ನವದೆಹಲಿ : ಆರ್ ಸಿ ಇ ಪಿ ಒಪ್ಪಂದದಿಂದ ಭಾರತ ದೂರ ಉಳಿಯುವ ನಿರ್ಧಾರವನ್ನು ಸೂಚ್ಯವಾಗಿ ತಿಳಿಸಿದ ಬೆನ್ನಲ್ಲೇ ಬ್ಯಾಂಕಾಕ್ ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆ ಹುಸಿಯಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಒಂದು ವರ್ಷದ ಮಟ್ಟಿಗೆ ಈ ಒಪ್ಪಂದವನ್ನು ಮುಂದೂಡುವ ಬಗ್ಗೆ ಕರಡು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭಾರತವೂ ಒಂದು ವರ್ಷದ ಅವಧಿಗೆ ಈ ಒಪ್ಪಂದದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿತ್ತು.
16 ದೇಶಗಳು ಒಳಗೊಂಡಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ(ಆರ್‌ಸಿಇಪಿ) ಮುಂದೂಡುವ ಚಿಂತನೆ ನಡೆದಿದೆ. ಈ ಒಪ್ಪಂದದ ಕೆಲವು ಅಂಶಗಳ ಬಗ್ಗೆ ಭಾರತವು ಆಕ್ಷೇಪ ವ್ಯಕ್ತಪಡಿಸಿ ತಾನು ದೂರ ಉಳಿಯುವ ಬಗ್ಗೆ ಸೂಚ್ಯವಾಗಿ ತಿಳಿಸಿತ್ತು. ಈ ಹಿಂದೆಯೇ ಭಾರತವ ಈ ಬಗ್ಗೆ ಸೂಚನೆಯನ್ನೂ ನೀಡಿತ್ತು. ಅದರ ಜೊತೆಗೆ ಪರ್ಯಾಯ ಒಪ್ಪಂದದ ಕಡೆಗೂ ಚಿಂತನೆ ನಡೆಸಿತ್ತು. ಪ್ರಮುಖವಾಗಿ ಈ ಒಪ್ಪಂದದ ನಂತರ ಚೀನಾ ನಿರ್ಮಿತ ಕಡಿಮೆ ಬೆಲೆಯ ಸರಕುಗಳು ಭಾರತದ ಮಾರುಕಟ್ಟೆಗೆ ಬರುವ ಕಾರಣ ಸಣ್ಣ ಉದ್ದಿಮೆಗಳಿಗೆ ಸಮಸ್ಯೆಯಾಗಬಹುದು, ದೇಶದ ರೈತರಿಗೂ ಸಮಸ್ಯೆಯಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಕ್ಷೇಪ ಹಾಗೂ ಆತಂಕವನ್ನು ವ್ಯಕ್ತಪಡಿಸಿದ್ದರು.
ಭಾನುವಾರ ಬ್ಯಾಂಕಾಕ್ ನಲ್ಲಿ ನಡೆದ ಸಭೆಯಲ್ಲಿ ಭಾರತ ಎತ್ತಿರುವ ಆಕ್ಷೇಪಗಳ ಬಗ್ಗೆ ಚರ್ಚೆ ನಡೆದು ಒಪ್ಪಂದವನ್ನು ಅಂತಿಮಗೊಳಿಸುವ ತೀರ್ಮಾನಕ್ಕೆ ಬರಲಾಗಲಿಲ್ಲ. ಹೀಗಾಗಿ ಒಂದು ವರ್ಷ ಮುಂದೂಡುವ ನಿರ್ಧಾರಕ್ಕೆ ಬರಲಾಗುತ್ತಿದೆ ಎಂದು ತಿಳಿದುಬಂದಿದೆ. ಆಸಿಯಾನ್’ಗುಂಪಿನ 10 ರಾಷ್ಟ್ರಗಳ ಜೊತೆ ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ , ನ್ಯೂಜಿಲ್ಯಾಂಡ್ ದೇಶಗಳು ಸೇರಿಕೊಂಡು ಆರ್ ಸಿ ಇ ಪಿ ಒಪ್ಪಂದ ರೂಪಿಸಿವೆ. ವಿಶ್ವದ ಜಿಡಿಪಿಯ ಶೇ.30ರಷ್ಟು ಮತ್ತು ವಿಶ್ವದ ಅರ್ಧಾಂಶದಷ್ಟು ಜನತೆ ಈ ಒಪ್ಪಂದದ ವ್ಯಾಪ್ತಿಯಡಿ ಬರುತ್ತಾರೆ. ಭಾರತವು ಒಂದು ವರ್ಷದ ಮಟ್ಟಿಗೆ ಈ ಒಪ್ಪಂದದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿತ್ತು. ನಂತರ ಈ ಬಗ್ಗೆ ನಿರ್ಧಾರವಾಗಲಿದೆ.
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…