ಊರುಬೈಲು ಸೇತುವೆ ತಾತ್ಕಾಲಿಕವಾಗಿ ದುರಸ್ತಿ

July 25, 2019
11:21 AM

ಸಂಪಾಜೆ : ಕಳೆದ ವರ್ಷದ ಕೊಡಗಿನ ಭೀಕರ ಜಲಪ್ರಳಯದಲ್ಲಿ ಹಾನಿಗೀಡಾದ ಊರುಬೈಲು ಸೇತುವೆಯನ್ನು ತಾತ್ಕಾಲಿಕವಾಗಿ ಜಿಲ್ಲಾಡಳಿತದ ವತಿಯಿಂದ ದುರಸ್ತಿಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವರ್ಷವೂ  ಮತ್ತೆ  ಸುರಿದ ಮಳೆಗೆ ಸೇತುವೆ ಕೊಚ್ಚಿಹೋಗಿತ್ತು. ಇದೀಗ ಸ್ಥಳೀಯರು ತಾತ್ಕಾಲಿಕವಾಗಿ  ದುರಸ್ತಿ ಮಾಡಿದ್ದಾರೆ.

ಮೊನ್ನೆ ದಿನ ಸುರಿದ ಭಾರೀ ಮಳೆಯಿಂದಾಗಿ ಮತ್ತೊಮ್ಮೆ ಊರುಬೈಲು ಸೇತುವೆಯಲ್ಲಿ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದಿದ್ದು, ಸೇತುವೆ ಭಾಗಶ ಹಾನಿಗೀಡಾಗಿತ್ತು.
ಈ ಹಿನ್ನೆಲೆಯಲ್ಲಿ  ಸ್ಥಳೀಯ ನಾಯಕರಾದ ಸಂಪಾಜೆ ಪಯಸ್ವಿನಿ ಕೃ ಪ ಸ ಸಂಘದ ಅದ್ಯಕ್ಷ ಯನ್.ಅನಂತ್ ಅವರ ಮುಂದಾಳತ್ವ ದಲ್ಲಿ ಸ್ಥಳೀಯ ಯುವಕರು ಮತ್ತು ಶ್ರೀ ಭಗವಾನ್ ಸಂಘದ ಸದಸ್ಯರು ಶ್ರಮದಾನ ಮಾಡಿ, ಸೇತುವೆಯನ್ನು ದುರಸ್ತಿಗೊಳಿಸಿ ,ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಈ ಕಾರ್ಯದಲ್ಲಿ ಚೆಂಬು ಗ್ರಾಮ ಪಂಚಾಯತ್ ಸದಸ್ಯ ಮನೋಹರ್.ಯನ್.ಸಿ ಪಂಚಾಯತ್ ವತಿಯಿಂದ ಜೆಸಿಬಿ ವ್ಯವಸ್ಥೆ ಮಾಡಿಕೊಡುವ ಮೂಲಕ ಸಹಕರಿಸಿದರು.  ಇದರಿಂದಾಗಿ ಶಾಲಾಮಕ್ಕಳು,ಊರವರು ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಕಳೆದ ಕೆಲವು ದಿನಗಳಿಂದ ಮಡಿಕೇರಿ, ಸಂಪಾಜೆ ಭಾಗಶ: ಪ್ರದೇಶ, ಮೊಣ್ಣಂಗೇರಿ ಪ್ರದೇಶದಲ್ಲಿ ಉತ್ತಮ ಮಳೆಯಾಗಿತ್ತು. ಇದೇ ಸಂದರ್ಭ ಅಲ್ಲಲ್ಲಿ ಕುಸಿತ ಹಾಗೂ ಗುಡ್ಡದಲ್ಲಿದ್ದ ಕಳೆದ ವರ್ಷ ಹಾನಿಗೀಡಾದ ಪ್ರದೇಶದ ಮಣ್ಣು ಹಾಗೂ ಮರಗಳು  ನೀರಿನೊಂದಿಗೆ  ಕೊಚ್ಚಿಕೊಂಡು ಬಂದಿದ್ದವು.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?
September 30, 2026
7:21 AM
by: ದ ರೂರಲ್ ಮಿರರ್.ಕಾಂ
ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?
September 29, 2026
11:09 PM
by: ದ ರೂರಲ್ ಮಿರರ್.ಕಾಂ
ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?
September 29, 2026
10:23 PM
by: ದ ರೂರಲ್ ಮಿರರ್.ಕಾಂ
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು
September 29, 2026
9:48 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror