ಸುಳ್ಯ: ಡಿ 29 ಇಬ್ಬನಿ ಸುಳ್ಯ ಸಾದರ ಪಡಿಸಿರುವ ಇಬ್ಬನಿ ಇಯರ್ ಎಂಡ್ ಟ್ರೋಫಿ ಸೀಸನ್ 2ರ ಅಂಡರ್ ಆರ್ಮ್ ಕ್ರಿಕೆಟ್ ಲೀಗ್ ಪಂದ್ಯಾಕೂಟ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಮೈದಾನದಲ್ಲಿ ಜರಗಿತು.
ಸುಳ್ಯ ವಿಧಾನ ಸಭಾ ವ್ಯಾಪ್ತಿಯ 96 ಆಟಗಾರರನ್ನು ಆಯ್ಕೆ ಮಾಡಿ ಐಪಿಯಲ್ ಮಾದರಿಯಲ್ಲಿ ಹರಾಜು ಮಾಡಿ 8 ಮಾಲಕರಿಗೆ ನೀಡಲಾಗಿತ್ತು. ಈ ಒಂದು ಪಂದ್ಯಾಕೂಟದಲ್ಲಿ ಬಿ.ಎಂ ರಫೀಕ್ ಮಾಲಿಕತ್ವದ ಬಿ.ಎಂ.ಎ ಚಾಲೆಂಜರ್ಸ್ ತಂಡವು 2019ರ ಇಬ್ಬನಿ ಇಯರ್ ಎಂಡ್ ಟ್ರೋಫಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ದ್ವಿತೀಯ ಸ್ಥಾನವನ್ನು ರಝಾಕ್ ಕೆ.ಎಂ ಮಾಲಿಕತ್ವದ ಫ್ರೆಂಡ್ಸ್ ಜಟ್ಟಿಪಳ್ಳ ತಂಡವು ತೃಪ್ತಿಪಟ್ಟುಕೊಂಡಿದೆ.
ಪಂದ್ಯಾಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಜಯಿಸಿದ ಕ್ರೀಡಾಪಟು ಸಂಶೀರ್ ಸುಳ್ಯ ಅವರು ಗಣ್ಯ ಆತಿಥಿಗಳಾಗಿ ವೇದಿಕೆಗೆ ಮೆರುಗು ನೀಡಿದರು. ಈ ಪಂದ್ಯಾಕೂಟದಲ್ಲಿ ರಾಮಚಂದ್ರ ಪೆಲ್ತಡ್ಕ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವೀನ್ ಕುಮಾರ್ ಕಜೆ, ಅಬ್ದುಲ್ ಕಲಾಂ ಸುಳ್ಯ, ರಷೀದ್ ಜಟ್ಟಿಪಳ್ಳ, ತಾಜ್ ಅಬೂಬಕ್ಕರ್ ಜನಪ್ರಿಯ, ಶರೀಫ್ ಜಟ್ಟಿಪಳ್ಳ, ಫೈಝಲ್ ಕಟ್ಟೆಕ್ಕಾರ್, ಹಂಝ ಕಾತೂನ್ , ಶಿಹಾಬ್ ಷಾ ಜಟ್ಟಿಪಳ್ಳ, ಉಪಸ್ಥಿತರಿದ್ದರು ಇಬ್ಬನಿ ಅಧ್ಯಕ್ಷ ಖಾದರ್ ಜಟ್ಟಿಪಳ್ಳ ಸ್ವಾಗತಿಸಿ ವಂಧಿಸಿದರು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.