ಬೆಳ್ಳಾರೆ : ಮುಹಿಯುದ್ದೀನ್ ಜುಮಾ ಮಸೀದಿ ಅತ್ತಿಕ್ಕರಮಜಲು ಇದರ ಅಂಗ ಸಂಸ್ಥೆಯಾದ ಮಿನ್ನತುಲ್ ಹುದಾ ಇದರ ಪಂಚವಾರ್ಷಿಕ ಪ್ರಯುಕ್ತ ಮಯ್ಯತ್ ಪರಿಪಾಲನ ದ್ವಿದಿನ ಪ್ರಭಾಷಣ ದ ಸಮಾಪನ ದಿನವು ನವಂಬರ್ 19 ರಂದು ನಡೆಯಿತು .
ಸಮಾಪನ ದಿನದ ಕಾರ್ಯಕ್ರಮ ದ ಅಧ್ಯಕ್ಷ ತೆಯನ್ನು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಪಿ ಇಸ್ಹಾಕ್ ಸಾಹೇಬ್ ವಹಿಸಿದ್ದರು. ಮಸೀದಿಯ ಖತೀಬ ಯಾಸರ್ ಅರಫಾತ್ ಕೌಸರಿ ಉದ್ಘಾಟಿಸಿದರು. ಇರ್ಷಾದ್ ಫೈಝಿ ಪಾಲ್ತಾಡ್ ಪ್ರಾಸ್ತಾವಿಕ ಭಾಷಣ ಮಾಡಿದರು .
ದ್ವಿದಿನ ಪ್ರಭಾಷಣ ಸಮಾಪನ ದಿನದಂದು ಕೇರಳದ ಪ್ರಸಿದ್ದ ವಾಗ್ಮಿ ಉಸ್ತಾದ್ ವಲಿಯುದ್ದೀನ್ ಫೈಝಿ ಪ್ರಭಾಷಣ ಮಾಡಿದರು. ಪ್ರಸಕ್ತ ಕಾಲದಲ್ಲಿ ಮಯ್ಯತ್ ಪರಿಪಾಲನೆ ವಿಷಯ ನಾವೆಲ್ಲರೂ ಅರಿಯಬೇಕಾದ ವಿಷಯವಾಗಿದೆ.ನಮ್ಮ ಜೀವನದ ತಿಳಿಯಲೇಬೇಕಾದ ಅಂಶವಾಗಿದೆ. ಆದುದರಿಂದ ನಾವು ಇದರ ಕುರಿತು ಗಂಭೀರವಾಗಿ ಪರಿಗಣಿಸಿ ಬದುಕಿದರೆ ಜೀವನ ಸಾರ್ಥಕ ಎಂದು ಅವರು ಹೇಳಿದರು.
ತಾ.ಪಂ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ , ಹಮೀದ್ ಹಾಜಿ ಸುಳ್ಯ , ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷ ಯು ಹೆಚ್ ಅಬೂಬಕ್ಕರ್, ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ , ಸದಸ್ಯ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ,ಝುಬೈರ್ ಮುಸ್ಲಿಯಾರ್ , ಝಕರಿಯಾ ಅಹ್ಸನಿ , ಅಬ್ದುಲ್ ರಹ್ಮಾನ್ ಅಲೆಕ್ಕಾಡಿ ,ಹನೀಫ್ ಸಾಹೇಬ್ ಪಾಜಪಳ್ಳ , ಶರೀಫ್ ಫ್ರಂಟ್ ಲೈನ್ , ಸುಳ್ಯ ವಿಖಾಯ ಚೇರ್ಮನ್ ಜಮಾಲುದ್ದೀನ್ ಕೆ ಎಸ್ , ಇಸ್ಮಾಯಿಲ್ ಪಡ್ಪಿನಂಗಡಿ , ಮಹಮೂದ್ ಶಾಹಿನ್ ಮಾಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಕೆ ಎಂ ಇಕ್ಬಾಲ್ ಬಾಳಿಲ ಸ್ವಾಗತಿಸಿದರು .
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…