Advertisement
ಅಂಕಣ

ಇಷ್ಟಕ್ಕೂ ವೈದ್ಯರು ಮಾಡಿದ ತಪ್ಪೇನು? ವೈದ್ಯರಿಗೆ ರಕ್ಷಣೆ ಕೊಡುವ ಆಡಳಿತ ವ್ಯವಸ್ಥೆ ಉದಯವಾಗಲಿ

Share

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಇಂದು ಜನರ ಆರೋಗ್ಯ ರಕ್ಷಣೆ ಮಾಡುವ, ಜೀವ ರಕ್ಷಣೆ ಮಾಡುವ ವೈದ್ಯರುಗಳ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆಯಾಗಿದೆ. ವೈದ್ಯರುಗಳಿಗೆ ರಕ್ಷಣೆ ಕೊಡುವ ಬದಲು, ವೈದ್ಯರುಗಳ ಮೇಲೆ ಹಲ್ಲೆ ಮಾಡುವ ವ್ಯಕ್ತಿಗಳಿಗೆ ರಕ್ಷಣೆ ಕೊಡುವ ಸಿದ್ಧತೆಯನ್ನು, ಮನಸ್ಥಿತಿಯನ್ನು ಮಮತಾ ಸರಕಾರ ಹೊಂದಿದೆ. ಜಾಲತಾಣದಲ್ಲಿ ಬಂದ ದೃಶ್ಯಗಳನ್ನು ಗಮನಿಸಿದರೆ, ಮಮತಾ ನಿರ್ದೇಶಿತ ಗೂಂಡಾ ಪಡೆ ಮುಷ್ಕರ ನಡೆಸುತ್ತಿರುವ ವೈದ್ಯರುಗಳ ಮೇಲೆ ತನ್ನ ದೌರ್ಜನ್ಯವನ್ನು ನಡೆಸುತ್ತಿರುವುದು ಪ್ರತ್ಯಕ್ಷ ಕಾಣುತ್ತಿದೆ.

Advertisement
Advertisement
Advertisement

ಇಷ್ಟಕ್ಕೂ ವೈದ್ಯರು ಮಾಡಿದ ತಪ್ಪೇನು?  ಚಿಕಿತ್ಸೆ ಮಾಡಿ ರೋಗಿಯ ಜೀವ ಉಳಿಸುವುದಕ್ಕೆ ಪ್ರಯತ್ನ ಮಾಡಿದ್ದು ವೈದ್ಯರ ತಪ್ಪೇ? ಅಥವಾ ಇಲ್ಲಿ ಆಗುವುದಿಲ್ಲ, ಬೇರೆಡೆಗೆ ಕೊಂಡುಹೋಗಿ ಎಂದು ರೋಗಿಯನ್ನು ಸಾಗ ಹಾಕದೆ ಇದ್ದುದು ವೈದ್ಯರ ತಪ್ಪೇ?  ಹೀಗೆ ಹಲವಾರು ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತದೆ. ಹಾಗಾದರೆ ಜಟಿಲ ಪರಿಸ್ಥಿತಿಯಲ್ಲಿರುವ ರೋಗಿಯನ್ನು ಅಥವಾ ಮರಣೋನ್ಮುಖವಾದ ಅವಸ್ಥೆಯಲ್ಲಿ ನ ರೋಗಿಯನ್ನು ವೈದ್ಯರು ಮುಟ್ಟುವುದಕ್ಕೆ ಭಯಪಡಬೇಕೇ? ಎಂಬಿತ್ಯಾದಿ ಪ್ರಶ್ನೆಗಳು ಜೊತೆಯಲ್ಲಿಯೇ ಹುಟ್ಟಿಕೊಳ್ಳುತ್ತವೆ.

Advertisement

ಹಾಗಾದರೆ ವೈದ್ಯರು ತಮ್ಮ ಮೇಲಿನ ಹಲ್ಲೆಯನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಿ ಏಕೆ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ?  ಅಂತಹ ಪ್ರತಿಭಟನೆಗೆ ದೇಶದಾದ್ಯಂತ ವೈದ್ಯಕೀಯ ಸಂಘಟನೆಗಳು ಬೆಂಬಲ ಸೂಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಕ್ಕಾಗಿ ಒಕ್ಕೊರಲಿನಿಂದ ಕೂಗಿ ಕೊಳ್ಳುತ್ತಿವೆ?  ಬಹುಶ: ವೈದ್ಯರ ಮೇಲಿನ ಹಲ್ಲೆಗಳು ಇದೇನು ಹೊಸದಲ್ಲ.

ಈ ಮೊದಲೂ ಕೂಡ ಕಾರಣವಿದ್ದೋ, ಕಾರಣವಿಲ್ಲದೆಯೋ ವೈದ್ಯರುಗಳ ಮೇಲೆ ಹಲವಾರು ಬಾರಿ ಹಲ್ಲೆ ನಡೆದ ಉದಾಹರಣೆಗಳಿವೆ. ಆ ಹಲ್ಲೆಯಿಂದ ವೈದ್ಯರು ಗಂಭೀರ ಸ್ಥಿತಿಗೆ ಒಳಗಾಗಿ ತುರ್ತು ಚಿಕಿತ್ಸೆ ಪಡೆದದ್ದೂ ಇದೆ. ಇಂತಹ ಘಟನೆಗಳು ಮಾಧ್ಯಮಗಳಲ್ಲಿ ದಿನವಿಡಿ ಬಿತ್ತರವಾದದ್ದೂ ಇದೆ. ಕೆಲವೊಂದು ಸಂದರ್ಭಗಳಲ್ಲಿ ವೈದ್ಯರುಗಳಿಂದ ತಪ್ಪುಗಳು ಅಥವಾ ನಿರ್ಲಕ್ಷ್ಯ ಗಳು ಆಗಿಲ್ಲವೇ ಎಂದಲ್ಲ. ಕೆಲವೊಂದು ಬಾರಿ ವೈದ್ಯರುಗಳ ಕಡೆಯಿಂದಲೂ ಪ್ರಮಾದಗಳು ಆದದ್ದು ಇದೆ. ಆದರೆ ಇದಾವುದೇ ಸಂದರ್ಭಗಳಲ್ಲೂ ಕೂಡ ಆ ವೈದ್ಯರನ್ನು ತನಿಖೆಗೆ ಒಳಪಡಿಸಿ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳುವ ಅವಕಾಶಗಳು ಯಾವತ್ತಿಗೂ ಪ್ರತಿಯೊಬ್ಬ ನಾಗರಿಕರಿಗೂ ಇದ್ದೇ ಇದೆ. ಕೆಲವು ಸಂದರ್ಭಗಳಲ್ಲಿ ನ್ಯಾಯಾಲಯವು ರೋಗಿಯ ಪರವಾದ ತೀರ್ಪು ಕೊಟ್ಟ ಉದಾಹರಣೆಗಳು ನ್ಯಾಯಾಲಯದ ಕಡತಗಳಲ್ಲಿ ದಾಖಲಾಗಿವೆ. ಇನ್ನೂ ಬಹಳಷ್ಟು ಸಲ ರೋಗಿಯ ಕಡೆಯವರ ಆಪಾದನೆಗಳು ವೈದ್ಯರ ನಿರ್ಲಕ್ಷ್ಯವನ್ನು ಸಾಬೀತುಗೊಳಿಸುವುದಿಲ್ಲ ಎಂದು ತೀರ್ಪಿತ್ತ ದಾಖಲೆಗಳು ಇವೆ.

Advertisement

ಹೀಗಿರುವಾಗ, ಏಕಾಏಕಿ ಪರಿಸ್ಥಿತಿಯ, ರೋಗದ, ರೋಗಿಯ ಕಾಯಿಲೆಯ ತೀವ್ರತೆ ಮತ್ತು ಸ್ಥಿತಿಗತಿಗಳನ್ನು ಪರಾಮರ್ಶಿಸದೆ ತಾನೇ ಕಾನೂನನ್ನು ಕೈಗೆತ್ತಿಕೊಂಡು ಕ್ಷಣದ ಭಾವೋದ್ವೇಗಕ್ಕೆ ಒಳಗಾಗಿ ವೈದ್ಯರ ಮೇಲೆ ಹಲ್ಲೆ ಮಾಡುವ ಅಧಿಕಾರವೂ, ಅಗತ್ಯವೂ ರೋಗಿಗೆ, ರೋಗಿಯ ಕಡೆಯವರಿಗೆ ಇದೆಯೇ ಎಂಬುದನ್ನು ನಾಗರಿಕ ಸಮಾಜ ತಾಳ್ಮೆಯಿಂದ ಕುಳಿತು ಯೋಚಿಸಬೇಕಾಗಿದೆ. ” ತಪ್ಪು ಮಾಡುವುದು ಮನುಷ್ಯ ಸ್ವಭಾವ” ಎಂಬ ಉಕ್ತಿಯಂತೆ ವೈದ್ಯರುಗಳು ದೇವರಲ್ಲ ಅಥವಾ ಅತಿಮಾನುಷ ಶಕ್ತಿ ಹೊಂದಿದವರು ಕೂಡ ಅಲ್ಲ. ವೈದ್ಯರೆಂದರೆ ದೇವರು ಇದ್ದ ಹಾಗೆ ಎಂಬ ಗಾದೆ ಮಾತನ್ನು ಪೂರ್ತಿಯಾಗಿ ನಂಬಿದರೆ ಅದು ಹಾದಿ ತಪ್ಪಿಸುವುದು ಖಂಡಿತ. ಬದಲಿಗೆ ದೇವರೇ ನಿಜವಾದ ವೈದ್ಯ ಎಂದು ತಿದ್ದುಪಡಿ ಮಾಡಿ ಅರ್ಥೈಸಿಕೊಂಡರೆ ಹೆಚ್ಚು ಸರಿ ಬರುತ್ತದೋ ಏನೋ.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?

Advertisement

ಎಲ್ಲಾ ಅಪರಾಧಗಳಿಗೆ ಇರುವಹಾಗೆ ವೈದ್ಯರುಗಳ ಮೇಲೆ ಅಥವಾ ಆಸ್ಪತ್ರೆಗಳ ಮೇಲೆ ದಾಂಧಲೆ ನಡೆಸುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸುವ ತೀವ್ರತರ ಕಾನೂನುಗಳು ಜಾರಿಗೆ ಬರಬೇಕಾಗಿದೆ. ವೈದ್ಯರ ಮೇಲಿನ ಹಲ್ಲೆಯನ್ನು ವಿಶೇಷ ಹಾಗೂ ತೀವ್ರ ಅಪರಾಧ ವಿಭಾಗದ ಅಡಿಯಲ್ಲಿ ತಂದು ವಿಶೇಷ ದಂಡ ಸಂಹಿತೆ ಅದಕ್ಕೋಸ್ಕರವೇ ರೂಪಿತ ವಾಗಬೇಕಾಗಿದೆ. ಈಗಾಗಲೇ ಕಾನೂನುಗಳು ಈ ಕುರಿತು ರಚನೆಯಾಗಿದ್ದು, ಆದರೆ ಅವುಗಳು ಅನುಷ್ಠಾನಗೊಳ್ಳುವ ಲ್ಲಿ ಪೋಲಿಸ್ ಇಲಾಖೆ ಹಾಗೂ ಆಡಳಿತ ವ್ಯವಸ್ಥೆ ಸ್ವಲ್ಪ ಎಡವಿ ಬಿದ್ದಿದೆಯೆನೋ ಎಂಬ ಆತಂಕ ವೈದ್ಯ ಜಗತ್ತನ್ನು ಕಾಡುತ್ತಿದೆ. ಇದೇ ರೀತಿಯ ಹಲ್ಲೆಗಳು ವೈದ್ಯರ ಮೇಲೆ ಮರುಕಳಿಸಿದಲ್ಲಿ ಖಂಡಿತವಾಗಿಯೂ ವೈದ್ಯ ಜಗತ್ತು ರೋಗಿಯನ್ನು ಚಿಕಿತ್ಸೆಗೆ ಎತ್ತಿಕೊಳ್ಳುವ ಮೊದಲು ಹತ್ತಾರು ಸಲ ಯೋಚಿಸಿ, ಅತಿ ಜಾಗರೂಕತೆಯ ಹೆಜ್ಜೆಗಳನ್ನು ಅನುಸರಿಸಬೇಕಾಗ ಬಹುದು. ಇದರ ಬಾಧಕಗಳು ಮತ್ತೆ ರೋಗಿಯ ಮೇಲೆಯೇ ಆಗುವುದು ಎಂಬುದನ್ನು ಗಂಭೀರವಾಗಿ ಸಮಾಜ ಯೋಚಿಸಬೇಕಾಗಿದೆ.

ಹಲ್ಲೆಯ ಭಯದಿಂದ ಚಿಕಿತ್ಸೆಯನ್ನು ನಿರಾಕರಿಸುವ ಸಂದರ್ಭಗಳು ಬಂದರೂ ಆಶ್ಚರ್ಯವಿಲ್ಲ. ಅಷ್ಟೇ ಅಲ್ಲದೆ, ಭಯದ ನೆರಳಿನಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯನು ತನ್ನ ಸಂಪೂರ್ಣ ಸಾಮರ್ಥ್ಯ ಉಪಯೋಗಿಸಿ ಚಿಕಿತ್ಸೆ ಮಾಡುವ ಅವಕಾಶಗಳು, ಸಾಧ್ಯತೆಗಳು ಕಡಿಮೆ ಇರುತ್ತವೆ. ರೋಗಿಯ ರೋಗ ಲಕ್ಷಣ ಹಾಗೂ ಪರೀಕ್ಷಾ ವಿಧಾನಗಳ ಮೂಲಕ ಆರಂಭಿಕ ಚಿಕಿತ್ಸೆ ನೀಡುತ್ತಿರುವ ವೈದ್ಯಸಮಾಜ , ಇನ್ನು ಮುಂದೆ ರಿಸ್ಕ್ ತಪ್ಪಿಸುವುದಕ್ಕೋಸ್ಕರ , ರೋಗಿ ಬಂದಕೂಡಲೇ ಪರೀಕ್ಷಿಸಿ ಉನ್ನತಮಟ್ಟದ ತಪಾಸಣೆಗಳನ್ನು ನಡೆಸಬೇಕಾದ ಅನಿವಾರ್ಯತೆ ವೈದ್ಯರಿಗೆ ಇದಿರಾಗಬಹುದು. ಆಗ ತಪಾಸಣೆಯ ವೆಚ್ಚ ರೋಗಿಗೆ ಹೊರೆ ಆಗಬಹುದಲ್ಲವೇ? ಹಾಗೆಂದು ಇದು ರೋಗಿಗಳನ್ನು ಭಯಗೊಳಿಸುವ ಉದ್ದೇಶದಿಂದ ನಾನು ಹೇಳಿದ್ದಲ್ಲ. ಆದರೆ ವೈದ್ಯರ ಮೇಲಿನ ಹಲ್ಲೆಯ ಸಾಮಾಜಿಕ ಸಾಧ್ಯತೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

Advertisement

ಎಷ್ಟೋ ಸಲ, ಕಾಯಿಲೆ ಉಲ್ಬಣಗೊಂಡು ಆಸ್ಪತ್ರೆಗೆ ಬಂದ ಸ್ಥಿತಿಯಲ್ಲಿ, ವೈದ್ಯರು ಗರಿಷ್ಠ ಸಾಧ್ಯತೆಗಳನ್ನು ಬಳಸಿ ಚಿಕಿತ್ಸೆ ಕೊಟ್ಟರೂ ಕೂಡ ರೋಗಿಗೆ ಮರಣ ಸಂಭವಿಸಿದರೆ, ಆ ಸಂದರ್ಭದಲ್ಲೂ ಕೂಡ ವೈದ್ಯರುಗಳ ಮೇಲೆ ಹಲ್ಲೆ ನಡೆದದ್ದಿದೆ. ಹಾಗಾದರೆ ರೋಗಿಯನ್ನು ಕಳಕೊಂಡ ರೋಗಿಯ ಸಂಬಂಧಿಕರ ಭಾವೋದ್ವೇಗಕ್ಕೆ, ಆಕ್ರೋಶಕ್ಕೆ ,ವಿಧಿಯ ಬದಲಿಗೆ ವೈದ್ಯರು ಬಲಿಪಶು ವಾಗಬೇಕೇ? ರೋಗಿಯ ಸಂಬಂಧಿಕರ ಅರಿವಿನ ಕೊರತೆಗೆ ವೈದ್ಯರು ಎರವಾಗಬೇಕೇ? ನಮ್ಮ ದೇಶದಲ್ಲಿ ಅಧಿಕಾಂಶ ಜನರಿಗೆ ಕಾಯಿಲೆಯ ಗಂಭೀರಾವಸ್ಥೆಯ ತಿಳುವಳಿಕೆ ಇರುವುದಿಲ್ಲ. ಅಷ್ಟೇ ಅಲ್ಲ ಕಾಯಿಲೆಯ ಆರಂಭಿಕ ಹಂತದಲ್ಲಿ ವೈದ್ಯರನ್ನು, ಆಸ್ಪತ್ರೆಯನ್ನು ಸಮೀಪಿಸು ವುದೂ ಇಲ್ಲ. ತೀವ್ರವಾದ ಸೆಪ್ಟಿಸೀಮಿಯ , ಹೃದಯಾಘಾತ, ಆಂತರಿಕ ರಕ್ತಸ್ರಾವ, ಹಾವಿನ ಕಡಿತ, ಅಪಘಾತ ಇತ್ಯಾದಿ ಸ್ಥಿತಿಗಳಲ್ಲಿ ವೈದ್ಯರಿಗೆ ಚಿಕಿತ್ಸೆಯ ಫಲಿತಾಂಶದ ಮೇಲೆ ಪರಿಪೂರ್ಣವಾದ ಹಿಡಿತ ವಿರುವುದಿಲ್ಲ, ಚಿಕಿತ್ಸಾ ಪ್ರಕ್ರಿಯೆಯ ಮೇಲೆ ಮಾತ್ರ ಹಿಡಿತವಿದೆ ಎಂಬ ನಗ್ನ ಸತ್ಯ ಜನತೆಯ ಮೆದುಳಿಗೆ ಪ್ರವೇಶ ಪಡೆಯಬೇಕಾಗಿದೆ. ಮಾತ್ರವಲ್ಲ ವೈದ್ಯರ, ಆಸ್ಪತ್ರೆಯ, ಚಿಕಿತ್ಸೆಯ ಮಿತಿಗಳ ಅರಿವು ಜನಸಮೂಹಕ್ಕೆ ಗೊತ್ತಾಗಬೇಕಾಗಿದೆ. ವೈದ್ಯರು ಮೃತ್ಯುವಿನ ದವಡೆಯಿಂದ ಎಳೆದುತರುವ ಪವಾಡ ಪುರುಷರಲ್ಲ, ಸತ್ತವರನ್ನು ಬದುಕಿಸುವ ಧನ್ವಂತರಿಯೂ ಅಲ್ಲ ಎಂಬ ವಾಸ್ತವವಾದ ಅರಿವು ಇಡೀ ಸಮಾಜದಲ್ಲಿ ಆಗಬೇಕಾಗಿದೆ. ಭಾರತ ದೇಶದಲ್ಲಿ ಅರ್ಧದಷ್ಟು ಜನರಿಗೆ ತಮಗೆ ಇರುವ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದ ಅರಿವು ಇಲ್ಲವೆಂಬುದು ಇತ್ತೀಚೆಗಿನ ಪರಿ ವೀಕ್ಷಣೆಯಿಂದ ತಿಳಿದುಬಂದಿದೆ.

ಆದುದರಿಂದ ವೈದ್ಯರು ಚಿಕಿತ್ಸೆಗೆ ಹಾಗೂ ಶಸ್ತ್ರಚಿಕಿತ್ಸೆಯ ಮುನ್ನ ಅನುಮತಿ ಪತ್ರಕ್ಕೆ ರೋಗಿಯ ಸಹಿ ಪಡೆಯುವುದರ ಜೊತೆಗೆ, ಚಿಕಿತ್ಸೆಯ ಇತಿಮಿತಿಗಳನ್ನು ಆರಂಭದಲ್ಲಿ ರೋಗಿಯ ಕುಟುಂಬಿಕರಿಗೆ ವಿವರಿಸಿ ಮನದಟ್ಟು ಮಾಡುವ ಪ್ರಯತ್ನಗಳು ನಡೆಯಬೇಕಾಗಿದೆ. ರೋಗಿಗೆ ಮನದಟ್ಟು ಮಾಡಲು ವೈದ್ಯರು ಬಳಸುವ ಸಮಯವು ,ಚಿಕಿತ್ಸೆಗೆ ಬಳಸುವ ಸಮಯದಷ್ಟೇ ಪ್ರಾಮುಖ್ಯವಾದುದು ಎಂಬುದನ್ನು ವೈದ್ಯರು ಕೂಡ ತಿಳಿದುಕೊಳ್ಳಬೇಕಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದರ ಅವಶ್ಯಕತೆಯನ್ನು ಸಮಾಜ ಕೇಳುತ್ತಾ ಇದೆ. ಜನತೆ ಕೂಡ ಒಂದು ವಿಚಾರವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಯಾವ ವೈದ್ಯನು ಕೂಡ ರೋಗಿಯ ಪರಿಸ್ಥಿತಿ ಉಲ್ಬಣಗೊಳ್ಳಲು ಎಂದು ಚಿಕಿತ್ಸೆ ನೀಡುವ ಉದ್ದೇಶವನ್ನು ಹೊಂದಿರುವುದಿಲ್ಲ. ವೈದ್ಯರು ಕೂಡ ತಮಗೆ ತಾವೇ ಸ್ಪಷ್ಟಪಡಿಸಿಕೊಳ್ಳಬೇಕು…. ಯಾವುದೇ ರೋಗಿಗೆ ಕಾಯಿಲೆಯ ಸ್ವರೂಪದ ಹಾಗೂ ಚಿಕಿತ್ಸೆಯ ಸ್ವರೂಪದ ಅರಿವು ತಮ್ಮಷ್ಟು ಇರುವುದಿಲ್ಲ. ಸಾಂದರ್ಭಿಕ ಸತ್ಯಗಳು ಹೀಗಿರುವಾಗ, ವೈದ್ಯರ ಮೇಲಿನ ಹಲ್ಲೆಗಳು ಸರ್ವಥಾ ಖಂಡನೀಯ ಮತ್ತು ವೈದ್ಯರ ಮೇಲೆ ಹಿಂಸಾತ್ಮಕ ಮಾರ್ಗಗಳು ವೈದ್ಯಕೀಯ ವ್ಯವಸ್ಥೆಗೆ ಒಂದು ಶಾಪವಾಗಿ ಪರಿಣಮಿಸಬಹುದು ಎಂಬ ದೂರದೃಷ್ಟಿ ಸರ್ವದಾ ಎಲ್ಲರಲ್ಲೂ ಇರಲಿ. ಹಿಂಸಾತ್ಮಕ ವಿಧಾನಗಳನ್ನೇ ಬೆಂಬಲಿಸುವ, ಅಹಂಕಾರ ದಿಂದ ಕೂಡಿದ ಧಾರ್ಷ್ಟ್ಯವನ್ನು ಪ್ರದರ್ಶಿಸುವ , ತಮ್ಮ ಮೇಲಿನ ಹಲ್ಲೆಯನ್ನು ಪ್ರತಿಭಟಿಸಿ ಮುಷ್ಕರ ಹೂಡುತ್ತಿರುವ ವೈದ್ಯರ ಮೇಲೆ ಗೂಂಡಾಗಿರಿ ಪ್ರದರ್ಶಿಸುತ್ತಿರುವ, ಪಶ್ಚಿಮ ಬಂಗಾಳದ, ಜನತೆಯ ಮೇಲೆ ಒಂದಿಷ್ಟೂ ಮಮತೆ ಇಲ್ಲದ ಮಮತಾ ಬ್ಯಾನರ್ಜಿ ಆಡಳಿತ ಅಂತ್ಯಗೊಳ್ಳಲಿ. ವೈದ್ಯರಿಗೆ ರಕ್ಷಣೆ ಕೊಡುವ ಆಡಳಿತವ್ಯವಸ್ಥೆ ಅಲ್ಲಿ ಉದಯವಾಗಲಿ. ರಕ್ತಪಾತವು ನಿಂತು ವೈದ್ಯರಿಗೂ, ರೋಗಿಗಳಿಗೂ ಹಿತವಾದ ವ್ಯವಸ್ಥೆ ಒದಗಿ ಬರಲಿ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |

ಅಡಿಕೆಯ ಔಷಧೀಯ ಗುಣಗಳು ಹಲವಾರು ಇವೆ. ಅಡಿಕೆಯ ಚೊಗರಿನಿಂದ ತಯಾರು ಮಾಡುವ ಸೋಪು…

12 hours ago

ಇಂಡಿಯನ್ ಅಕಾಡೆಮಿ ಆಫ್ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಜಯಪ್ರಸಾದ ಆನೆಕಾರ

ಮಂಗಳೂರಿನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2025ನೇ ಸಾಲಿನ ಇಂಡಿಯನ್ ಅಕಾಡೆಮಿ ಆಫ್ ಓರಲ್…

13 hours ago

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |

ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…

22 hours ago

ಗುಬ್ಬಚ್ಚಿ ಸಂಕುಲ ರಕ್ಷಣೆಗೆ ಪ್ರಧಾನಿ ಕರೆ | ಬೇಲೂರಿನಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ

ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…

23 hours ago

ಮಹಿಳಾ ಉದ್ಯಮಿಗಳಿಗೆ  ಎನ್‍ಆರ್ ಎಲ್‍ಎಮ್ ಯೋಜನೆ ಸ್ಪೂರ್ತಿಯ ಸೆಲೆಯಾಗಿದೆ

ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ  ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…

23 hours ago

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ,  ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ ಕಡಿವಾಣ  ಹಾಕಲು ಜಿಲ್ಲಾಡಳಿತ ಸೂಚನೆ

ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…

23 hours ago