೈತಾಪಿ ವರ್ಗ ಬಹಳ ನಿರೀಕ್ಷೆ…
ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ…
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು…