ಆ ಮನೆಯ ಮಕ್ಕಳಲ್ಲೀಗ ಸಂತಸ…! ಯುವಬ್ರಿಗೇಡ್ ಯುವಕರಲ್ಲಿ ಸಂತೃಪ್ತ ಭಾವ

June 24, 2019
8:00 AM

ಸುಳ್ಯ: ಆ ಪುಟ್ಟ ಮನೆ ನಿರ್ಮಾಣಕ್ಕೆ ಒಂದು ದಿನದ ಶ್ರಮದಾನ. ದಾನಿಗಳ ನೆರವು. ಗುಡಿಸಲೂ ಅಲ್ಲದ ಮನೆಯೊಂದನ್ನು  ಮರುನಿರ್ಮಾಣ ಮಾಡಿದ್ದಾರೆ ಯುವಬ್ರಿಗೇಡ್ ಯುವಕರು. ಸುಳ್ಯದ ಯುವ ಬ್ರಿಗೇಡ್ ಯುವಕರು ಭಾನುವಾರ ಪೂರ್ತಿ ದಿನ ಕೆಲಸ ಮಾಡಿದರು. ಆ ಮನೆಯ ಮಕ್ಕಳ ಮುಖದಲ್ಲಿ ಸಂತಸ ಕಾಣುತ್ತಿದೆ. ಯುವಕರು ಸಂತೃಪ್ತ ಭಾವದಿಂದ ಸುಳ್ಯದ ಕಡೆಗೆ ಹೆಜ್ಜೆ ಹಾಕಿದರು.

Advertisement

ಗ್ರಾಮೀಣ ಕಡೆಗೆ ಯುವಕರೂ ನೋಡುತ್ತಿದ್ದಾರೆ. ಸಮಾಜಮುಖಿಯಾಗಿರುವ ಮನಸ್ಸುಗಳು ಇನ್ನೂ ಇವೆ. ಅವರನ್ನು  ನೋಡುವ ಕಣ್ಣುಗಳು ಇಲ್ಲವಾಗಿದೆ. ಹಾಗಂತ ಅವರೆಂದೂ ಕೆಲಸ ನಿಲ್ಲಿಸಿಲ್ಲ. ನಿರಂತರವಾಗಿ ಬಿಡುವಿನ ನಡುವೆ ಒಂದಷ್ಟು ಕೆಲಸ ಮಾಡುತ್ತಲೇ ಇದ್ದಾರೆ. ಅದು ಯುವಬ್ರಿಗೆಡ್ ಅಂತ ಅಲ್ಲ ಇನ್ನೂ ಹಲವಾರು ಸಂಘಟನೆಗಳ ಯುವಕರು ಸದ್ದಿಲ್ಲದೆ ಕೆಲಸ ಮಾಡುತ್ತಾರೆ. ಅವರಿಗೆ ಪ್ರಚಾರ ಬೇಕಿಲ್ಲ.  ಹಾಗಿದ್ದೂ ನಗರದ ಯಾವುದೇ ಒಂದು ಘಟನೆಯ ಸುತ್ತ ಸುತ್ತುತ್ತಾ ಯುವಕರು ದಾರಿ ತಪ್ಪಿದ್ದಾರೆ ಎನ್ನುವ ಬೊಬ್ಬೆ ಮಾಧ್ಯಮದಲ್ಲಿ  ಕೇಳುತ್ತದೆ. ಪ್ರತೀ ದಿನ ಎಲ್ಲಾ ವಿಷಯಗಳನ್ನೂ  ನೆಗೆಟಿವ್ ಆಗಿಯೇ ಪತ್ರಿಕೋದ್ಯಮ ನೋಡುತ್ತದೆ , ಜಾಹೀರಾತು ಇಲ್ಲದೆ  ನ್ಯೂಸ್ ಪ್ರಕಟವಾಗದು ಅಂತಲೂ ಹೇಳುವವರೂ ಇದ್ದಾರೆ.  ಪ್ರಚಾರಕ್ಕಾಗಿ ವಿವಿಧ ಬಗೆಯ ಆಂದೋಲನ ಮಾಡುವವರೂ ಇದ್ದಾರೆ. ಇದೆಲ್ಲಾ ಬಿಟ್ಟು ಸದ್ದಿಲ್ಲದೆ ಕೆಲಸ ಮಾಡುವ ಯುವಕರ ತಂಡ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಲೇ ಇರುತ್ತದೆ. ಅಂತಹದ್ದರಲ್ಲಿ  ಭಾನುವಾರ ಸುಳ್ಯದ ಯುವಬ್ರಿಗೆಡ್ ಮಾಡಿರುವ ಕೆಲಸ ಶ್ಲಾಘನೀಯ. ಅದು ಸಮಾಜಕ್ಕೂ ತಿಳಿಯಬೇಕು. ಋಣಾತ್ಮಕವಾಗಿ ಚಿಂತಿಸುವ ಬದಲು ರಚನಾತ್ಮಕವಾಗಿ ಯೋಚಿಸುವ ಮನಸ್ಥಿತಿಯನ್ನು  ಯುವ ಬ್ರಿಗೆಡ್ ಯುವಕರಲ್ಲಿ  ಬೆಳೆಸುತ್ತಿದೆ.

ಇದು ಗುಡಿಸಲೂ ಅಲ್ಲದ ಮನೆಯೊಂದರ ಕತೆ. ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮಡಿವಾಳ ಮೂಲೆ ಎಂಬಲ್ಲಿ  ಪಕೀರ ಎಂಬವರ ಮನೆಯ ಇತ್ತು. ಪೂರ್ತಿಯಾಗಿ ಪ್ಲಾಸ್ಟಿಕ್ ಹೊದಿಕೆ ಹಾಕಿ ಗುಡಿಸಲು ಎನ್ನಲೂ ಕಷ್ಟವಾಗುವ ಸ್ಥಿತಿಯಲ್ಲಿತ್ತು. ಈ ಬಗ್ಗೆ ಸಮಾಜಸೇವಾ ಸಂಘಟನೆಗಳು ಜನಪ್ರತಿನಿಧಿಗಳ, ಆಡಳಿತ ವ್ಯವಸ್ಥೆಯ ಗಮನಸೆಳೆದಿದ್ದರೂ ಮನೆ ಮಾತ್ರಾ ಆಗಿರಲಿಲ್ಲ. ಕಳೆದ ಅನೇಕ ವರಷಗಳಿಂದ ಇದೇ ಮನೆಯಲ್ಲಿ  ಅವರು ವಾಸ ಮಾಡುತ್ತಿದ್ದಾರೆ. ಮಳೆಗಾಲವಂತೂ ಇವರ ಬದುಕು ಅಯೋಮಯ. ವ್ಯವಸ್ಥೆಯ ಕಾರಣದಿಂದ  ಮಕ್ಕಳೂ ಶಾಲೆಗೂ ಹೋಗಲಾಗದೆ ಮನೆಯಲ್ಲೂ ಉಳಿದುಕೊಳ್ಳಲಾರದ ಸ್ಥಿತಿ ಇತ್ತು.

 

Advertisement

ಈಗ ನಿರ್ಮಾಣವಾದ ಮನೆ

 

ಯುವ ಬ್ರಿಗೇಡ್ ಈ ಕುಟುಂಬನ್ನು  ಗಮನಿಸಿ ಸಹಾಯ ಮಾಡಿದೆ. ದಾನಿಗಳ ಸಹಾಯದಿಂದ ಮನೆಯೊಂದನ್ನು  ಮರುನಿರ್ಮಾಣ ಮಾಡಿದೆ. ಭಾನುವಾರ ದಿನ ಪೂರ್ತಿ ಯುವಕರ ತಂಡ ಕೆಲಸ ಮಾಡಿದೆ ಅಲ್ಲಿ.  ಅಡಿಪಾಯ ಹಾಕಿ ಸುತ್ತಲೂ ಕಲ್ಲುಗಳನ್ನು  ಕಟ್ಟಿ, ನೆಲಕ್ಕೆ ಸಿಮೆಂಟ್ ಹಾಸಿ ಸುತ್ತಲೂ ಭದ್ರತೆ ಮಾಡಿ ಪ್ಲಾಸ್ಟಿಕ್ ಹೊದಿಕೆಯನ್ನು ಕಟ್ಟಿ ಮನೆ ನಿರ್ಮಾಣ ಮಾಡಿದ್ದಾರೆ. ಅದರ ಜೊತೆಗೆ ಸೋಲಾರ್ ಬೆಳಕನ್ನೂ ಮನೆಗೆ ಕಲ್ಪಿಸಿದ್ದಾರೆ.

 

Advertisement

 

ಯುವಬ್ರಿಗೇಡ್ ಕಾರ್ಯ ಇದಿಷ್ಟೇ ಅಲ್ಲ,

ಇತ್ತೀಚೆಗೆ ಪುಸ್ತಕವನ್ನು ಶಾಲಾ ಮಕ್ಕಳಿಗೆ ವಿತರಣೆ ಮಾಡಿದೆ,  ಶಾಲಾ ಮಕ್ಕಳು ಬರೆದು ಬಿಟ್ಟ ಪುಸ್ತಕದಲ್ಲಿ ಉಳಿದ ಖಾಲಿ ಪುಟಗಳನ್ನು ಸಂಗ್ರಹ ಮಾಡಿ ಅದನ್ನು ಮತ್ತೆ ಜೋಡಿಸಿ ಒಂದು ಸುಂದರವಾದ ಮುಖ ಪುಟವನ್ನು ಹಾಕಿ ಅದನ್ನು ಆಯ್ದ ಬಡ ಮಕ್ಕಳಿಗೆ ಹಂಚುವ ಕೆಲಸವನ್ನು ಮಾಡುತ್ತಿದೆ. ಹೀಗೆ ಮಾಡಿರುವ ಕಾರಣ  ಈ ವರ್ಷ 100 ಪುಟದ 600 ಪುಸ್ತಕಗಳಾಗಿದ್ದವು.

ಪರಿಸರದ ಉಳಿವಿಗಾಗಿ ಹಾಗೂ ನದಿಗಳ ಸ್ವಚ್ಛತೆ, ಸ್ವಚ್ಚ ರಾಜಮಾರ್ಗ ಕಲ್ಪನೆಯಲ್ಲಿ ತಾಲೂಕಿನ ಹೆದ್ದಾರಿಯ ಸ್ವಚ್ಛತೆಯನ್ನುವಿವಿಧ ಹಂತಗಳಲ್ಲಿ  ಕಸವನ್ನು ರಾಜ್ಯಹೆದ್ದಾರಿಯಿಂದ ಹೆಕ್ಕಿವಿಲೇವಾರಿ, ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಆರೋಗ್ಯಯುತವಾದ ಹಣ್ಣುಗಳು ಸಿಗುವ ಉದ್ದೇಶದಿಂದ  ತಾಲೂಕಿನ ಶಾಲೆಗಳಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ,  ಪಾಳು ಬಿದ್ದ ಬಸ್ಸು ನಿಲ್ದಾಣಗಳನ್ನು ಸ್ವಚ್ಛ ಮಾಡಿ ಪೈಂಟ್ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದು, ತುರ್ತು ಸಂದರ್ಭದಲ್ಲಿ ರಕ್ತ ಕೊರತೆಯಾದಾಗ ರಕ್ತದಾನ,  ಕಾಲೋನಿ ಯಲ್ಲಿನ ಬಡವರಿಗೆ ನೀರು ಸರಬರಾಜು ಸರಿಯಾಗಿ ಆಗದ ಸಂದರ್ಭದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ನೀರಿನ ಪೈಪ್ ಗಳನ್ನು ಸರಿ ಪಡಿಸಿ ಸಮಸ್ಯೆ ಗಳನ್ನು ಬಗೆಹರಿಸುವುದು ಹೀಗೆ ಹತ್ತು ಹಲವು ಕೆಲಸವನ್ನು ಸದ್ದಿಲ್ಲದೆ ಯುವಬ್ರಿಗೆಡ್ ಯುವಕರು ಮಾಡಿದ್ದಾರೆ.

Advertisement

 

 

 

 

 

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಾರುಕಟ್ಟೆ ಶುಲ್ಕ ಬದಲಾವಣೆ ಮಾಡಬಾರದೆಂಬ ಕ್ಯಾಂಪ್ಕೋ ಬೇಡಿಕೆ ಪರಿಗಣನೆ
July 12, 2025
7:32 AM
by: The Rural Mirror ಸುದ್ದಿಜಾಲ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ 148 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ
July 11, 2025
7:07 AM
by: The Rural Mirror ಸುದ್ದಿಜಾಲ
ಕೇರಳದಲ್ಲಿ ನಿಫಾ ಎಚ್ಚರಿಕೆ | ತಡೆಗಟ್ಟುವ ಕ್ರಮಗಳ ಬಗ್ಗೆ ನಿಗಾ
July 10, 2025
8:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group