Advertisement
MIRROR FOCUS

ಉಕ್ಕಿನ ಮನುಷ್ಯನಿಗೊಂದು ಅಕ್ಷರ ನಮನ…

Share

ಸಾಹಸಿಗರಿಗೆ  ಪರ್ವತವೇ ಅಡ್ಡ ಬಂದರೂ ಸರಿದು ನಿಲ್ಲುವುದು. ಸಮುದ್ರವೇ ಎದುರು ನಿಂತರೂ ದಾರಿಬಿಡುವುದು. ಮನಸ್ಸಿದ್ದಲ್ಲಿ ಮಾರ್ಗ ಎಂಬ ತತ್ವದ ತಿರುಳನ್ನು ಬಾಲ್ಯದಲ್ಲೇ ಅರ್ಥೈಸಿಕೊಂಡವರು  ಸರದಾರ ವಲ್ಲಭಭಾಯಿ ಪಟೇಲ್.

Advertisement
Advertisement
ಗುಜರಾತಿನ ಪುಟ್ಟ ಹಳ್ಳಿ ಕರಮಸದ. ಅಲ್ಲಿನ ರೈತ  ದಂಪತಿ   ಝವೇರಾ ಭಾಯಿ ಹಾಗೂ ಲಾಡಬಾಯಿ ದಂಪತಿಗಳ ಐವರು ಮಕ್ಕಳಲ್ಲಿ ನಾಲ್ಕನೇಯವರು ವಲ್ಲಭಭಾಯಿ ಪಟೇಲರು. 1857 ಅಕ್ಟೋಬರ್ 31 ರಂದು ಜನಿಸಿದರು. ತಂದೆ  ವೃತ್ತಿ ಯಲ್ಲಿ ಕೃಷಿಕರಾದರೂ ಸ್ವಾತಂತ್ರ್ಯ ಪ್ರೇಮ, ದೇಶಭಕ್ತಿ ಅವರ ಹೃದಯದಲ್ಲಿ ತುಂಬಿ ತುಳುಕುತ್ತಿತ್ತು. 1857 ರಲ್ಲಿ ಝಾನ್ಸಿ ಯಲ್ಲಿ ರಾಣಿ ಲಕ್ಷ್ಮೀ ಬಾಯಿ  ಆಂಗ್ಲರ ವಿರುದ್ಧದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಾವೇಷದಿಂದ ಹೋರಾಡಿ  ಪ್ರಾಣತೆತ್ತಳು. ಆಗ ಹೊಲದಲ್ಲಿ ಊಳುತ್ತಿದ್ದ  ಝವೇರಾಬಾಯಿ  ,ಈ ಸುದ್ದಿಯನ್ನು ಕೇಳಿ ನೇಗಿಲನ್ನು ಅಲ್ಲೇ ಕೆಳ ಹಾಕಿ  ಕತ್ತಿಯನ್ನು ಹಿಡಿದು  ಸೈನ್ಯ ಸೇರಿ   ಯುದ್ಧಕ್ಕೆ ಹೊರಟ. ಇಂಗ್ಲೀಷರ ಸೈನ್ಯ ದೊಂದಿಗೆ ಶೌರ್ಯ ಸಾಹಸಗಳೊಂದಿಗೆ ಹೋರಾಡಿದ.  ಈ ಝವೇರಾಬಾಯಿಯ ಮಗನೇ ವಲ್ಲಭಭಾಯಿ ಪಟೇಲರು. ತನ್ನ ತಂದೆಯ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ತಾಯಿ ಲಾಡಬಾಯಿ ವಿವರಿಸುತ್ತಿದ್ದರೆ ಬಾಲಕ ವಲ್ಲಭಭಾಯಿಯ ಮೈ ಜುಂ ಎನ್ನುವಂತಾಗುತ್ತಿತ್ತು. ಇಂಗ್ಲಿಷ್ ರ ಬಗ್ಗೆ ಕೋಪ ಉಕ್ಕುತ್ತಿತ್ತು. ಇಂತಹ  ಹಲವು ನಿಜ ಘಟನೆಗಳನ್ನು ಕೇಳುತ್ತಾ,  ಕಾಣುತ್ತಾ  ಬೆಳೆದ ಪಟೇಲರು ಮುಂದೆ ಗಾಂಧೀಜಿಯವರು  ಆರಂಭಿಸಿದ ಅಹಿಂಸಾತ್ಮಕ  ಚಳುವಳಿಗಳಲ್ಲಿ ಸ್ವಇಚ್ಛೆಯಿಂದ ಭಾಗವಹಿಸಿ ಬ್ರಿಟಿಷ್ ರನ್ನು ನಡುಗಿಸಿದರು.
ತಂದೆ ಝವೇರಾಭಾಯಿ ವಿದ್ಯಾವಂತರಲ್ಲದಿ ದ್ದರೂ ಮಕ್ಕಳು ಕಲಿತು ವಿದ್ಯಾವಂತರಾಗ ಬೇಕು ಎಂಬ ಬಯಕೆಯಿತ್ತು. ಮಕ್ಕಳೂ‌ ಅಷ್ಟೇ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದರು. ಅದರಲ್ಲೂ ಪಟೇಲ್ ರಿಗಂತೂ ಒಮ್ಮೆ ಕೇಳಿದ್ದನ್ನು  ತಟ್ಟನೆ  ಗ್ರಹಿಸುವ ಸಾಮರ್ಥ್ಯ . ಪ್ರಾಥಮಿಕ ಶಿಕ್ಷಣಾಭ್ಯಾಸವನ್ನು ಹಳ್ಳಿಯಲ್ಲೇ ಮುಗಿಸಿದರು. 1857  ಲ್ಲಿ ಮೆಟ್ರಿಕ್ಯುಲೇಷನ್ ಪಾಸ್  ಮಾಡಿದರು. ಆಗ ಅವರಿಗೆ 22 ವರ್ಷಗಳಾಗಿದ್ದವು.( 22 ರ ಹರೆಯದಲ್ಲಿ ಗಾಂಧೀಜಿಯವರು ಹಾಗೂ ನೆಹರೂರವರು  ಇಂಗ್ಲೆಂಡ್ ನಲ್ಲಿ ಬ್ಯಾರಿಸ್ಟರ್ ಪರೀಕ್ಷೆ ಯ ತಯಾರಿಯಲ್ಲಿದ್ದರು.) ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಸವಲತ್ತುಗಳಿಲ್ಲದ ಕಾರಣ ವಿದ್ಯಾಭ್ಯಾಸ ನಿಧಾನಗತಿಯಲ್ಲಿ ಸಾಗುತ್ತಿತ್ತು. ಆದರೆ ತನ್ನ ಭಗೀರಥ ಪ್ರಯತ್ನದ ಫಲವಾಗಿ ಇಲ್ಲೇ ಇದ್ದು ಓದಿ ತೇರ್ಗಡೆ ಹೊಂದಿದರು. ಆ ಕಾಲದಲ್ಲಿ ವಕೀಲಿ ವೃತ್ತಿ ಗೆ ಅಪಾರವಾದ ಗೌರವವಿತ್ತು. ಕೈಯಲ್ಲಿ ಕಾಸು ಸೇರುತ್ತಿತ್ತು. ಅದರಲ್ಲೂ ಇಂಗ್ಲೆಂಡ್ ನಲ್ಲಿ ಬ್ಯಾರಿಸ್ಟರ್ ಪಾಸು ಮಾಡಿದವರೆಂದರೆ ಜನರಿಗೆ ದೈವ ಸಮಾನ. ಮುಂದೆ ಸ್ವ ಪರಿಶ್ರಮ ದಿಂದ  ಗಾಂಧೀಜಿ ಹಾಗೂ ಪಟೇಲ್ ಜೀ ಇಬ್ಬರೂ ವಕೀಲ ವೃತ್ತಿ ಯಿಂದ ರಾಜಕೀಯ ಕ್ಷೇತ್ರ ಕ್ಕೆ ಪ್ರವೇಶಿಸಿದವರು.ಭಾರತದ ಸ್ವಾತಂತ್ರ್ಯ ಕ್ಕಾಗಿ ತನು, ಮನ, ಧನವನ್ನು ಅರ್ಪಿಸಿದವರು. ವ್ಯವಹಾರಕ್ಕಾಗಿ ಬಂದವರು ಕುಹಕ ಕುತಂತ್ರದಿಂದ ಭಾರತದಲ್ಲಿ ನೆಲೆಯಾದ ಬ್ರಿಟಿಷರನ್ನು ಬೇರು ಸಹಿತ ಕಿತ್ತು ಹಾಕುವಲ್ಲಿ ಸಫಲರಾದವರು.
1928 ರಲ್ಲಿ ಬ್ರಿಟಿಷ್ ಸರ್ಕಾರವು ರೈತಾಪಿ ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿತು.  ಏನು ಮಾಡುವುದೆಂದರಿಯದೆ ಕಂಗಾಲಾದ ರೈತರು ಪಟೇಲರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡರು. ಆಗ ಪಟೇಲರು ” ಭೂಮಿ ನಮ್ಮದು , ದೇಶ ನಮ್ಮದು, ಎಲ್ಲಿಂದಲೋ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುವಷ್ಟು ಪೊಗರೇ” ಎಂದು ತೀವ್ರ ಸ್ವರೂಪದ ಹೋರಾಟಕ್ಕಿಳಿದು  ಸಫಲರಾದರು.  ಈ ಚಳುವಳಿಯಲ್ಲಿ ‌‌ಯಶಸ್ವಿಯಾದುದನ್ನು ಕಂಡು ಗಾಂಧೀಜಿಯವರು ‘ ಸರದಾರ’ ಎಂಬ ಬಿರುದನ್ನು ಕೊಟ್ಟರು. ಅಂದಿನಿಂದ ‘ಸರದಾರ್ ವಲ್ಲಭಭಾಯಿ ಪಟೇಲ್ ‘ ಎಂಬ ಹೆಸರಿನಿಂದ ಪ್ರಸಿದ್ಧರಾದರು.
ಪಟೇಲರು ಗಾಂಧೀಜಿಯವರ ಪಟ್ಟ ಶಿಷ್ಯರು. 1930 ರ ಸಮಯದಲ್ಲಿ ಆಂಗ್ಲ ರ ವಿರುದ್ಧ ತೀವ್ರ ಸ್ವರೂಪದ ಹೋರಾಟ ದೇಶದೆಲ್ಲೆಡೆ ಆರಂಭವಾಯಿತು. ಅದಕ್ಕೆ ಮುಖ್ಯ ಕಾರಣ ನಿತ್ಯ ಉಪಯೋಗಿಸುವ ಉಪ್ಪಿನ ಮೇಲೆ ತೆರಿಗೆ ವಿಧಿಸಿದ್ದು.  ಅಲ್ಲದೆ ಉಪ್ಪಿನ ತಯಾರಿಯನ್ನು ಆಂಗ್ಲ ಸರಕಾರವೇ ಕೈಗೊಳ್ಳುವುದಾಗಿ ಘೋಷಿಸಿತು. ಇದರ ವಿರುದ್ಧ ಭಾರತೀಯರೆಲ್ಲರೂ ಒಟ್ಟಾಗಿ ಹೋರಾಟಕ್ಕೆ ಸಿದ್ಧರಾದರು. ತಮ್ಮ ನಾಯಕರಾದ ಗಾಂಧೀಜಿ ಹಾಗೂ ಪಟೇಲರ ಸಂಪೂರ್ಣ ಬೆಂಬಲಕ್ಕೆ ನಿಂತರು.  ಉಪ್ಪಿನ ಸತ್ಯಾಗ್ರಹ ದ ಪೂರ್ವ ಸಿದ್ಧತೆ, ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಇವರದಾಯಿತು. ಇವರ ಕಾರ್ಯ ವೈಖರಿಯನ್ನು ಕಂಡ ಜನರು ‘ ‘ಎರಡನೇಯ ಗಾಂಧಿ ‘ಎಂದೇ ಕರೆಯ ತೊಡಗಿದರು.   ಗಟ್ಟಿ ನಿರ್ಧಾರ ಗಳಿಗೆ, ಕಾರ್ಯ ನಿರ್ವಹಣೆಯಲ್ಲಿ ತಮ್ಮದೇ ದಾರಿ, ತಮ್ಮದೇ ವಿಧಾನಗಳಿಂದ ನಿರ್ವಹಿಸುವ ಪರಿಗೆ  ಹೆಸರುವಾಸಿಯಾದವರು. ಅಲ್ಲದೆ ಬಾಲ್ಯದ ಬಡತನ, ಒಂದೊಂದಾಗಿ ಎದುರಾದ ಕಷ್ಟಗಳು ಮಾನಸಿಕವಾಗಿ ದೃಡವಾಗುವಂತೆ ಮಾಡಿದುವು. ಯಾವುದಕ್ಕೂ ಹೆದರದ, ಕಷ್ಟಗಳನ್ನು ಉಪಾಯವಾಗಿ ಎದುರಿಸುವ ಗಟ್ಟಿ ಮನಸಿನವರಾಗಿದ್ದರು   ಹಾಗಾಗಿ ಇವರು ‘ಉಕ್ಕಿನ ಮನುಷ್ಯ’  ಎಂದೇ  ಪ್ರಸಿದ್ಧರಾದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಿಂದು ಮುಸ್ಲಿಂ ಎಂಬ ಬೇಧ ಭಾವನೆಗಳಿಲ್ಲದೆ ಸಮಾನರಾಗಿ ಹೋರಾಟದಲ್ಲಿ ಭಾಗವಹಿಸುತಿದ್ದರು. ಬ್ರಿಟಿಷ್ ಸರ್ಕಾರ ಹದು ಮುಸ್ಲಿಂ ಜನಾಂಗದ ನಡುವೆ ಭಿನ್ನಮತ ತಂದಿಡಲು ಪ್ರಾರಂಭಿಸಿದರು. ” ಹಿಂದು ಮುಸ್ಲಿಂ ಭಾಯಿ ಭಾಯಿ ” ತತ್ವ ಕ್ಕೆ ಪೆಟ್ಟು ಬೀಳುವಂತೆ  ಮಹಮದಾಲಿ ಜಿನ್ನಾ ‘ ಮುಸ್ಲಿಂ ಲೀಗ್’ ಪಕ್ಷದ ಸ್ಥಾಪನೆ ಮಾಡಿ ಗಾಂಧೀಜಿ ಹಾಗೂ ಕಾಂಗ್ರೆಸ್ ನಿಂದ ದೂರ ಉಳಿದು , ಬ್ರಿಟಿಷ್ ರ ಸಲಹೆಯಂತೆ  ಪ್ರತ್ಯೇಕ ಮುಸ್ಲಿಂ ರಾಜ್ಯ ಸ್ಥಾಪನೆ ಪ್ರಯತ್ನಿಸಲಾರಂಭಿಸಿದ. ಪಟೇಲರು ಹಾಗೂ ಗಾಂಧೀಜಿಯವರು ಬಹಳಷ್ಟು ಬುದ್ಧಿವಾದ ಹೇಳಿದರು ಕೇಳುವ ಮನಸ್ಥಿತಿ ಜಿನ್ನಾ ಬಳಿ ಇರಲಿಲ್ಲ. ಕುತಂತ್ರಿ ಇಂಗ್ಲಿಷರು ಆತನ ಮೇಲೆ ಸಂಪೂರ್ಣ ಪ್ರಭಾವ ಬೀರಿದರು. ಇದೇ ಸಮಯದಲ್ಲಿ ನಡೆದ  ಎರಡನೆಯ ಮಹಾಯುದ್ಧದಲ್ಲಿ ಭಾರತೀಯ ಸೇನೆಯ ಸಹಾಯ ವನ್ನು ಇಂಗ್ಲಿಷ್ ರು ಬಯಸಿದರು. ಆದರೆ ಪಟೇಲರು ನಮಗೂ ಇದಕ್ಕೂ ಯಾವುದೇ ಸಂಬಂಧ ವಿಲ್ಲವೆಂದು ತಿರಸ್ಕರಿಸಿದರು. ಆದರೆ ಜಿನ್ನಾ ಸ್ಥಾಪಿಸಿದ ಮುಸ್ಲಿಂ ಸಂಸ್ಥೆ ಸಹಾಯಕ್ಕೆ ಸಮ್ಮತಿಸಿತು.  ಇದರ ವಿರುದ್ಧ ಪಟೇಲರ ಸಲಹೆಯಂತೆ ಏಳೂ ರಾಜ್ಯ ಗಳಲ್ಲಿದ್ದ ಕಾಂಗ್ರೆಸ್ ಸರಕಾರ ರಾಜೀನಾಮೆ ಕೊಟ್ಡಿತು. ಈ ಸಂಧರ್ಭದಲ್ಲಿ ಕಾಂಗ್ರೆಸ್ ನೇತಾರರನ್ನು  ಬ್ರಿಟಿಷ್ ಸರ್ಕಾರ ಬಂಧಿಸಿತು.
ಸರ್ಕಾರದ ಈ ಅನೀತಿಯನ್ನು ಪಟೇಲರು ಬಹುವಾಗಿ ವಿರೋಧಿಸಿದರು. ಈ ಬಾರಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಂತ್ಯ ಹಾಡಲೇ ಬೇಕೆಂದು  ತೀವ್ರ ಸ್ವರೂಪದ ಹೋರಾಟದಲ್ಲಿ ತೊಡಗಿದರು. ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಯಿತು. ವಿದೇಶಿ ವಸ್ತು ಗಳ ಬಹಿಷ್ಕಾರ ಮಾಡಿದರು. ಅವುಗಳನ್ನು ಸುಟ್ಟರು. ಒಟ್ಟಾರೆ ಅಹಿಂಸಾತ್ಮಕ ಚಳುವಳಿ  ಹಿಂಸಾತ್ಮಕ ರೀತಿಗೆ  ತಿರುಗಲಾರಂಭಿಸಿತು. ಬೆಂಕಿಯನ್ನು ಬೆಂಕಿಯಿಂದಲೇ ನಂದಿಸ ಬೇಕೆನ್ನುವ  ಮನಸ್ಥಿತಿಗೆ ಬಂದರು. ಎಲ್ಲರೂ ತಾಳ್ಮೆ ಕಳೆದುಕೊಂಡಿದ್ದರು.  ಭಾರತೀಯರ ತೀವ್ರ ಹೋರಾಟಕ್ಕೆ ಜಯ ಸಿಗುವ ಸೂಚನೆಯ ಬೆನ್ನಲ್ಲೇ ಭಾರತ ವಿಭಜನೆಯಾಗುವ ದಿಕ್ಕಿನತ್ತ ಸಾಗುವುದನ್ನು ಪಟೇಲರು ಅರಿತರು.
ಆಗಸ್ಟ್ 15 , 1947 ಭಾರತಕ್ಕೆ ಸ್ವಾತಂತ್ರ್ಯ ವೇನೋ ಸಿಕ್ಕಿತು. ಆದರೆ ನಮಗೆ ಉಳಿದದ್ದು ಎಂತಹ ಭಾರತ? ಅಲ್ಲಲ್ಲಿ ಗಲಬೆ, ದೊಂಬಿ, ಕಿತ್ತಾಟಗಳು ನಡೆಯುತ್ತಿರುವ ದೇಶ. ಸಣ್ಣ ಸಣ್ಣ ಪ್ರದೇಶಗಳು ನಾವು ತಮ್ಮನ್ನು ಸ್ವತಂತ್ರ ಪ್ರದೇಶ ಗಳೆಂದು ಗುರುತಿಸಿಕೊಳ್ಳಲು ಹವಣಿಸಲಾರಂಭಿಸಿದವು.  ದೇಶ ಮತ್ತೆ ಛಿದ್ರ ವಾಗುವ  ಎಲ್ಲಾ ಲಕ್ಷಣಗಳು ಗೋಚರವಾಗ ತೊಡಗಿತು. ಇಂತಹ ಸಂದರ್ಭದಲ್ಲಿ ಪಟೇಲರು ಎಲ್ಲರನ್ನೂ ಒಗ್ಗೂಡಿಸಿ ನಾವೆಲ್ಲರೂ ಭಾರತೀಯರು, ಒಂದಾಗಿ ಇರೋಣ , ಒಗ್ಗಟ್ಟಾಗಿ ಮುನ್ನಡೆಯೋಣ ಎಂದು ಎಲ್ಲಾ ವಿಧದ ತಂತ್ರಗಳನ್ನು ಬಳಸಿ ಅಖಂಡ ಭಾರತದ ನಿರ್ಮಾಣದ ಮಹತ್ಕಾರ್ಯವನ್ನು ನಿರ್ವಹಿಸಿದರು.
ಇವರು ಭಾರತದ ಪ್ರಥಮ ಪ್ರಧಾನ ಮಂತ್ರಿ ಯಾಗುತ್ತಾರೆಂದು ದೇಶವಿಡೀ ಬಾರೀ ನಿರೀಕ್ಷೆ ಇತ್ತು. ಜನಮತವೂ ಇವರ ಕಡೆಯೇ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ನೆಹರೂ ರವರಿಗೆ ಪ್ರಧಾನ ಮಂತ್ರಿ ಪದವಿ ಒಲಿಯಿತು.  ಸರದಾರ ವಲ್ಲಭಭಾಯಿ ಬಾಯಿ ಪಟೇಲರು ಪ್ರಥಮ ಉಪಪ್ರಧಾನಿ  ಹಾಗೂ ಗೃಹ ಮಂತ್ರಿ  ‌ಯಾದರು.
ದೇಶ ಕಂಡ ಅತ್ಯುತ್ತಮ ರಾಜಕಾರಣಿಗಳಲ್ಲಿ ಪ್ರಮುಖರು.  ದೇಶದ‌ ಸಮಗ್ರತೆ, ಏಕತೆಗಾಗಿ ಹೋರಾಡಿದ ಪಟೇಲರ  ಜನ್ಮದಿನ ಒಕ್ಟೋಬರ್ ೩೧.  ಅವರ ನೆನಪಿಗಾಗಿ ಈ ದಿನವನ್ನು’ ಏಕತಾ ದಿನಾಚರಣೆ’ ಯಾಗಿ ಆಚರಿಸಲಾಗುತ್ತಿದೆ. ಕಳೆದ ಬಾರಿ ಗುಜರಾತ್‌ ನ ನರ್ಮದಾ ತೀರದ ಸರ್ದಾರ್   ಸರೋವರ  ಅಣೆಕಟ್ಟಿನ ಪಕ್ಕದಲ್ಲಿ ೧೮೨ ಅಡಿ ಎತ್ತರದ  ಸರ್ದಾರ್ ಪಟೇಲ್ ರ ಉಕ್ಕಿನ ಪ್ರತಿಮೆ ಸ್ಥಾಪಿಸಲಾಯಿತು. ಇದು ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿದೆ. ಸರ್ದಾರ್ ವಲ್ಲಭಭಾಯಿಪಟೇಲರ ಹೆಸರು ಚಿರಸ್ಥಾಯಿಯಾಗಿ  ಜನಮಾನಸದಲ್ಲಿ    ಉಳಿಯುವಂತ ಹೆಸರು. ನಮ್ಮ ನೆಚ್ಚಿನ ನಾಯಕ  ಉಕ್ಕಿನ ಮನುಷ್ಯ ನಿಗೊಂದು  ಬರಹ ನಮನ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

13 hours ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

13 hours ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

13 hours ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

13 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

13 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

13 hours ago