ಸುಳ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಆ.31ಕ್ಕೆ ದ.ಕ ಜಿಲ್ಲೆಗೆ ಭೇಟಿ ನೀಡಿ ನೆರೆ ಬಾಧಿತ ಪ್ರದೇಶಕ್ಕೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ . ಬಳಿಕ ಅಪರಾಹ್ನ 3:00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ದಲ್ಲಿ ಪಾಲ್ಗೊಳ್ಳಲಿದ್ದಾರೆ .
ಈ ಹಿನ್ನೆಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಬಾವಿ ಸಭೆ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸುಳ್ಯ ಬ್ಲಾಕ್ ಉಸ್ತುವಾರಿ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ನಾಯಕರು , ಕಾರ್ಯಕರ್ತರು ಭಾಗವಹಿಸಿ ರಾಜ್ಯದಲ್ಲಿ , ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಸಹಕಾರ ನೀಡಬೇಕೆಂದು ವಿನಂತಿಸಿದರು. ಕಾರ್ಯಕ್ರಮದ ರೂಪುರೇಷೆ ಬಗ್ಗೆ ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಮಹಮದ್ ಆಲಿ ಪುತ್ತೂರು , ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ , ಕೃಷ್ಣಪ್ಪ ಗೌಡ ನೆಕ್ರಾಪ್ಪಾಡಿ , ಬೀರಾ ಮೊಯಿದೀನ್ , ಶಾಫಿ ಕುತ್ತಮೊಟ್ಟೆ , ನಂದರಾಜ ಸಂಕೇಶ , ಭವಾನಿಶಂಕರ ಕಲ್ಮಡ್ಕ , ಜೂಲಿಯ ಕ್ರಾಸ್ತಾ , ಮಹಮ್ಮದ್ ಫವಾಜ್ , ರಜಾಕ್ ಪೈಚಾರು , ಗಂಗಾಧರ ಮೇನಾಲ , ಶ್ರೀಲತಾ ಪ್ರಸನ್ನ, ಹನೀಫ್ ಪುಣ್ಚತ್ತಾರು, ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಸ್ವಾಗತಿಸಿ , ಕೆ ಎಂ ಮುಸ್ತಫ ವಂದಿಸಿದರು.
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…