ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಕ್ಷಣ ಅದು.ಇನ್ನೇನು ಯಶಸ್ಸು ಹತ್ತಿರವಾಗಿತ್ತು. ಕೇವಲ 2.1 ಕಿಮೀ ದೂರ ಇರುವಾಗ ಅರ್ಬಿಟರ್ ನಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್ ನಿಂದ ಡೇಟಾಗಳನ್ನುಸ್ವೀಕರಿಸುವುದನ್ನು ಆರಂಭಿಸಿದ ನೌಕೆ, ಇದ್ದಕ್ಕಿದ್ದಂತೆ ಸಂವಹನ ಕಳೆದುಕೊಂಡಿತ್ತು. ಈ ಹೊತ್ತಿಗೆ 6000 ಕಿಮೀ ವೇಗದಲ್ಲಿ ಇರುವ ನೌಕೆಯ ವೇಗವೂ ಕಡಿಮೆಗೊಂಡು ಸರಿಯಾದ ಪಥದಲ್ಲಿ ಸಾಗಬೇಕು. ಇದೆಲ್ಲಾ ಸವಾಲಿನ ಕೆಲಸ. ಚಂದ್ರಯಾನ-2 ಮಿಷನ್ ನಲ್ಲಿ ಇಸ್ರೋ ತೆಗೆದುಕೊಂಡಿರುವ ರಿಸ್ಕ್ ಪ್ರಮಾಣ ಬಹುದೊಡ್ಡದಿದೆ. ಏಕೆಂದರೆ ಚಂದ್ರನ ಮೇಲೆ ನೌಕೆಯ ಸಾಫ್ಟ್ ಲ್ಯಾಂಡಿಂಗ್ ನ ಸಕ್ಸಸ್ ರೇಟ್ ಜಾಗತಿಕ ಮಟ್ಟದಲ್ಲಿ ಶೇ.37 ಅಷ್ಟೇ. ಹೀಗಾಗಿ ಭಾರತದ ಪ್ರಯತ್ನ, ಇಸ್ರೋ ವಿಜ್ಞಾನಿಗಳ ಪ್ರಯತ್ನದಲ್ಲಿ ಸೋಲಲ್ಲ, ಗೆಲವು ಮುಂದೆ ಹಾಕಿರುವುದಷ್ಟೇ. ಹಾಗಂತ ಯಶಸ್ಸೇ ಆಗಿಲ್ಲ ಅಂತ ಅಲ್ಲ. ಚಂದ್ರನ ಸುತ್ತ ಅರ್ಬಿಟರ್ ಸುತ್ತುತ್ತದೆ, ಅಲ್ಲಿನ ಫೋಟೋಗಳು ಇಸ್ರೋ ತಲಪುತ್ತದೆ. ಆದರೆ ವಿಕ್ರಮ ಮಾತ್ರಾ ಸಂಪರ್ಕ ಕಡಿದುಕೊಂಡಿದೆಯಷ್ಟೇ. ಇಸ್ರೋ ವಿಜ್ಞಾನಿಗಳ ಪರ ಭಾರತ ಇದೆ. ಇಡೀ ರಾತ್ರಿ ಕಾತರದಿಂದ ಕಾಯುತ್ತಿದ್ದ ಹಲವಾರು ಮನಸ್ಸುಗಳು ವಿಜ್ಞಾನಿಗಳ ಜೊತೆಗಿದೆ.
ಎಲ್ಲವೂ ಸರಿಯಾಗಿದ್ದರೆ ಇದೇ ಜಾಗದಲ್ಲಿ “ವಿಶ್ವದಲ್ಲಿ ಭಾರತದ ವಿಕ್ರಮ” ಎನ್ನುವ ಶೀರ್ಷಿಕೆ ಇರಬೇಕಾಗಿತ್ತು. ಆದರೆ ಇದನ್ನು ಕೆಲ ಕಾಲ ಮುಂದೆ ಹಾಕಬೇಕಾಗಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಾ ಭಾರತವು ಅಮೃತ ಸಂತಾನ , ಬಿಡೆವು ಎಂದು ಹೇಳುತ್ತಾ ವಿಜ್ಞಾನಿಗಳ ಬೆನ್ನು ತಟ್ಟಿದ್ದಾರೆ. ಹೌದು, ಚಂದ್ರಯಾನ-2 ತಾಂತ್ರಿಕ ಕಾರಣದಿಂದ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಉದ್ದೇಶ ಈಡೇರಿಲ್ಲ, ಆದರೆ ಚಂದ್ರನ ಫೋಟೊ ಆರ್ಬಿಟ್ ಕಳುಹಿಸುತ್ತಲೇ ಇರುತ್ತದೆ. ಹಾಗೆ ನೋಡಿದರೆ ಭಾರತದ ವಿಜ್ಞಾನಿಗಳು, ಇಸ್ರೋ ತೆಗೆದುಕೊಂಡಿರು ರಿಸ್ಕ್ ದೊಡ್ಡದೇ ಇತ್ತು. ಏಕೆಂದರೆ ಚಂದ್ರನ ಮೇಲೆ ನೌಕೆಯ ಸಾಫ್ಟ್ ಲ್ಯಾಂಡಿಂಗ್ ನ ಸಕ್ಸಸ್ ರೇಟ್ ಜಾಗತಿಕ ಮಟ್ಟದಲ್ಲಿ ಶೇ.37 ಅಷ್ಟೇ. ಹಾಗಿದ್ದರೂ ಇಸ್ರೋ ಇಲ್ಲಿ ಈ ಬಾಹ್ಯಾಕಾಶ ನೌಕೆಯಲ್ಲಿ ಬಳಕೆ ಮಾಡಲಾಗಿರುವ 4 ಥ್ರಸ್ಟರ್ ಗಳು ಹಾಗೂ ಸೆನ್ಸರ್ ಗಳು ಹೊಸತಾದ ತಂತ್ರಜ್ಞಾನ ಅಳವಡಿಕೆ ಮಾಡಿತ್ತು.
ಶನಿವಾರ ಬೆಳಗ್ಗಿನ ಜಾವ 1:37 ರ ವೇಳೆಗೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯನ್ನು ನಿರೀಕ್ಷೆಯಂತೆಯೇ ಆರಂಭಿಸಿತ್ತು. 1:49 ರ ವೇಳೆಗೆ ರಫ್ ಬ್ರೇಕಿಂಗ್ ಫೇಸ್ ಅನ್ನು ಯಶಸ್ವಿಯಾಗಿ ಪೂರೈಸಿದ ನಂತರ 2.04 ರ ಹೊತ್ತಿಗೆ ಆರ್ಬಿಟರ್ ನಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್ ನಿಂದ ಡೇಟಾಗಳನ್ನುಸ್ವೀಕರಿಸುವುದನ್ನು ಆರಂಭಿಸಿದ ನೌಕೆ, ಇದ್ದಕ್ಕಿದ್ದಂತೆ ಸಂವಹನ ಕಳೆದುಕೊಂಡಿತ್ತು. 2.10 ರ ಹೊತ್ತಿಗೆ ಲ್ಯಾಂಡರ್ ಸಂಪರ್ಕಕ್ಕೆ ಸಿಕ್ಕಿದರೂ ವಿಕ್ರಂ ಸಂಪರ್ಕಕ್ಕೆ ಸಿಗಲಿಲ್ಲ. ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವ ಮುನ್ಸೂಚನೆ ನೀಡಿತಾದರೂ, ಲ್ಯಾಂಡಿಂಗ್ ಗೆ ಇನ್ನೂ ಕೇವಲ 2.1 ಕಿಮೀ ಅಂತರವಿದ್ದಾಗ ಸಿಗ್ನಲ್ ಕಡಿತವಾಯಿತು. ಹೀಗಾಗಿ ನಿಯಂತ್ರಣ ಕೊಠಡಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…