ಸುಳ್ಯ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್‍ಸಿಇಪಿ) ಕುರಿತು ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆರ್‍ಸಿಇಪಿ ಈಗ ಚರ್ಚೆಯಲ್ಲಿದೆಯಷ್ಟೆ. ರೈತರಿಗೆ ವಿರೋಧವಾಗುವ ಯಾವುದೇ ಯೋಜನೆ ಜಾರಿಯಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್‍ಸಿಇಪಿ ಸಂಬಂಧಪಟ್ಟು ಕೇಂದ್ರ ಸರ್ಕಾರ ಈಗಾಗಲೇ ಕೃಷಿಕರು ಮತ್ತು ಟ್ರೇಡ್ ಯೂನಿಯನ್‍ಗಳ ಜೊತೆ ಮಾತುಕತೆ ನಡೆಸಿದೆ. ಆರ್‍ಸಿಇಪಿ ನೇರವಾಗಿ ಹೇರಿಕೆ ಮಾಡುವುದಿಲ್ಲ ಎಂದು ಪ್ರಧಾನಿಯವರೇ ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರದಲ್ಲಿ ರೈತರಲ್ಲಿ ಯಾವುದೇ ಆತಂಕ ಬೇಡ. ರೈತ ವಿರೋಧಿ ಯೋಜನೆಯನ್ನು ಸರಕಾರ ಜಾರಿಗೊಳಿಸುವುದಿಲ್ಲ. ರಾಜ್ಯದಲ್ಲಿಯೂ ಅಡಿಕೆ ಕೃಷಿ ಇದೆ. ಹಾಲಿನ ವ್ಯವಹಾರ ನಡೆಸುವವರಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳು ಕೂಡಾ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಯಾವುದೇ ಯೋಜನೆ ರೈತರಿಗೆ ತೊಂದರೆ ಆಗುತ್ತದೆ ಅಂದರೆ ನಾವು ಎಲ್ಲರೂ ಸೇರಿ ಅದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಅಡಿಕೆ ಹಳದಿ ಎಲೆ ರೋಗಕ್ಕೆ ಪರಿಹಾರದ ಕುರಿತು ಸಂಸದರ ಗಮನ ಸೆಳೆದಾಗ, ಜಿಲ್ಲೆಯ ಎಲ್ಲ ಅಡಿಕೆ ಬಳೆಗಾರರ ನಾಯಕರನ್ನು ಕರೆದು ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಅವರಿಗೆ ಬೇಕಾದ ರೀತಿಯಲ್ಲಿ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಪವಿತ್ರ ಕುಮಾರಧಾರಾ ನದಿಯನ್ನೂ ಮಲಿನ ಮಾಡಲು ಹೊರಟಿದೆಯಾ ಭಕ್ತ ಸಮೂಹ..? ಅದಕ್ಕೆ ಕೆಲವು…
ತಮ್ಮಂದಿರಿಗೆ ಅಣ್ಣನಾಗಿ, ಪ್ರಜೆಗಳಿಗೆ ರಾಜನಾಗಿ, ಧರ್ಮದ ಪ್ರತಿನಿಧಿಯಾಗಿ, ಪ್ರಾಮಾಣಿಕತೆಗೆ ಕನ್ನಡಿಯಾಗಿ, ಶುದ್ಧ ಚಾರಿತ್ರ್ಯವಂತನಾಗಿ,…
ಮುಖ್ಯ ರಸ್ತೆಗೆ ಸೇರಲು ಎಂಟತ್ತು ಕಿಮೀ ಹಳ್ಳಿಗಾಡಿನ, ಗದ್ದೆ ಬದುಗಳ, ಯಮುನೆಯ ತಟದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಸಂಕಷ್ಟ ಕಾಲದಲ್ಲಿ ಕೈ…
ಪರಿಸರ ಇಲಾಖೆಯಿಂದ ಅನುಮತಿ ದೊರೆಯದ ತನಕ ಎತ್ತಿನಹೊಳೆ ಕಾಮಗಾರಿ ಮುಂದುವರೆಸಲು ಕಷ್ಟಕರವಾಗಿದೆ.