ಸುಳ್ಯ: ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ಪುತ್ತೂರು ಕಚೇರಿಯಿಂದ ತೂಕ, ಅಳತೆ ಮತ್ತು ತೂಕದ ಸಾಧನಗಳ 2019 ನೇ ಸಾಲಿನ ವಾರ್ಷಿಕ ಸತ್ಯಾಪನೆ ಮುದ್ರೆ ಶಿಬಿರವು ಸುಳ್ಯದಲ್ಲಿ ಅಕ್ಟೋಬರ್ 22 ರಿಂದ ನವೆಂಬರ್ 8 ರವರಗೆ ನಡೆಯಲಿದೆ.
ಸುಳ್ಯ ಗಾಂಧಿನಗರದ ಸರಕಾರಿ ಪ್ರೌಢಶಾಲೆ ಮೈದಾನದ ಎದುರುಗಡೆ ಇರುವ ಎಸ್.ಜಿ ಸ್ಟೋರ್ ಬಿಲ್ಡಿಂಗ್‍ನ ಮೊದಲನೇ ಮಹಡಿಯಲ್ಲಿ ಅಕ್ಟೋಬರ್ 22 ರಿಂದ ನವೆಂಬರ್ 8 ರವರಗೆ ಶಿಬಿರ ನಡೆಯಲಿದೆ. (ಪ್ರತಿ ಸೋಮವಾರ ಮತ್ತು ಸರಕಾರಿ ರಜೆ ದಿನ ಹೊರತುಪಡಿಸಿ) ಸುಳ್ಯ ಶಿಬಿರ ವ್ಯಾಪ್ತಿಯಲ್ಲಿನ ಜಾಲ್ಸೂರು, ಸುಳ್ಯ, ಅಜ್ಜಾವರ, ಕಲ್ಲುಗುಂಡಿ, ಕುಕ್ಕುಜಡ್ಕ, ದೊಡ್ಡತೋಟ, ಎಲಿಮಲೆ, ಮಂಡೆಕೋಲು, ಸಂಪಾಜೆ, ಉಬರಡ್ಕ, ಉಬರಡ್ಕ ಮಿತ್ತೂರು, ಕನಕಮಜಲು, ಮರ್ಕಂಜ, ತೋಡಿಕಾನ, ಅರಂತೋಡು, ಕೋಡಿಯಾಳ,ಆಲೆಟ್ಟಿ ವ್ಯಾಪ್ತಿಯ ವ್ಯಾಪಾರಸ್ಥರು ಮತ್ತು ತೂಕ ಮತ್ತು ಅಳತೆ ಸಾಧನಗಳ ಬಳಕೆದಾರರು ತಾವು ಬಳಸುವ ತೂಕ , ಅಳತೆ ಮತ್ತು ತೂಕದ ಸಾಧನಗಳನ್ನು ಶಿಬಿರಕ್ಕೆ ಹಾಜರುಪಡಿಸಿ ಸತ್ಯಾಪನೆ ಮುದ್ರೆ ಹಾಕಿಸಬೇಕು ಎಂದು ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ಪುತ್ತೂರು ಉಪವಿಭಾಗ ಪುತ್ತೂರು ಇವರ ಪ್ರಕಟಣೆ ತಿಳಿಸಿದೆ.