ಸುಳ್ಯ: ಎಲ್ಲೆಡೆಯೂ ಒಂದೇ ಮಾತು…!. “ಲಾಕ್ಡೌನ್ ಸಡಿಲಿಕೆ ಪರಿಣಾಮ ಏನು…? ” ಎಲ್ಲರದೂ ಒಂದೇ ಉತ್ತರ.. ” ಕೆಲವೇ ದಿನಗಳಲ್ಲಿ ಸೀಲ್ ಡೌನ್ ಖಚಿತ…! ” . ಹಾಗಿದ್ದರೆ ಪರಿಹಾರವೇನು….? . ಇದೊಂದು ಪಂಚಾಯತ್ ಪುಟ್ಟ ಹೆಜ್ಜೆ ಇರಿಸಿದೆ. ಇಲ್ಲಿನ ವರ್ತಕರೂ ಕೈಜೋಡಿಸಿದ್ದಾರೆ. ತಮ್ಮೂರಿನ ಜನರಿಗಾಗಿ. ಈ ಹೆಜ್ಜೆ ಎಲ್ಲೆಡೆಗೂ ಮಾದರಿಯೂ ಹೌದು.
ಸುಳ್ಯ ತಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ತಕರೆಲ್ಲರೂ ಈಗ ನಿರ್ಧಾರಕ್ಕೆ ಬಂದಿದ್ದಾರೆ, ಮಂಗಳವಾರದಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಅಂಗಡಿ ತೆರೆದು ವ್ಯವಹಾರ ನಡೆಸುವುದಾಗಿ ತೀರ್ಮಾನಿಸಿದ್ದಾರೆ. 1 ಗಂಟೆಗೆ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ತೀರ್ಮಾನಿಸಲಾಗಿದೆ.
ಸರಕಾರದ ಆದೇಶದಂತೆ ಲಾಕ್ಡೌನ್ ಸಡಿಲಿಕೆಯಾಗಿದೆ. ಈ ಪ್ರಕಾರ ವಾಹನ ಓಡಾಟ ಸಹಿತ ಅಂಗಡಿಗಳು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ತೆರೆಯಬಹುದು. ಆದರೆ ಸಾಮಾಜಿಕ ಅಂತರ ಸಹಿತ ಎಲ್ಲಾ ನಿಯಮಗಳು ಕಡ್ಡಾಯ. ಹಾಗೆಂದು ಲಾಕ್ಡೌನ್ ನಿಯಮ ಸಡಿಲಿಕೆ ಸರಕಾರ ಮಾಡಿದರೂ ಎಲ್ಲರೂ ಎಚ್ಚರ ಅಗತ್ಯ. ಕೊರೊನಾ ವೈರಸ್ ನಿವಾರಣೆಯಾಗಿಲ್ಲ. ಇದುವರೆಗೆ ಕಟ್ಟುನಿಟ್ಟಾಗಿ ಲಾಕ್ಡೌನ್ ನಿಯಮ ಪಾಲನೆ ಮಾಡಿ ಇದೀಗ ಸಡಿಲಿಕೆಯೇ ಮಾರಕವಾಗಬಾರದು ಎಂದು ಗುತ್ತಿಗಾರು ಗ್ರಾಮ ಪಂಚಾಯತ್ ಆಡಳಿತ ಯೋಚನೆ ಮಾಡಿತು. ಈ ನೆಲೆಯಲ್ಲಿ ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮಗಳನ್ನು ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳುವ ದೃಷ್ಟಿಯಿಂದ ಅಂಗಡಿಗಳ ಸಮಯವನ್ನು ಈ ಮೊದಲಿನಂತೆ ನಿರ್ಭಂಧಿಸುವ ಬಗ್ಗೆ ಪಂಚಾಯತ್ ವ್ಯಾಪ್ತಿಯ ವರ್ತಕರ ಸಭೆಯನ್ನು ಗ್ರಾಮಪಂಚಾಯತ್ ಸಭಾಭವನದಲ್ಲಿ ಕರೆಯಲಾಗಿತ್ತು.
ಈ ಸಭೆಯಲ್ಲಿ ವರ್ತಕರ ಅಭಿಪ್ರಾಯದಂತೆ ಅಂಗಡಿಗಳನ್ನು ಮಂಗಳವಾರದಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಅಂಗಡಿ ತೆರೆದು ವ್ಯವಹಾರ ನಡೆಸುವುದಾಗಿ ತೀರ್ಮಾನಿಸಿದ್ದಾರೆ. 1 ಗಂಟೆಗೆ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ತೀರ್ಮಾನಿಸಲಾಗಿದೆ.
ವರ್ತಕರ ಈ ನಡೆ ಈಗ ಎಲ್ಲೆಡೆಗೂ ಮಾದರಿಯಾಗಿದೆ. ಸರಕಾರ ಲಾಕ್ಡೌನ್ ನಿಯಮ ಸಡಿಲಿಕೆ ಮಾಡಿದೆ. ಅದು ಅನಿವಾರ್ಯವೂ ಹೌದು. ಆದರೆ ಗ್ರಾಮದ ಜನರ ರಕ್ಷಣೆಯ ದೃಷ್ಟಿಯಿಂದ ಆಯಾ ಗ್ರಾಮ ಪಂಚಾಯತ್ ಗಳು ಮುಂಜಾಗ್ರತೆ ವಹಿಸಿದರೆ ಕೊರೊನಾ ವೈರಸ್ ನಿಂದ ಎಲ್ಲರೂ ಪಾರಾಗಬಹುದಾಗಿದೆ. ಈ ನಿಟ್ಟಿನಲ್ಲಿ ಯೋಚನೆ ನಡೆಯಬೇಕಿದೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.