ಸುಳ್ಯ: ಇನ್ನರ್‍ವ್ಹೀಲ್ ಕ್ಲಬ್ ಸುಳ್ಯ ಇದರ ಜಿಲ್ಲಾಧ್ಯಕ್ಷರ ಭೇಟಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಹರ್ಷಿತಾ ಪುರುಷೋತ್ತಮ್ ವಹಿಸಿದ್ದರು.
ಜಿಲ್ಲಾ 318ರ ಜಿಲ್ಲಾಧ್ಯಕ್ಷೆ ಅನುರಾಧ ನಂದಕುಮಾರ್ ಮಾತನಾಡಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಕು. ಚಂದನಾ ಗೌಡರವರನ್ನು ಸನ್ಮಾನಿಸಿ, ವಿವಿಧ ಶಾಲೆಗಳಗೆ ಕೊಡುಗೆಗಳನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ನೂತನ ಸದಸ್ಯರಾಗಿ ಡಾ. ತಾರಾ ನಂದನ್, ಡಾ. ಶ್ರಮಿಕಾ ಸೂಂತೋಡು, ಸವಿತಾ ನಾರ್ಕೋಡು, ಮಮತಾ ನಾರ್ಕೋಡು, ಸೌಮ್ಯಾ ಮಾಣಿಬೆಟ್ಟು ಮತ್ತು ಕೃಪಾ ದಿನೇಶ್ ರವರು ಕ್ಲಬ್‍ಗೆ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಮಮತಾ ಸತೀಶ್, ಕಾರ್ಯದರ್ಶಿ ಜಯಮಣಿ ಮಾಧವ, ಖಜಾಂಜಿ ಪೂಜಾ ಸಂತೋಷ್, ಉಪಾಧ್ಯಕ್ಷೆ ವಿನುತಾ ಶೇಟ್, ಲಿಟ್ರೆಸಿ ಸಂಯೋಜಕಿ ಜಯಲಕ್ಷ್ಮೀ ಜೆ.ಕೆ. ರೈ, ಐ.ಎಸ್.ಒ. ಪ್ರಜ್ಞಾ ಮನುಜೇಶ್, ಜತೆ ಕಾರ್ಯದರ್ಶಿ ಸವಿತಾ ಸಿ.ಕೆ., ಸಂಪಾದಕಿ ಮಧುರಾ ಜಗದೀಶ್ ಉಪಸ್ಥಿತರಿದ್ದರು.
ಡಾ. ಹರ್ಷಿತಾ ಪುರುಷೋತ್ತಮ್ ಸ್ವಾಗತಿಸಿ, ಜಯಮಣಿ ಮಾಧವ್ ವರದಿ ವಾಚಿಸಿದರು. ವಿನುತಾ ಶೇಟ್ ವಂದಿಸಿ, ಶ್ರೀದೇವಿ ನಾಗರಾಜ್ ಹಾಗೂ ಆಶಿತಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…