ಅಡಿಕೆಗೆ ಕೊಳೆರೋಗ ಬಾಧಿಸಿದೆ. ಕೆಲವು ಕಡೆಗಳಲ್ಲಿ ವಿಪರೀತವಾದ ಕೊಳೆರೋಗ ಕಂಡುಬಂದಿದೆ. ಸುಳ್ಯ , ಪುತ್ತೂರು, ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೊಳೆರೋಗ ಈಗ ಸದ್ದು ಮಾಡುತ್ತಿದೆ. ಎರಡು ಬಾರಿ ಔಷಧಿ ಸಿಂಪಡಣೆ ನಂತರವೂ ಕೊಳೆರೋಗ ಕಂಡುಬಂದಿರುವುದು ಬೆಳೆಗಾರಿಗೆ ಆತಂಕ ಮೂಡಿಸಿದೆ.
ಅಡಿಕೆಗೆ ಈ ಬಾರಿಯೂ ಕೊಳೆರೋಗ ಬಾಧಿಸಿದೆ. ಕಳೆದ ವರ್ಷ ಭಾರೀ ಮಳೆಯ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರು ಕಂಗಾಲಾಗಿದ್ದರು. ಶೇ.70 ರಷ್ಟು ಅಡಿಕೆ ನಾಶವಾಗಿತ್ತು. ಅದರ ಹೊಡೆತದಿಂದ ಹೊರಬರುವ ಹೊತ್ತಿಗೆ ಈ ಬಾರಿಯೂ ಭಾರೀ ಮಳೆಯ ಕಾರಣದಿಂದ ಮತ್ತೆ ಕೊಳೆರೋಗ ವಕ್ಕರಿಸಿದೆ. ಹಲವು ತೋಟಗಳಲ್ಲಿ ಅಡಿಕೆ ಉದುರುತ್ತಿದೆ. ಬೆಳೆಗಾರರಿಗೆ ಹೊಡೆತದ ಮೇಲೆ ಹೊಡೆತ ಬಿದ್ದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಇದೆ. ಹಾಗಿದ್ದರೂ ಒಮ್ಮೆಲೇ ಸುರಿದ ಭಾರೀ ಮಳೆ ಅಡಿಕೆಗೆ ಸಂಕಷ್ಟ ತಂದಿದೆ. ಕಳೆದ ಬಾರಿಯ ರೋಗ ಬಾಧೆಗೆ ತತ್ತರಿಸಿದ್ದ ಅಡಿಕೆ ಮರಕ್ಕೆ ಈ ಬಾರಿಯ ಮಳೆಗೆ ತಕ್ಷಣವೇ ಶೀಲೀಂದ್ರವು ಚುರುಕಾಗಿ ಕೊಳೆರೋಗಕ್ಕೆ ಕಾರಣವಾಗಿದೆ. ಪುತ್ತೂರು ತಾಲೂಕಿನ ಹಲವು ಕಡೆಗಳಲ್ಲಿ ಕೊಳೆರೋಗ ಕಂಡುಬಂದರೆ ಸುಳ್ಯ ತಾಲೂಕಿನ ಬೆಳ್ಳಾರೆ, ಪಂಜ ಸೇರಿದಂತೆ ವಿವಿಧ ಕಡೆಯ ಬೆಳೆಗಾರರು ಕೊಳೆರೋಗ ಇರುವ ಬಗ್ಗೆ ಹೇಳುತ್ತಾರೆ. ಎರಡು ಬಾರಿ ಔಷಧಿ ಸಿಂಪಡನೆ ನಂತರವೂ ಕೊಳೆರೋಗ ಬಾಧಿಸಿಸುತ್ತಿದೆ ಎಂದು ಬೆಳೆಗಾರರು ಅಳಲು ತೋಡುತ್ತಾರೆ. ಹೀಗಾಗಿ ಏನೂ ಮಾಡಲಾಗದೆ ಕೈಚೆಲ್ಲಿ ಕುಳಿತುಕಜೊಳ್ಳಬೇಕಾದ ಸ್ಥಿತಿ ಇದೆ. ಸಪ್ಟಂಬರ್ ವರೆಗೆ ಕೊಳೆರೋಗದ ಲಕ್ಷಣ ಇರಲಿಲ್ಲ. ನಂತರ ಕಾಣಿಸಿದೆ ಎಂದು ಕೃಷಿಕ ಜಯಗೋವಿಂದ ಹೇಳಿದರೆ ಪುತ್ತೂರು ತಾಲೂಕಿನ ಕರ್ನೂರಿನ ಸತೀಶ್ ಅವರು ಹೇಳುವಂತೆ ಕಳೆದ ವರ್ಷದಷ್ಟೇ ಈ ಬಾರಿ ಕೊಳೆರೋಗ ಬಾಧಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಾಗಿದೆ ಎನ್ನುತ್ತಾರೆ.
ಹಾಗೆ ನೋಡಿದರೆ ಕೊನೆಯ ಈ ಅವಧಿಯಲ್ಲಿ ಮಳೆ ಹೆಚ್ಚಾಗಿದೆ. ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರ ಮಾಹಿತಿ ಪ್ರಕಾರ ಪೂರ್ವಫಲ್ಗುಣಿ ಅಥವಾ ಹುಬ್ಬಾ ನಕ್ಷತ್ರ (ಆಗಸ್ಟ್ 31 – ಸೆಪ್ಟೆಂಬರ್ 12) ದ ಅವಧಿಯಲ್ಲಿ ದಾಖಲಾದ ಮಳೆ = 813 ಮಿ.ಮೀ. ಕಳೆದ ವರ್ಷ ಕೇವಲ 52 ಮಿ.ಮೀ.
ಸರಾಸರಿ (ಮಿ.ಮೀ.ಗಳಲ್ಲಿ)
1976 – 2000 = 196
2001 – 2019 = 269
1976 – 2019 = 228
ಗರಿಷ್ಟ = 813 ( 2019 )
ದ್ವಿತೀಯ ಗರಿಷ್ಟ=613 ( 2007 )
ಕನಿಷ್ಟ =028 (1991 )
ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ 158 ಮಿ.ಮೀ (8/9/2019)
ತಕ್ಷಣವೇ ಗಮನಹರಿಸುವುದು ಸೂಕ್ತ:
ಆಡಳಿತವು ತಕ್ಷಣವೇ ಬೆಳೆಗಾರರ ಸಂಕಷ್ಟದ ಕಡೆಗೆ ಗಮನಹರಿಸಬೇಕಿದೆ. ಏಕೆಂದರೆ ಸತತ ಎರಡು ವರ್ಷ ಕೊಳೆರೋಗದಿಂದ ಅಡಿಕೆ ನಾಶವಾಗಿದೆ. ಅಡಿಕೆ ಬೆಳೆಗಾರರಿಗೆ ಇಡೀ ವರ್ಷದ ಆದಾಯವೂ ಇದೇ ಆಗಿದೆ. ಹೀಗಾಗಿ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಏನು ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಏಕೆಂದರೆ ಸತತ ಎರಡು ವರ್ಷಗಳಿಂದ ಅಡಿಕೆಗೆ ವ್ಯಾಪಕವಾಗಿ ಕೊಳೆರೊಗ ಬಾಧಿಸಿದೆ.
Advertisement
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…