ಸುಳ್ಯ: ಬಿಗ್ ಟಿಕೆಟ್‌ನ ಡ್ರೀಂ ಸೀರೀಸ್‌ನ 208 ನೇ ಡ್ರಾದ ವಿಜೇತರಾದ ಸುಳ್ಯ ಜಟ್ಟಿಪಳ್ಳದ ಜೆ.ಎ.ಮಹಮ್ಮದ್ ಫಯಾಜ್ ಅವರಿಗೆ ಬಹುಮಾನ ಮೊತ್ತದ ಚೆಕ್ಕನ್ನು ನ.3 ರಂದು ಹಸ್ತಾಂತರಿಸಲಾಯಿತು.
23 ಕೋಟಿಯ ಮೌಲ್ಯದ ಅಬುಧಾಬಿ ಬಿಗ್ ಟಿಕೆಟ್ ಲಾಟರಿಯ ಅಕ್ಟೋಬರ್ ತಿಂಗಳ ಅದೃಷ್ಟ ಸುಳ್ಯದ ಯುವಕನಿಗೆ ಒಲಿದು ಬಂದಿತ್ತು. ನವೆಂಬರ್ 3 ರಂದು ನಡೆದ ಡ್ರಾ ದಿನದಂದು ಅಕ್ಟೋಬರ್ ತಿಂಗಳ ವಿಜೇತರಿಗೆ ಬಹುಮಾನ ಮೊತ್ತ 12 ಮಿಲಿಯನ್ ಚೆಕ್ ಹಸ್ತಾಂತರಿಸಲಾಯಿತು.
ಬಿಗ್ ಟಿಕೆಟ್‌ನ ಡ್ರೀಂ ಸೀರೀಸ್‌ನ 208 ನೇ ಡ್ರಾದ 12 ಮಿಲಿಯನ್ ದಿರ್‌ಹಾಂ (ಅಂದಾಜು23.17 ಕೋಟಿ) ಪ್ರಥಮ ಬಹುಮಾನ ಸುಳ್ಯ ಜಟ್ಟಿಪಳ್ಳದ ಜೆ.ಎ.ಮಹಮ್ಮದ್ ಫಯಾಜ್ ಅವರಿಗೆ ಒಲಿದು ಬಂದಿತ್ತು. ಮುಂಬೈನಲ್ಲಿ ಉದ್ಯೋಗದಲ್ಲಿರುವ ಫಯಾಜ್ ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಬಿಗ್ ಟಿಕೆಟ್ ಗಳನ್ನು ಖರೀದಿಸುತ್ತಿದ್ದು ಪ್ರಥಮ ಬಹುಮಾನದ ರೂಪದಲ್ಲಿ ಅದೃಷ್ಠ ಒಲಿದು ಬಂದಿತ್ತು. ಫಯಾಜ್ ಮತ್ತು ಗೆಳೆಯರು ಖರೀದಿಸಿದ ಟಿಕೆಟ್‌ಗೆ ಅದೃಷ್ಠ ಒಲಿದು ಬಂದಿತ್ತು. ಇದುವರೆಗೆ ದುಬೈ ನೋಡಿರದ ಫಯಾಜ್ ನನ್ನು ಅರಸಿ ವಿದೇಶದ ಅದೃಷ್ಟ ಒಲಿದು ಬಂದಿತ್ತು. ಇದೀಗ ದುಬೈಗೆ ಭೇಟಿ ನೀಡಿದ ಫಯಾಜ್ ಬಹುಮಾನ ಸ್ವೀಕರಿಸಿದರು.
ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…
ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…
ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…