ಸುಳ್ಯ:2019-20 ನೇ ಸಾಲಿನ ದ.ಕ ಜಿಲ್ಲಾ ಮಟ್ಟದ ಯುವಜನೋತ್ಸವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮತ್ತು ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಇವರ ಸಂಯುಕ್ತ ಆಶ್ರಯದಲ್ಲಿ ಅ. 20ರಂದು ಮಂಗಳೂರು ತಾಲೂಕಿನ ಪಕ್ಷಿಕೆರೆ ಸಂತ ಜೂದರ ಶಾಲೆಯ ಸಭಾಭವನದಲ್ಲಿ ನಡೆಯಲಿದೆ.
ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜನಪದ ನೃತ್ಯ (15 ನಿಮಿಷ, ಗುಂಪು ಸ್ಪರ್ಧೆ, ಸ್ಪರ್ಧಿಗಳ ಸಂಖ್ಯೆ 20) ಜನಪದ ಹಾಡು (7 ನಿಮಿಷ, ಗುಂಪು ಸ್ಪರ್ಧೆ, ಸ್ಪರ್ಧಿಗಳ ಸಂಖ್ಯೆ 10), ಏಕಾಂಕ ನಾಟಕ (45 ನಿಮಿಷ, ಗುಂಪು ಸ್ಪರ್ಧೆ, ಸ್ಪರ್ಧಿಗಳ ಸಂಖ್ಯೆ 12 ಇಂಗ್ಲೀಷ್ ಅಥವಾ ಹಿಂದಿ ಭಾಷೆಗಳಲ್ಲಿ), ಶಾಸ್ತ್ರೀಯ ಸಂಗೀತ ( 15ನಿಮಿಷ, ಹಿಂದೂಸ್ತಾನಿ ಅಥವಾ ಕರ್ನಾಟಕ, ಶಾಸ್ತ್ರೀಯ ಸಂಗೀತ (5 ನಿಮಿಷ, ಹಿಂದೂಸ್ತಾನಿ ಅಥವಾ ಕರ್ನಾಟಕ ಶೈಲಿಯಲ್ಲಿ ತಬಲ, ವೀಣೆ, ಸಿತಾರ್, ಕೊಳಲು, ಮೃದಂಗ) ಶಾಸ್ತ್ರೀಯ ನೃತ್ಯ (15 ನಿಮಿಷ, ವೈಯಕ್ತಿಕ, ಮಣಿಪುರಿ, ಒಡಿಸ್ಸಿ, ಕಥಕ್, ಕೂಚಿಪುಡಿ ಮತ್ತು ಭರತನಾಟ್ಯವನ್ನು ಪ್ರದರ್ಶಿಸಬಹುದು), ಆಶುಭಾಷಣ (4 ನಿಮಿಷ, ವೈಯಕ್ತಿಕ ಇಂಗ್ಲೀಷ್ ಅಥವಾ ಹಿಂದಿ ಭಾಷೆಗಳಲ್ಲಿ) ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಆದುದರಿಂದ ಭಾಗವಹಿಸುವವರು ಸದ್ರಿ ದಿನ ಪೂರ್ವಾಹ್ನ 9:00 ಗಂಟೆಗೆ ಸ್ಥಳದಲ್ಲಿ ವರದಿ ಮಾಡಿಕೊಳ್ಳುವಂತೆ ಸುಳ್ಯ ತಾಲೂಕಿನ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ, ದೇವರಾಜ್ ಮುತ್ಲಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು(WHO) ಅಡಿಕೆ ಕ್ಯಾನ್ಸರ್ ಕಾರಕವೆಂದು ಸಾಬೀತುಪಡಿಸಲು ಸಂಶೋಧನಾ ವರದಿಗಳನ್ನೇ ತಿರುಚಿ…
ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…
ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…