ಪುತ್ತೂರು: ಹಬ್ಬಗಳು ಕೇವಲ ಮನೆಯ ಆಚರಣೆಗೆ ಸೀಮಿತವಾಗಬಾರದು, ಬದಲಾಗಿ ಎಲ್ಲ ಸಂಸ್ಥೆಗಳಲ್ಲಿ ಆಚರಿಸುವಂತಾಗಬೇಕು. ದೀಪಾವಳಿ ಎಂಬುದು ದೀಪಗಳ ಹಬ್ಬವಾಗಿದೆ. ಅದರಂತೆಯೆ ಇದು ಮನುಷ್ಯನ ಮನಸ್ಸು, ಹೃದಯವನ್ನು ಶುದ್ಧವಾಗಿಸಿ ಕ್ರೂರ ಗುಣವನ್ನು ತೊಡೆದುಹಾಕುವುದರ ಸಂಕೇತ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗ ಆಯೋಜಿಸಿದ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಹಬ್ಬ ಎಂದರೆ ಎಲ್ಲರೂ ಸೇರಿ ಆಚರಿಸುವುದು ಮಾತ್ರವಲ್ಲ, ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಮುಂದಿನ ಜೀವನ ನಡೆಸಲು ದಾರಿಯಾಗಬೇಕು. ಅಂತೆಯೇ ಆಚರಣೆಯ ಮುಖ್ಯ ಉದ್ದೇಶವೇ ಸಂಬಂಧದ ಗಟ್ಟಿಗೊಳಿಸುವಿಕೆ ಆಗಿದೆ ಎಂದು ಹೇಳಿದರು.
ಸ್ನಾತಕೋತ್ತರ ಅಧ್ಯಯನ ಹಾಗೂ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯಸರಸ್ವತಿ ಬಿ. ಮಾತನಾಡಿ, ದೀಪಾವಳಿಯಲ್ಲಿ ಬೆಳಕಿಗೆ ಹೆಚ್ಚಿನ ಸ್ಥಾನವಿದೆ. ಸಾಲು ಸಾಲು ದೀಪಗಳನ್ನು ಹಚ್ಚಿ ಬದುಕಿನ ಅಂಧಕಾರವನ್ನು ಹೋಗಲಾಡಿಸಬೇಕು. ಮಣ್ಣಿನಿಂದ ಮಾಡಿದ ಹಣತೆಯು ಒಂದು ಸಂದೇಶವನ್ನು ನೀಡುತ್ತದೆ ಅದೇನೆಂದರೆ, ಮಣ್ಣಿನಿಂದ ಬಂದವನು ಮಣ್ಣಿಗೇ ಸೇರಬೇಕು. ದೀಪಾವಳಿ ಎಂದರೆ ಸಂಭ್ರಮದ ಜೊತೆಗೆ ಒಗ್ಗೂಡುವಿಕೆಯ ಹಬ್ಬ ಎಂದು ಹೇಳಿದರು.
ದೀಪಾವಳಿಯು ಜೀವನದ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡುವ ಹಬ್ಬವಾಗಬೇಕು, ಹಾಗೆಯೇ ಎಲ್ಲರೂ ಒಗಟ್ಟಾಗಿ ಬದುಕುವಂತಾಗಬೇಕು. ಎಲ್ಲರೂ ದೀಪವನ್ನು ಹಚ್ಚಿ ಹೊಸ ಜೀವನವನ್ನು ಪ್ರಾರಂಭಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿವಿಧ ವಿಭಾಗಗಳ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಗಳಾದ ಅನುಶಾ ಸಿ.ಎಚ್. ಪ್ರಾರ್ಥಿಸಿದರು. ಅಶಿತಾ ಸ್ವಾಗತಿಸಿದರು. ಅಕ್ಷಿತ್ ವಂದಿಸಿದರು. ಪ್ರಿಯ ಪಿ.ಜಿ. ಕಾರ್ಯಕ್ರಮ ನಿರ್ವಹಿಸಿದರು.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…