Advertisement
MIRROR FOCUS

ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |

Share

ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ ಬಂಟ್ವಾಳದ ಮಾಣಿಲದ ಕೃಷಿಕ. ಕೃಷಿಕ ಜಾನ್ ಮೊಂತೆರೋ ಅವರ ಈ ಸಾಹಸಗಾಥೆಯ ಪರಿಚಯ ಇಲ್ಲಿದೆ..  

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಾಣಿಲ ಗ್ರಾಮ ಬೇಸಿಗೆ ಬಂತೆಂದರೆ ನೀರಿನ ಅಭಾವವನ್ನು ಎದುರಿಸುತ್ತದೆ. ಈ ನೀರಿನ ಬರವನ್ನು ನಿವಾರಿಸಲು ಗ್ರಾಮದ ಕೃಷಿಕ ಜಾನ್ ಮೊಂತೆರೋ ಸುರಂಗ ಕೊರೆದು ಯಶಸ್ವಿಯಾಗಿದ್ದಾರೆ. ಕೃಷಿ ಕಾಯಕವನ್ನೇ ಉಸಿರಾಗಿಸಿಕೊಂಡಿರುವ ಜಾನ್ ಮೊಂತೆರೋ, ಇಳಿ ವಯಸ್ಸಿನಲ್ಲೂ ಏಕಾಂಗಿಯಾಗಿ ಸುರಂಗ ಕೊರೆದು ಸಾಹಸ ಮಾಡಿದ್ದಾರೆ.

ಮೂಲತಃ ಕೃಷಿ ಕಾರ್ಮಿಕರಾಗಿರುವ  ಜಾನ್ ಮೊಂತೆರೋ   ದಿನವಿಡಿ ಕೂಲಿ ಕೆಲಸ ಮಾಡಿ, ಬಳಿಕ  ಸಂಜೆ 6 ಗಂಟೆಯಿಂದ ತಡರಾತ್ರಿ 12ಗಂಟೆಯವರೆಗೆ ಪ್ರತಿ ದಿನ ತಮ್ಮ  ಜಮೀನಿನಲ್ಲಿ ಸುರಂಗ ಕೊರೆಯುತ್ತಿದ್ದರು.  ಸುಮಾರು 30 ಅಡಿ ಆಳದ  8ಕ್ಕೂ ಹೆಚ್ಚು  ಸುರಂಗಗಳನ್ನು ಕೊರೆದಿದ್ದಾರೆ. ಮೂವತ್ತು ವರ್ಷದ ಪ್ರಾಯದಲ್ಲಿರುವಾಗಲೇ ಮೊಂತೆರೊ, ಸುರಂಗ ಕೊರೆಯುವ ಕಾರ್ಯ  ಆರಂಭಿಸಿದ್ದರು. ಜೀವನದುದ್ದಕ್ಕೂ  ಸುರಂಗವನ್ನು  ಕೊರೆದು  ಜೀವಜಲಕ್ಕಾಗಿ  ಅವರ ಹುಡುಕಾಟ ನಿರಂತರವಾಗಿ ಮುಂದುವರೆಯುತ್ತಿತ್ತು. ಇದೀಗ  ಅವರ ಭಗೀರಥ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಅವರು ಕೊರೆದ ಸುರಂಗಗಳ ಪೈಕಿ ಮೂರು  ಸುರಂಗಗಳಲ್ಲಿ ಇದೀಗ ಅಂತರ್ಜಲ ಇದೆ.  ಸುರಂಗಗಳಿಂದ ನಿರಂತರ ಹರಿಯುತ್ತಿರುವ ಜಲಧಾರೆಯಿಂದ  ಮೊಂತೆರೋ ಅವರ  ಕೃಷಿ ಭೂಮಿ ಹಚ್ಚಹಸಿರಾಗಿ ಕಂಗೊಳಿಸುತ್ತಿದೆ. ಅವರ ತೋಟದಲ್ಲಿ ತೆಂಗು ಕಂಗು, ಭತ್ತ, ಕಾಳು ಮೆಣಸು ಸಮೃದ್ಧವಾಗಿ ಬೆಳೆದು ನಿಂತಿವೆ. ಇದೀಗ  70ರ ಹರೆಯದಲ್ಲಿರುವ  ಮೊಂತೆರೋ, ಈಗಲೂ ಸಹ  ಕೃಷಿ ಕಾಯಕವನ್ನು ನಿಲ್ಲಿಸದೆ  ದಿನವಿಡೀ ತಮ್ಮ ಜಮೀನಿನಲ್ಲಿ  ಭೂತಾಯಿಯ ಸೇವೆಯನ್ನು  ಮುಂದುವರೆಸಿದ್ದಾರೆ.ಕೃಷಿ ತೋಟ ಮಾಡುವ ಸವಾಲಿಗೆ ಎದುರಾಗಿದ್ದು ನೀರಿನ ಸಮಸ್ಯೆ. ಹೀಗಾಗಿ ನೀರಿನ ಸಮಸ್ಯೆಗೆ ತಾವು ಕಂಡುಕೊಂಡಿದ್ದು ಸುರಂಗ ಎಂದು ಹೇಳುತ್ತಾರೆ ಜಾನ್ ಮೊಂತೆರೋ.

ಮೊಂತೆರೋ ಅವರ ದಣಿವರಿಸಿದ ಈ ಉತ್ಸಾಹವನ್ನು ಕಂಡ ಗ್ರಾಮದ ಜನರ ಅವರನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ. ಜಾನ್ ಮೊಂತೆರೊ ಅವರ ಈ ಸಾಹಸಕ್ಕೆ ಪತ್ನಿ ದುರ್ಸಿನಾ ಸೋಜಾ ಮತ್ತು ಮಕ್ಕಳು ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ.

ಕಷ್ಟಪಟ್ಟು ಛಲದಿಂದ ಭಗೀರಥ ಪ್ರಯತ್ನಪಟ್ಟು ಯಶಸ್ಸು ಸಾಧಿಸಿದ್ದು, ಅವರ ಕೆಲಸಕ್ಕೆ ಮಕ್ಕಳು ಕೂಡ ಸಾಥ್ ಕೊಟ್ಟಿದ್ದಾರೆ ಎನ್ನುತ್ತಾರೆ ಜಾನ್ ಮೊಂತೆರೋ ಪತ್ನಿ ದುರ್ಸಿನಾ ಸೋಜಾ.

ಒಟ್ಟಾರೆಯಾಗಿ  ಜಾನ್ ಮೊಂತೆರೋ ತಮ್ಮ ಈ ವಿನೂತನ ಸಾಹಸದಿಂದಾಗಿ  ಕರ್ನಾಟಕದ ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದು,  ಯುವಪೀಳಿಗೆಗೂ  ಮಾದರಿಯಾಗಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

9 hours ago

ಗೋಡಂಬಿ ಬೇರೆ ದೇಶಗಳಿಂದ… ಜಾಗತಿಕ ಮಾರುಕಟ್ಟೆ ವಿಯೆಟ್ನಾಂನ ಕೈಯಲ್ಲಿ..!

ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…

9 hours ago

ರೇಷನ್ ಕಾರ್ಡ್‌ ಇ-ಕೆವೈಸಿಗೆ ಇನ್ನು ಕ್ಯೂ ಬೇಕಿಲ್ಲ – ಮನೆಯಲ್ಲೇ ಇ-ಕೆವೈಸಿಗೆ ‘ಅನ್ನಸೇವೆ’ ಆ್ಯಪ್‌

ಪಡಿತರ ಚೀಟಿಗೆ ಆಧಾರ್‌ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…

10 hours ago

ಅಡಿಕೆ ವಹಿವಾಟಿನ ಹಿಂದೆ ಮತ್ತೊಂದು ದೊಡ್ಡ ತನಿಖೆ..? ₹1.3 ಕೋಟಿ ನಗದು ವಶ

ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…

10 hours ago

ಇಂಧನ ಮಾತ್ರವಲ್ಲ, ಕೃಷಿಗೂ ಹೊಸ ಮಾರುಕಟ್ಟೆ: ಎಥೆನಾಲ್‌ ಮಿಶ್ರಣ ಕೃಷಿ ವೈವಿಧ್ಯೀಕರಣಕ್ಕೆ ಹೆಜ್ಜೆ ಎಂದ ಗಡ್ಕರಿ

ಎಥೆನಾಲ್‌ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…

11 hours ago

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ

ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…

1 day ago