ಸುಳ್ಯ: ಹೈ ಟೊರ್ಕ್ ಮೊಟೊ ಕ್ರೆವ್ ಗ್ರೂಪ್ ಮತ್ತು ಸ್ವಚ್ಛ ನಗರ ಸುಳ್ಯದ ಸಹಭಾಗಿತ್ವದಲ್ಲಿ ವಿಭಿನ್ನ ರೀತಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನಾ ಜಾಥ ನಡೆಯಲಿದೆ.
ಆ.14 ರಂದು ಬೆಳಿಗ್ಗೆ 10 ಗಂಟೆಗೆ ಚೆನ್ನಕೇಶವ ದೇವಾಲಯದ ಆವರಣದಲ್ಲಿ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಧ್ವಜ ಹಾರಿಸುವ ಮೂಲಕ ಬೈಕ್ ಜಾಥಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು 50 ಕ್ಕಿಂತ ಹೆಚ್ಚಿನ ಬೈಕ್ ಸವಾರರು ಸುಳ್ಯ ನಗರದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ದಾರಿಯುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ತಂದು ವಿಲೇವಾರಿ ಮಾಡುವ ಮೂಲಕ ಜನರಲ್ಲಿ ಮುಂದೆ ಪ್ಲಾಸ್ಟಿಕ್ ಉಪಯೋಗಿಸಬೇಡಿ ಎಂದು ಜಾಗೃತಿ ಮೂಡಿಸುವ ವಿಭಿನ್ನ ರೀತಿಯ ” ಟ್ರೆಝರ್ ಹಂಟ್ ಫಾರ್ ಪ್ಲಾಸ್ಟಿಕ್ “ ಚಳುವಳಿ ನಡೆಯಲಿದೆ.ಈ ಬೃಹತ್ ಜಾಥ ಸುಳ್ಯ ಪ್ಲಾಸ್ಟಿಕ್ ಮುಕ್ತ ನಗರವಾಗಿ ಪರಿಣಮಿಸಲು ನಾಂದಿ ಹಾಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಪರಿಸರ ಹಾನಿಯ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಸ್ವಚ್ಛ ಸುಳ್ಯ-ಸುಂದರ ಸುಳ್ಯ ಪರಿಕಲ್ಪನೆಯನ್ನು ಸಾಕಾರಗೊಳಸುವತ್ತ ಮತ್ತೊಂದು ಹೆಜ್ಜೆ ಈ ಕಾರ್ಯಕ್ರಮ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಮ್ಮ ದ್ವಿಚಕ್ರ ವಾಹನ( ಬೈಕ್, ಆಕ್ಟಿವಾ)ದಲ್ಲಿ ಹಿಂಬದಿ ಸವಾರರೊಂದಿಗೆ ನಗರದಾದ್ಯಂತ ಸಂಚರಿಸಲಿರುವರು.ಪ್ಲಾಸ್ಟಿಕ್ ತ್ಯಾಜ್ಯ ಕಂಡಲ್ಲಿ ಹಿಂಬದಿ ಸವಾರರು ಅದನ್ನು ಹೆಕ್ಕಿ ತಮ್ಮೊಂದಿಗೆ ತಂದ ಕೈಚೀಲದಲ್ಲಿ ಹಾಕುವರು.
ಚೆನ್ನಕೇಶವ ದೇವಸ್ಥಾನದಿಂದ ಪ್ರಾರಂಭಗೊಂಡು, ಸುಳ್ಯ ನಗರದಾದ್ಯಂತ ಸಂಚರಿಸಿ , ಪೈಚಾರ್ ತನಕ ಕಸ ಸಂಗ್ರಹಿಸಿ ಪುನಃ ಚೆನ್ನಕೇಶವ ದೇವಸ್ಥಾನದ ಬಳಿ ಕಾರ್ಯಕ್ರಮ ಸಂಪನ್ನಗೊಳಲ್ಲಿದೆ.
ಇದರಲ್ಲಿ ಭಾಗವಹಿಸಲು ಸರ್ವರಿಗೂ ಮುಕ್ತ ಅವಕಾಶ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?