ಇದು ಅಕ್ಷರ ನಮನ | ಬರಲಾರದ ಲೋಕಕ್ಕೆ ಮೌನವಾಗಿಯೇ ನಡೆದ ನಮ್ಮೂರಿನ ಡಾಕ್ಟರ್ ಪಿ ಜಿ ಎಸ್ ಪ್ರಕಾಶ್ |

April 30, 2020
1:50 PM

ಮರಳಿ ಬರಲಾರದ ಲೋಕಕ್ಕೆ ಮೌನವಾಗಿ ನಡೆದರಂತೆ ನಮ್ಮೂರಿನ ಡಾಕ್ಟರ್ ಪಿ ಜಿ ಎಸ್ ಪ್ರಕಾಶ್, ಅವರೊಂದಿಗೇ ಊರೂ ಮೌನವಾಯಿತು, ಮೌನವಾಗಿ ರೋಧಿಸಿತು…..

Advertisement
Advertisement
Advertisement
Advertisement

ಯಾಕೆಂದರೆ ಈ ಪ್ರಕಾಶಣ್ಣ “ವೈದ್ಯಕೀಯ ಸೇವೆ”  ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು,ಮನೆ ಮನಗಳ ಬೆಳಗಿದವರು.  …..ಹೌದು ನಂಬೋದಕ್ಕೇ ಅಸಾಧ್ಯ. ಸುಳ್ಯ ತಾಲೂಕಿನಾದ್ಯಂತ, ಅದರಲ್ಲೂ ಬೆಳ್ಳಾರೆ, ಬಾಳಿಲ, ಚೊಕ್ಕಾಡಿ, ಕಲ್ಮಡ್ಕ ಪರಿಸರದ ಸಾಮಾನ್ಯರೊಳಗೊಬ್ಬ ಅಸಾಮಾನ್ಯ ವೈದ್ಯರಾಗಿದ್ದರು. ಪರಂಪರೆಯಿಂದಲೇ ವೈದ್ಯ ಮನೆತನದ , ಸಾತ್ವಿಕ,ಸರಳ ಸಜ್ಜನ,ಮಿತಭಾಷಿಯಾಗಿದ್ದ ಪ್ರಕಾಶಣ್ಣ ತನ್ನ ನೋಟದಲ್ಲೇ ರೋಗಿಯಲ್ಲಿ ಚೈತನ್ಯ ತುಂಬುತಿದ್ದರು. ಯಾವುದೇ ಕಾರಣಕ್ಕೂ ಮಿತಿ ಮೀರಿದ ಔಷಧ ಪ್ರಯೋಗಿಸಿರದಂತಹವರು. ವೈದ್ಯತೋ ನಾರಾಯಣೋ ಹರಿಃ ಎಂಬ ಮಾತು ಇವರನ್ನು ಅನುಸರಿಸಿತ್ತು. ಅಂತೆಯೇ ಅವರನ್ನು ಅರಸಿ ಬರುತ್ತಿದ್ದವರ ಪಾಲಿನ ನಿಜ ದೇವರಾಗಿದ್ದರು. ತಾನು ಶುಶ್ರೂಷೆ ಮಾಡಿದ್ದ ಪ್ರತಿಯೊಬ್ಬನ ದಾಖಲಾತಿ ಇವರ ಪುಸ್ತಕ/ಕಂಪ್ಯೂಟರ್‌ನಲ್ಲಿ ಭದ್ರ. ಅಚ್ಚುಕಟ್ಟು ಜೀವನ ಶೈಲಿ.  ಭೌತಿಕವಾಗಿ ಎಷ್ಟು ನೀಟ್ ಏಂಡ್ ಪರ್ಫೆಕ್ಟ್ ಆಗಿದ್ದರೋ ಅಂತರ್ಯದಲ್ಲೂ ಅಷ್ಟೇ ಪರ್ಫೆಕ್ಟ್ .ಇದು ಅವರ ಮನೆತನದ ಗುಣ. ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಚಳವಳಿಗಳಲ್ಲಿ ಬೌದ್ಧಿಕವಾಗಿ ತೊಡಗಿಸಿಕೊಂಡ ಪ್ರಕಾಶಣ್ಣನವರೀಗೆ ಉನ್ನತ ನಾಯಕರ ಸಂಪರ್ಕವಿದ್ದರೂ ಎಲ್ಲೂ ತೋರಿಸಿಕೊಂಡವರಲ್ಲ. ಸೇವೆಯ ಹೊರತಾಗಿ ಬೇರೆಲ್ಲೂ ಗುರುತಿಸಿಕೊಂಡವರಲ್ಲ.ಅಂದರೆ ಮೌನ ನಡೆಯೇ ಅವರ ಆಂತರ್ಯವಾಗಿತ್ತು.

Advertisement

ಆದರೆ ವಿಧಿ ನಿರ್ಣಯ ಅಂತ ಒಂದಿದೆಯಲ್ಲಾ…. ಅದು ಯಾರನ್ನೂ ಬಿಡದು…. ಅವನ ಆಲಯದೆದುರು ಎಲ್ಲವೂ ಮೌನವೇ…. ಆಯ್ಕೆಗಳೇ ಇಲ್ಲ… ಒಪ್ಪಲೇ ಬೇಕು….. ಅಂತೆಯೇ ನಮಗಿರುವ ದಾರಿ ಒಂದೇ….ಅವರ ಆದರ್ಶಯುತ ಜೀವನದ ನಡೆಗಳನ್ನು ಅನುಸರಿಸುವುದು ಈ ಮೂಲಕ ಅವರನ್ನು ನಮ್ಮಲ್ಲಿ ತುಂಬಿಕೊಂಡು ಅವರನ್ನು ಅಜರಾಮರರನ್ನಾಗಿಸುವುದು , ಅಷ್ಟೇ.

ಜನ್ಮ ಸಾವಿರ ಬರಲಿ, ನಷ್ಟವದರಿಂದೇನು
ಕರ್ಮ ಸಾವಿರವಿರಲಿ, ಕಷ್ಟ ನಿನಗೇನು
ಬ್ರಹ್ಮ ಹೃದಯದಿ ನಿಲ್ಲೆ,  ಮಾಯೆಯೇಗೈದೊಡೇಂ
ಇಮ್ಮಿದಳ ಸರಸವದು..ಮಂಕುತಿಮ್ಮ……

Advertisement

ಎಂದಂತೆ ಪ್ರಕಾಶಣ್ಣ ಸಾವಿರ ಸಾವಿರ ಹೃದಯಗಳಲ್ಲಿ ಸ್ಥಾಪಿತರು.. ಮಾಯೆಯಾಟಕ್ಕೆ ನಿಲುಕದವರು…..

  • ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ, ಕಲ್ಮಡ್ಕ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು
February 20, 2025
7:14 AM
by: ಡಾ.ಚಂದ್ರಶೇಖರ ದಾಮ್ಲೆ
ಸೀತೆ ಪುನೀತೆ | ಅಪೂರ್ಣ ರಾಮಾಯಣ
February 12, 2025
9:44 PM
by: ಡಾ.ಚಂದ್ರಶೇಖರ ದಾಮ್ಲೆ
ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?
February 8, 2025
9:29 PM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ
February 7, 2025
12:15 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror