ಸುಳ್ಯ: ಸುಳ್ಯದ ಪ್ರಮುಖ ಕಚೇರಿಯೊಂದರಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಆರೋಪ ಕಳೆದ ಹಲವಾರು ಸಮಯಗಳಿಂದ ಕೇಳಿಬರುತ್ತಿತ್ತು. ಪ್ರತಿಯೊಂದಕ್ಕೂ ಲಂಚಾವತಾರ ಹೆಚ್ಚಾಗಿದೆ ಎಂದು ದೂರು ಇತ್ತು. ಅದಕ್ಕೆ ಪೂರಕವಾಗಿ ವಿಡಿಯೋವೊಂದು “ಸುಳ್ಯನ್ಯೂಸ್.ಕಾಂ” ಗೆ ಲಭಿಸಿದೆ.
ಸುಳ್ಯದ ಉಪನೋಂದಣಿ ಕಚೇರಿಯಲ್ಲಿ ಅಧಿಕಾರಿಯೊಬ್ಬರು ಹಣ ಪಡೆಯುತ್ತಿರುವುದು ಹಾಗೂ ಹಣಕ್ಕಾಗಿ ಚರ್ಚೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ . ಈಗ ಎಲ್ಲವೂ ಆನ್ ಲೈನ್ ಮೂಲಕ ಪಾವತಿಯಾಗುತ್ತಿರುವ ಸಂದರ್ಭ ಇಷ್ಟೊಂದು ಹಣ ಪಡೆಯುತ್ತಿರುವುದು ಏಕೆ ಎಂಬ ಪ್ರಶ್ನೆ ಒಂದು ಕಡೆಯಾದರೆ, ಕಚೇರಿಯಲ್ಲಿ ಹೀಗೆಲ್ಲಾ ಹಣ ಪಡೆಯುವುದು ಯಾವುದೇ ಅಧಿಕಾರಿಗಳ ಗಮನಕ್ಕೂ ಬಾರದೇ ಇರುವುದು ಸೋಜಿಗ ಎನಿಸಿದೆ. ಹೀಗಾಗಿ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾಮಾಜಿಕ ಸಂಘಟನೆಗಳು ಇದರ ವಿರುದ್ಧ ಹೋರಾಟ ನಡೆಸಲೇಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಜನರೇ ತಮ್ಮ ಕೆಲಸಗಳಿಗಾಗಿ ಹಣ ನೀಡುತ್ತಾರೆ. ಆದರೆ ಇದು ಅದಲ್ಲ, ಒತ್ತಾಯ ಪೂರ್ವಕವಾಗಿ ಚರ್ಚೆ ಮಾಡಿ ಹಣ ಪಡೆಯುವುದು ಈ ವಿಡಿಯೋದಲ್ಲಿ ತಿಳಿಯುತ್ತದೆ. ಎಲ್ಲಿಗೆ ಬಂದು ನಿಂತಿದೆ ನಮ್ಮ ವ್ಯವಸ್ಥೆ…!
ಈ ನಡುವೆ ವಿಡಿಯೋದಲ್ಲಿ ಕೇಳಿಸುವಂತೆ ಹಾಗೂ ಹಣ ತೆಗೆಯುವ ಸಂದರ್ಭ ನಮಗೆ ಬೇರೆದಕ್ಕೂ ಕೊಡಲಿದೆ ಎಂದು ಹೇಳುವುದು ಕೇಳಿಸುತ್ತದೆ. ಇದು ಕೂಡಾ ಚರ್ಚೆಗೆ ಕಾರಣವಾಗಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಸುಳ್ಯದ ಆಡಳಿತ ಪಕ್ಷಗಳು, ಶಾಸಕರು , ಸರಕಾರ, ವಿಪಕ್ಷಗಳು ಸುಮ್ಮನೆ ಕುಳಿತಿರುವುದೇಕೆ ಎಂಬುದೇ ಪ್ರಶ್ನೆಯಾಗಿದೆ.
Media error: Format(s) not supported or source(s) not found
Download File: https://theruralmirror.com/wp-content/uploads/2019/06/WhatsApp-Video-2019-06-07-at-6.28.45-PM.mp4?_=1