Advertisement
ಸುದ್ದಿಗಳು

ಇವರು ವಿದ್ಯಾರ್ಥಿಗಳ ಭವಿಷ್ಯದ ದಾರಿ ತೋರುವ ಗುರು….!

Share

ಬಹುಶ: ಇಷ್ಟೊಂದು ಭಾವನಾತ್ಮಕ ಸಂದರ್ಭ ಬೇರೆ ಯಾವುದೇ ಸಂದರ್ಭದಲ್ಲಿ ಕಾಣದು.  ಹೇಳುವುದಕ್ಕೆ ಅದೊಂದು ಸಣ್ಣ ಕಾರ್ಯಕ್ರಮ. ಶಾಲೆಯ ಮುಖ್ಯೋಪಾಧ್ಯಾಯರ ಬೀಳ್ಗೊಡುಗೆ ಕಾರ್ಯಕ್ರಮ.  ಆದರೆ ಅಷ್ಟೂ ವರ್ಷದ ವಿದ್ಯಾರ್ಥಿಗಳ ಪಾಲಿಗೆ ಅವಿಸ್ಮರಣೀಯ ದಿನ. ಭವಿಷ್ಯದ ತುತ್ತ ತುದಿಯಲ್ಲಿರುವ ಹಾಗೂ ಸಾಧನೆಯ ಪಥದಲ್ಲಿರುವ ಎಲ್ಲರಿಗೂ ಗುರು ತೋರಿದ ದಾರಿಯ ನೋಡುವ ಕ್ಷಣ. ಅಂತಹ ಶಿಕ್ಷಕರಿಗೆ ಅದೊಂದು ದೊಡ್ಡ ಸಮ್ಮಾನ. ಒಬ್ಬ ಶಿಕ್ಷಕ ಬಯಸುವುದು  ಅದನ್ನೇ ಅಲ್ಲವೇ? ಆ ಸಾರ್ಥಕ ಕ್ಷಣ ಕಂಡ ಶಿಕ್ಷಕರು ಕೆಲವೇ ಕೆಲವು. ಆ ಸಾಲಿನಲ್ಲಿ  ಕಂಡವರು ಬಾಳಿಲದ ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯ ಎಂ.ಎಸ್.ಶಿವರಾಮ ಶಾಸ್ತ್ರಿ.

ಬಾಳಿಲದ ವಿದ್ಯಾಬೋಧಿನೀ ವಿದ್ಯಾ ಸಂಸ್ಥೆಯಲ್ಲಿ ಜು.31 ರಂದು  ಶಾಲಾ ಮುಖ್ಯೋಪಾಧ್ಯಾಯ ಎಂ.ಎಸ್.ಶಿವರಾಮ ಶಾಸ್ತ್ರಿ ಅವರ ಬೀಳ್ಕೊಡುಗೆ ಕಾರ್ಯಕ್ರಮ. ಬಾಳಿಲ ಶಾಲೆ ಎಂದರೇ ಹಾಗೆ ಅಲ್ಲಿನ ಎಲ್ಲಾ ಶಿಕ್ಷಕರೂ ಗೌರವಕ್ಕೆ ಪಾತ್ರರಾದವರೇ. ಬಿ.ವಿ.ಶಗ್ರಿತ್ತಾಯ, ಜತ್ತಪ್ಪ, ಪಿ.ಎನ್.ಭಟ್‌, ನಾರಾಯಣ ಭಟ್‌ , ಕಲಾವತಿ,  ಕೃಷ್ಣ ಶಾಸ್ತ್ರಿ …… ಹೀಗೇ ಎಲ್ಲರೂ ವಿದ್ಯಾರ್ಥಿಗಳನ್ನು  ತಿದ್ದಿದವರು ಮಾತ್ರವಲ್ಲ ವಿದ್ಯಾರ್ಥಿ ಬದುಕುಗೊಂದು ಅರ್ಥ ಕಲ್ಪಿಸಿದವರು. ಇಂದು ಹೊಸ ಪೀಳಿಗೆಯ ಶಿಕ್ಷಕರು ಇದ್ದಾರೆ, ಇವರೆಲ್ಲರೂ ಕೂಡಾ ಅದೇ ಮಾದರಿ ಅನುಸರಿಸುತ್ತಿರುವುದು  ಗಮನಿಸಬೇಕಾದ ಅಂಶ. ಈ ಶಾಲೆಯ ಫಲಿತಾಂಶವೂ ಹಾಗೆಯೇ ಶೇ.90 ಕ್ಕಿಂತ ಮೇಲೆ. ಎಸ್‌ ಎಸ್‌ ಎಲ್ ಸಿ ಯಲ್ಲಿ  ವಿದ್ಯಾರ್ಥಿಗಳ ಸಂಖ್ಯೆಯೂ 250 ಕ್ಕಿಂತ ಹೆಚ್ಚು.

ಈಗ ಅಂತಹ ಶಾಲೆಯ ಮುಖ್ಯೋಪಾಧ್ಯಾಯರು ನಿವೃತ್ತರಾಗಿದ್ದಾರೆ. ಅವರು ಎಂ.ಎಸ್.ಶಿವರಾಮ ಶಾಸ್ತ್ರಿ. ವಿದ್ಯಾರ್ಥಿಗಳ ನೆಚ್ಚಿನ ಸಂಸ್ಕೃತ ಗುರುಗಳು ಹಾಗೂ ಈಗಿನ ಮುಖ್ಯೋಪಾಧ್ಯಾಯರು. ಅವರ ಮುಂದಿನ ನಿವೃತ್ತ ಜೀವನ ಸುಖ ಸಂತೋಷ ದಿಂದ ಕೂಡಿರಲಿ ಎಂದು ವಿದ್ಯಾರ್ಥಿಗಳೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಾರೆ….

ವಿದ್ಯಾಬೋಧಿನೀ ವಿದ್ಯಾ ಸಂಸ್ಥೆ ಯ ಅದೆಷ್ಟೋ ಶ್ರೇಷ್ಠ ಗುರುಗಳಲ್ಲಿ ಇವರು ಒಬ್ಬರು. ಇವರ ವೃತ್ತಿ ಜೀವನದಲ್ಲಿ ಅದೆಷ್ಟೋ ವಿದ್ಯಾರ್ಥಿಗಳನ್ನು ಈ ದೇಶದ ಸತ್ಪ್ರಜೆಯನ್ನಾಗಿ ರೂಪಿಸಿ ಈ ದೇಶಕ್ಕೆ ನೀಡಿದ್ದಾರೆ. ಇಂದಿನ ದಿನ ಅವರ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಅಲಂಕರಿಸಿದ್ದಾರೆ ಎಂದರೆ ಅದರ ಹಿಂದೆ ಅವರ ಶ್ರಮ ಅಪಾರ. ಅವರಿಗೆ ಸಂಸ್ಕೃತ ಪಠ್ಯದ ಮೇಲಿದ್ದ ಅಪಾರವಾದ, ಆಳವಾದ ಜ್ಞಾನ ಮತ್ತು ವಿಶೇಷವಾದ ಭೋದಿಸುವ ಕೌಶಲ್ಯ ಅವರನ್ನು ಈ ಉತ್ತುಂಗಕ್ಕೆ ಏರಿಸಿದೆ.

ಅವರು ನಮಗೆ ಪಾಠ ಮಾಡುತ್ತಿದ್ದ ರೀತಿ ಈಗಲೂ ಕಣ್ಣಿನಲ್ಲಿ ಕಾಣುತ್ತದೆ ಮಾತು ಕಿವಿಯಲ್ಲಿ ಕೇಳುತ್ತದೆ. ಅದರಲ್ಲಿ ಕೂಡ ಪುರಾಣ ಮತ್ತು ಇತಿಹಾಸದ ಬಗ್ಗೆ ಇದ್ದ ಅಪಾರವಾದ ಜ್ಞಾನ ಮತ್ತು ನಮಗೆ ತರಗತಿಯಲ್ಲಿ ಹೇಳುತ್ತಿದ್ದ ರೀತಿಯಿಂದ ನನಗೆ ಅದರ ಮೇಲಿನ ಪ್ರೀತಿಯ ಹೆಚ್ಚಾಗುತ್ತಾ ಹೋಗಿ, ಅಂದಿನಿಂದ ಇಂದಿನ ವರೆಗೂ ತುಂಬಾ ಇಷ್ಟದ ವಿಷಯ ಆಗಿದೆ. ಅಂತಹ ನಮ್ಮ ನೆಚ್ಚಿನ ಗುರುಗಳಿಗೆ ಅವರ ಮುಂದಿನ ನಿವೃತ್ತಿಯ ಜೀವನ ಸುಖ ಸಂತೋಷ ದಿಂದ ಕೂಡಿರಲಿ. ನಿವೃತ್ತಿ ಬಳಿಕವೂ ವಿದ್ಯಾರ್ಥಿಗಳ ಪಾಲಿಗೆ ಬದುಕಿನ ದಾರಿ ತೋರುವ ಗುರುಗಳು ಇವರು. ಹೀಗಾಗಿ ಹೆಮ್ಮೆ, ಆದರ, ಅಭಿಮಾನ. …

ಬರಹ : # ರಘುರಾಮ ಶಂಕರತೋಟ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!

ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…

11 hours ago

ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!

ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…

14 hours ago

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…

18 hours ago

ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ

ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…

2 days ago

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…

2 days ago