Advertisement
Exclusive - Mirror Hunt

ಸುಳ್ಯಕ್ಕೆ ಒಲಿದು ಬರಲಿದೆಯೇ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ. .?

Share

* ಸ್ಪೆಷಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ


ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಾರಥ್ಯ ಈ ಬಾರಿ ಸುಳ್ಯಕ್ಕೆ ಒಲಿದು ಬರುವ ಸಾಧ್ಯತೆ ಇದೆ. ಹೀಗೊಂದು ಚರ್ಚೆ ಇದೀಗ ಆರಂಭಗೊಂಡಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಒಲಿದು ಬಂದಂತೆ ಜಿಲ್ಲಾಧ್ಯಕ್ಷ ಸ್ಥಾನ ಈ ಬಾರಿ ಸುಳ್ಯದ ನಾಯಕರಿಗೆ ದಕ್ಕಲಿದೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಭಾರೀ ಸುದ್ದಿ ಹರಿದಾಡುತ್ತಿದೆ.

ಜಿಲ್ಲೆಯ ಸಂಸದ, ತಮ್ಮ ನೆಚ್ಚಿನ ನಾಯಕ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿದರೂ ಬಿಜೆಪಿಯ ಭದ್ರ ಕೋಟೆ ಸುಳ್ಯದ ಕಾರ್ಯಕರ್ತರಲ್ಲಿ ಆ ಸಂಭ್ರಮ, ಉತ್ಸಾಹ ಅಸ್ಟಾಗಿ ಕಂಡು ಬಂದಿಲ್ಲ. ಸುಳ್ಯದ ಜನತೆಯಂತೆ ಕಾರ್ಯಕರ್ತರೂ ಬಹುನಿರೀಕ್ಷೆಯಿಂದ ಕಾದಿದ್ದ ಸಚಿವ ಸ್ಥಾನ ಈ ಬಾರಿಯೂ ಶಾಸಕ ಅಂಗಾರ ಅವರಿಗೆ ಒಲಿದು ಬಾರದ ಕಾರಣ ಉಂಟಾಗಿರುವ ಅತೃಪ್ತಿ ರಾಜ್ಯಾಧ್ಯಕ್ಷತೆ ಜಿಲ್ಲೆಗೆ ಒಲಿದು ಬಂದರೂ ಸುಳ್ಯದ ಬಿಜೆಪಿ ಸಂಭ್ರಮಿಸುತ್ತಿಲ್ಲ. ಬಹುತೇಕ ನಾಯಕರು, ಕಾರ್ಯಕರ್ತರು ಸಂಭ್ರಮಾಚರಣೆಯಿಂದ ದೂರವೇ ಉಳಿದಿದ್ದಾರೆ. ಅಸಹಕಾರ ಚಳವಳಿಯ ಮಧ್ಯೆಯೂ ಕೆಲವು ಪ್ರಮುಖ ನಾಯಕರು ಮಾತ್ರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದರೂ ಬಹುತೇಕ ಮಂದಿ ನಾಯಕರು ಕಾರ್ಯಕರ್ತರು ದೂರ ಉಳಿದಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿರುವುದಕ್ಕೆ ಕಾರ್ಯಕರ್ತರೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಮುನಿಸಿಕೊಂಡಿರುವ ಕಾರ್ಯಕರ್ತರನ್ನೂ , ನಾಯಕರನ್ನೂ ಸಮಾಧಾನಪಡಿಸಲು ಜಿಲ್ಲಾಧ್ಯಕ್ಷ ಪಟ್ಟ ಸುಳ್ಯಕ್ಕೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ಬಾರಿ ಜಿಲ್ಲಾಧ್ಯಕ್ಷತೆ ಪುತ್ತೂರಿನವರಾದ ಸಂಜೀವ ಮಠಂದೂರು ಅವರಿಗೆ ಒಲಿದು ಬಂದಿತ್ತು. ಮಠಂದೂರು ಶಾಸಕರಾಗಿರುವ ಕಾರಣ ಅವರು ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇಲ್ಲ. ಈ ಹಿಂದೆ ಬೆಳ್ತಂಗಡಿಯವರೂ ಬಂಟ್ವಾಳದವರೂ ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. ಹಾಗಿರುವಾಗ ಈ ಬಾರಿ ಸುಳ್ಯಕ್ಕೆ ಅಧ್ಯಕ್ಷತೆಯನ್ನು ನೀಡಿ ಸಚಿವ ಸ್ಥಾನ ತಪ್ಪಿ ಹೋಗಿರುವ ನಿರಾಸೆಯಲ್ಲಿರುವ ಕಾರ್ಯಕರ್ತರನ್ನು ಸಮಾಧಾನಪಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಧ್ಯಕ್ಷತೆ ಸುಳ್ಯಕ್ಕೆ ಒಲಿದು ಬಂದರೆ ಸುಳ್ಯದ ಬಿಜೆಪಿಯ ಪ್ರಭಾವಿ ಮುಖಂಡರೋರ್ವರು ಅಧ್ಯಕ್ಷರಾಗಬಹುದು ಎಂದು ವಿಶ್ಲೇಷಿಸಲಾಗುತ್ತದೆ.ಈ ನಡುವೆ ಜಿಲ್ಲೆಯ ಮತ್ತೊಬ್ಬ ಪ್ರಭಾವಿ ನಾಯಕ, ವಿಧಾನ ಪರಿಷತ್ ನ ಮಾಜಿ ಸದಸ್ಯರೊಬ್ಬರ ಹೆಸರೂ ಕೇಳಿಬರುತ್ತಿದೆ.

ಬಂಪರ್ ಆಫರ್ ಇನ್ನೂ ಬರಬಹುದು…?

ಆರು ಬಾರಿ ಶಾಸಕರಾದ ಎಸ್. ಅಂಗಾರ ಅವರಿಗೆ ಈ ಬಾರಿ ಇನ್ನು ಸಚಿವ ಸ್ಥಾನ ಸಿಗುವ ಸಾಧ್ಯತೆ ತೀರಾ ವಿರಳ. ನಿಗಮ ಅಧ್ಯಕ್ಷತೆಯನ್ನು ಅವರು ಸ್ವೀಕರಿಸುವ ಸಾಧ್ಯತೆಯೂ ಕಡಿಮೆ. ಹಾಗಾದರೆ ಸರಕಾರ ಉಳಿದುಕೊಂಡರೆ ಸುಳ್ಯದ ಬಿಜೆಪಿ ಮುಖಂಡರಿಗೆ ಹೆಚ್ಚಿನ ಸ್ಥಾನ ಮಾನಗಳು ದೊರೆಯಬಹುದು. ನಿಗಮಾಧ್ಯಕ್ಷತೆ, ಅಕಾಡೆಮಿಗಳ ಸಾರಥ್ಯ, ಪ್ರಮುಖ ದೇವಾಲಯಗಳ ಆಡಳಿತದ ಚುಕ್ಕಾಣಿ ಹೀಗೆ ಬಂಪರ್ ಆಫರ್ ಗಳೇ ಬರಬಹುದು ಎಂಬ ಲೆಕ್ಕಾಚಾರಗಳೂ ಇನ್ನೊಂದೆಡೆ ನಡೆಯುತ್ತಿದೆ. ಕಳೆದ ಬಿಜೆಪಿ ಅಧಿಕಾರ ಅವಧಿಯಲ್ಲಿ ಸುಳ್ಯದ ಮುಖಂಡರಿಗೆ ಪ್ರಮುಖ ನಿಗಮದ ಅಧ್ಯಕ್ಷತೆ ಒಲಿದಿತ್ತು. ಹೀಗಾಗಿ ಸುಳ್ಯಕ್ಕೆ ಸಚಿವ ಸ್ಥಾನ ಸಿಗದೇ ಇದ್ದರೂ  ಈಗ ಜಿಲ್ಲೆಯ ನಾಯಕರ, ರಾಜ್ಯದ ನಾಯಕರ ವಿರೋಧವನ್ನೂ ಯಾರೂ ಕಟ್ಟಿಕೊಳ್ಳಲು ಸಿದ್ಧರಿಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಮೌಲ್ಯಮಾಪನದಲ್ಲಿ ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಮೊದಲ…

13 hours ago

ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಾಳ…

17 hours ago

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

2 days ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

2 days ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

2 days ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

2 days ago